
ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ಜನರ ಆರಾಧ್ಯದೈವ ಕಳಸೇಶ್ವರನ ರಥೋತ್ಸವ ಸಂಪ್ರದಾಯಬದ್ಧವಾಗಿ ನೆರವೇರಿತು. ಕಳೆದ ವಾರದಿಂದಲೇ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ರಥೋತ್ಸವಕ್ಕೆ 2 ದಿನಗಳ ಮುನ್ನವೇ ಪಟ್ಟಣದ ರಥಬೀದಿಯಲ್ಲಿ ಜಾತ್ರೆಯ ಸರಕು ಮಾರುವ ಅಂಗಡಿಗಳು ಬೀಡು ಬಿಟ್ಟಿದ್ದವು.
ಇದನ್ನೂ ಓದಿ; ರೈತ ಸಿರಿ ಯೋಜನೆ; ಪ್ರತಿ ಹೆಕ್ಟೇರ್ ಗೆ 10,000 ಪ್ರೋತ್ಸಾಹ ಧನ; ಯೋಜನೆಯ ಉದ್ದೇಶ, ಅರ್ಹತೆ, ಬೇಕಾಗುವ ದಾಖಲೆ ಏನು?

ದಕ್ಷಿಣಕಾಶಿ ಎಂದೇ ಕರೆಸಿಕೊಳ್ಳೋ ಕಳಸದ ಕಳಸೇಶ್ವರ ಸ್ವಾಮಿ ಜಾತ್ರೆಯಲ್ಲಿ ಪೊಲೀಸರೇ ಬೆಟ್ಟಿಂಗ್ ದಂಧೆ ಆಡಿಸಿದ್ರಾ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ; ಆನೆ ದಾಳಿ: ಕೇರಳ ವ್ಯಕ್ತಿಯ ಸಾವಿಗೆ ರಾಜ್ಯದಿಂದ ಪರಿಹಾರ; ರಾಜ್ಯ ಸರ್ಕಾರ ಮಾನ-ಮರ್ಯಾದೆ ಎಲ್ಲ ಬಿಟ್ಟಿದೆ
ಕಳಸೇಶ್ವರ ಸ್ವಾಮಿ ಜಾತ್ರೆಯ ವೇಳೆ ಜೂಜುಕೋರರು ರಾಜಾರೋಷವಾಗಿ ಜೂಜು ಆಡಿಸಿದ್ದಾರೆ. ಜೂಜು ನಡೆಯುವ ಸ್ಥಳದಲ್ಲೇ ಪೊಲೀಸರು ಓಡಾಡಿದರು ಕೂಡ ಪ್ರಶ್ನಿಸಿಲ್ಲ. ಜೂಜು ಕಾನೂನು ಬಾಹಿರ ಅಲ್ಲವೇ? ಯಾಕೆ ಪ್ರಶ್ನಿಸಿಲ್ಲ ಪೊಲೀಸರೇ ಜೂಜು ಆಡಿಸಿದ್ರಾ ಎಂದು ಪೊಲೀಸರ ವಿರುದ್ಧ ಸ್ಥಳಿಯರ ಗಂಭೀರ ಆರೋಪ ಮಾಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯ್ತಿ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರನ್ನು 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿನ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರಾದ ಶಿವಾಕರ್ ಎಸ್ ಶೆಟ್ಟಿಯವರು ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಿ ಸದಸ್ಯತ್ವ ವಜಾಗೊಳಿಸಲಾಗಿದೆ.
ಇದನ್ನೂ ಓದಿ; ಕರ್ನಾಟಕ ಸರ್ಕಾರದಿಂದ ಲ್ಯಾಪ್ ಟಾಪ್ ಭಾಗ್ಯ; ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಸಲ್ಲಿಸಿ
34 ಲಕ್ಷ ಹಣ ದುರಪಯೋಗ!
ಶಿವಾಕರ್ ಎಸ್ ಶೆಟ್ಟಿ ಶಾನುವಳ್ಳಿ ಗ್ರಾ.ಪಂ ಅಧ್ಯಕ್ಷರಾಗಿದ್ದ ಸಮಯದಲ್ಲಿ 2016-17ನೇ ಸಾಲಿನಲ್ಲಿ ಕೆಲ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸದೇ, ಎಂ ಬಿ ದಾಖಲಿಸದೇ ಸರ್ಕಾರದ ಹಣವನ್ನು ಚೆಕ್ ಮೂಲಕ ನಗದೀಕರಿಸಿದ ಆರೋಪವನ್ನು ಎದುರಿಸುತ್ತಿದ್ದರು. ಇದೀಗ ಕರ್ತವ್ಯ ಲೋಪ ಮತ್ತು ಸುಮಾರು 34 ಲಕ್ಷ ರೂ. ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ; ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ; 59 ಜನರ ವಿರುದ್ಧ FIR ದಾಖಲು













