ಕಳಸ: (ನ್ಯೂಸ್ ಮಲ್ನಾಡ್ ವರದಿ) ಕುದುರೆಮುಖ ವನ್ಯಜೀವಿ ವಲಯದ ತುಂಗಭದ್ರಾ ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಭತ್ತದರಾಶಿ ಗುಡ್ಡದಲ್ಲಿ ಬೆಂಕಿ ಹಚ್ಚುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ದೇವರಾಜ, ಗಗನ್, ರಕ್ಷಣ್, ಉಮೇಶ ಬಂಧಿತ ಆರೋಪಿಗಳು.
ಇದನ್ನೂ ಓದಿ: ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ ಜಾರಿ; ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ!

ಈ ನಾಲ್ಕು ಜನ ಆರೋಪಿಗಳ ವಿರುದ್ಧ ವನ್ಯಜೀವಿ ಸಂರ್ಷಣಾ ಕಾಯ್ದೆ 1972 ಕಾಯ್ದೆಯಡಿ ಬಂಧಿಸಿ ಮೂಡಿಗೆರೆ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನು ಈ ಕಾರ್ಯಾಚಾರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವರಾಮ್ ಬಾಬು ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜೆ.ಡಿ ದಿನೇಶ್, ವಲಯ ಅರಣ್ಯಾಧಿಕಾರಿಗಳು ಚೇತನ್ ಹೆಚ್.ಪಿ ಇವರ ಮಾರ್ಗದರ್ಶನದಂತೆ ಸವಣೂರ ಉಪ ವಲಯ ಅರಣ್ಯಾಧಿಕಾರಿ ಹರೀಶ್ ವಿ, ಗಸ್ತು ವನಪಾಲಕ ಅಯ್ಯನಗೌಡ, ಪ್ರಸಾದ್ ಕುಮಾರ್ ಪಿ, ಗೋಪಾಲ ಮಾಗುಂಡಪ್ಪ ಅಂಬಿಗೇರ, ಅರಣ್ಯ ವೀಕ್ಷಕರು ನಿತೀಶ್ ಹಾಗೂ ಗಣೇಶ್ ಕೆ.ಎಸ್, ಪ್ರದೀಪ, ಪ್ರಶಾಂತ, ವಿಜಯಕುಮಾರ್ ಇದ್ದರು.
ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್












