
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಲ್ಲಿ ಒಂದೇ ವರ್ಷಕ್ಕೆ ಬರೊಬ್ಬರಿ 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಬಂದ್ ಆಗುತ್ತಲೆ ಇದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಎಂಬ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಕನ್ನಡ ಶಾಲೆಗಳನ್ನ ಉಳಿಸಿಕೊಳ್ಳೋದಕ್ಕೆ ಆಗುತ್ತಿಲ್ಲ.
ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವುದರಿಂದಲೇ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬಂದಿದೆ ಅಂತಾ ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಬೇಕು. ಅಕ್ಕಿ, ಬಸ್ಸು, ಕರೆಂಟ್, ದುಡ್ಡು ಎಲ್ಲಾ ಬೇಕು. ಆದರೆ ಸರ್ಕಾರಿ ಶಾಲೆ ಮಾತ್ರ ಬೇಡ. ಖಾಸಗಿ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಮಕ್ಕಳು ಓದುತ್ತಿದ್ದಾರೆ ಅಂದರೆ ಹೆತ್ತವರಿಗೆ ಡಿಗ್ನಿಟಿ. ಪೋಷಕರು ತಮ್ಮ ಡಿಗ್ನಿಟಿಗಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದ್ದಾರೆ ಎಂದು ಸ್ಥಳೀಯರು ಪೋಷಕರು ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಫಿನಾಡಲ್ಲಿ ಬಂದ್ ಆದ ಸರ್ಕಾರಿ ಶಾಲೆಗಳ ತಾಲೂಕುವಾರು ವಿವರ:
ಚಿಕ್ಕಮಗಳೂರು ತಾಲೂಕು- 5
ಕಡೂರು – 4
ತರೀಕೆರೆ – 2
ಮೂಡಿಗೆರೆ – 2
ಎನ್.ಆರ್.ಪುರ – 2
ಕೊಪ್ಪ – 2
ಶೃಂಗೇರಿ – 4
ಇನ್ನು ಕಳೆದ ಏಳೆಂಟು ವರ್ಷದಲ್ಲಿ 50 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಾಶ್ವತವಾಗಿ ಬೀಗ ಬಿದ್ದಿದೆ. ಸರ್ಕಾರಿ ಶಾಲೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದು, ಮತ್ತೊಂದೆಡೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡೋದು. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಸರ್ಕಾರಗಳ ನಡೆಯಿಂದಲೇ ಸರ್ಕಾರಿ ಶಾಲೆಗಳು ಬೀಗ ಕಾಣುತ್ತಿವೆಯೋ ಎಂದು ಸಾರ್ವಜನಿಕರಿಗೆ ಸರ್ಕಾರದ ಮೇಲೆ ಅನುಮಾನ ಮೂಡುತ್ತಿದೆ. ಇನ್ನಾದರೂ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಾ ಕಾದುನೋಡಬೇಕಿದೆ.

ಎನ್.ಆರ್ ಪುರ: ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್ ಪುರ ತಾಲೂಕಿನ ಹಿಳುವಳ್ಳಿ ಗ್ರಾಮದ ಮಧು ಭಂಡಾರಿ (38) ಬಂಧಿತ ಆರೋಪಿ.
ಬಂಧಿತ ಆರೋಪಿಗಳಿಂದ 3000/- ರೂ ನಗದು, ಕಳ್ಳತನದ ಹಣದಿಂದ ತೆಗೆದುಕೊಂಡಿದ್ದ 8500 ರೂ ಬೆಲೆಯ ವಿವೋ ಕಂಪನಿಯ ಒಂದು ಮೊಬೈಲ್, 11000/- ರೂ ಮೌಲ್ಯದ 2 ಗ್ರಾಂ 200 ಮೀಲಿಯ ಚಿನ್ನದ ತಾಳಿ ಸರದ ಕೊಂಡಿಯನ್ನು ವಶಪಡಿಸಿಕೋಂಡಿದ್ದಾರೆ.













