ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ ನಡೆಸಿ 9 ಜನ ಅಸ್ಸಾಮಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ರಾಜು ಡಿ, ಮಧು ಕೆ. ಜಿ, ನವೀನ್ ಕುಮಾರ, ಪ್ರದೀಪ್ ಕೆ. ಆರ್, ಬಸವರಾಜು, ಕಿರಣ್, ಪರಮೇಶ, ಪುನೀತ್ ಸಿ. ಆರ್, ಜ್ಞಾನೇಶ್ ಡಿ ಕೆ ಬಂಧಿತ ಆರೋಪಿಗಳು.
ಗ್ರಾಮಾಂತರ ಪೊಲೀಸ್ ಠಾಣಾ ಕದ್ರಿಬಿದ್ರಿ ವ್ಯಾಪ್ತಿಯ ಅರಣ್ಯದ ಕಡೆ ಹೋಗುವ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಅಂದರ್- ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ನಡೆಸಿ 1,14,870 ನಗದು, 52 ಇಸ್ಪೀಟ್ ಎಲೆ, ಕಪ್ಪು ಬಣ್ಣದ ಟಾರ್ಪಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!
ಇನ್ನು ಈ ಕಾರ್ಯಾಚಾರಣೆಯಲ್ಲಿ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಉಪಾಧೀಕ್ಷಕರು ಶೈಲೆಂದ್ರ ಅವರ ಮಾರ್ಗದರ್ಶನದಲ್ಲಿ ಸಚಿನ್ ಕುಮಾರ, ರಾಜೇಶ್, ರಘುನಾಥ, ಸಿಬ್ಬಂದಿಗಳಾದ ವಿನಾಯಕ ಹೆಚ್.ಸಿ-68, ಲಕ್ಷ್ಮಣ ಸಿಪಿಸಿ-285, ಸಿಪಿಸಿ-96 ಕಿರಣ, ಶಶಿಧರ ಜೆ ಸಿ ಸಿಪಿಸಿ-428, ಲೋಹಿತ್ ಇದ್ದರು.
ಇದನ್ನೂ ಓದಿ: ಸರ್ಕಾರದಿಂದ ಗ್ರಾಮ ಪಂಚಾಯತ್ಗಳಿಗೆ ಹೊಸ ನಿಯಮ ಜಾರಿ; ಏನದು ನಿಯಮ?












