ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಲ್ಲಿ ನಡೆದ ಸೌಜನ್ಯ ಸೇವಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಕೊಪ್ಪದ ನಾಲ್ಕು ಶಾಲೆಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಕೊಪ್ಪ ತಾಲೂಕಿನ ಶಾಲೆಗಳಾದ ತೋಮರಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಳಪೇಟೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣಕೆರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೇಮನೆ, ಸರ್ಕಾರಿ ಪ್ರೌಢಶಾಲೆ ಲೋಕನಾಥಪುರ ಈ ಶಾಲೆಗಳಿಗೆ ಬೆಂಗಳೂರಿನ ಸೌಜನ್ಯ ಸೇವಾಶ್ರಮ ಟ್ರಸ್ಟ್ ಪ್ರತಿವರ್ಷ ಕಲಿಕಾ ಸಾಮಗ್ರಿ ಮತ್ತು ಭೌತಿಕ ಸೌಲಭ್ಯಗಳ ಸಹಕಾರ ನೀಡುತ್ತಿದ್ದು, ಹೀಗಾಗಿ ಬೆಂಗಳೂರಿನಲ್ಲಿ ನಡೆದ ಸೌಜನ್ಯ ಸೇವಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಈ ನಾಲ್ಕು ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ.
ಕೆಳಪೇಟೆ ಶಾಲೆಯ ದೇಶಪ್ರೇಮ ಬಿಂಬಿಸುವ ನೃತ್ಯ, ಸಣ್ಣಕೆರೆ ಶಾಲೆಯ ಯಕ್ಷಗಾನ ನೃತ್ಯ, ಆಲೇಮನೆ ಶಾಲೆಯ ಮೈಮ್ ಪ್ರದರ್ಶನ, ಲೋಕನಾಥಪುರ ಪ್ರೌಢಶಾಲೆಯ ಮಕ್ಕಳ ಚಿತ್ರಕಲಾ ಪ್ರದರ್ಶನಗಳು ಸಭಿಕರ ಪ್ರಶಂಸೆಗೆ ಪಾತ್ರವಾದವು. ತಾಲ್ಲೂಕಿನ ನಾಲ್ಕು ಶಾಲೆಗಳಿಂದ ಒಟ್ಟು 23 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ಸೌಜನ್ಯ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಇದನ್ನೂ ಓದಿ: ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!; ಶೇ.90 ರಂತೆ ಸಹಾಯಧನ
ಸೌಜನ್ಯ ಟ್ರಸ್ಟ್ ನ ರಂಗರಾಜನ್ ಮಾತನಾಡಿ, ಕೊಪ್ಪದ ಸರ್ಕಾರಿ ಶಾಲೆಗಳಿಗೆ ತಾವು ನೀಡಿದ ಸಹಕಾರದಿಂದ ಮಕ್ಕಳ ದಾಖಲಾತಿ ಉತ್ತಮಗೊಂಡದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಸುತ, ಸುಂದರ್ ರಾಜನ್, ಕಣ್ಣನ್ ಮುಂತಾದವರು ಸಂಸ್ಥೆಯ ಪರವಾಗಿ ಕೊಪ್ಪ ತಾಲ್ಲೂಕಿನ ತಂಡವನ್ನು ಅಭಿನಂದಿಸಿದರು. ಕೊಪ್ಪ ತಾಲ್ಲೂಕಿನ ಶಾಲೆಗಳ ವತಿಯಿಂದ ಸೌಜನ್ಯ ಟ್ರಸ್ಟ್ ಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, 21,413 ಹುದ್ದೆ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ












