ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ಲಾಸ್ಟಿಕ್ ಸೇವನೆಯಿಂದ ಬಿಡಾಡಿ ಹಸು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ನಡೆದಿದೆ.
ಇದನ್ನೂ ಓದಿ: ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ ಜಾರಿ; ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ!

ಕಳೆದ ಹಲವಾರು ವರ್ಷಗಳಿಂದ ಓಡಾಡುತ್ತಿದ್ದ ಬಿಡಾಡಿ ಹಸು ಅತೀವ ಪ್ಲಾಸ್ಟಿಕ್ ಸೇವನೆಯಿಂದ ನಿನ್ನೆ ಮೃತಪಟ್ಟಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಮನಹಳ್ಳಿ ಸ್ಮಶಾನದಲ್ಲಿ ಪಶು ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿದ್ದ ಸುಮಾರು 80 ಕೆಜಿ ಗೂ ಹೆಚ್ಚು ಪ್ಲಾಸ್ಟಿಕ್ ಅನ್ನು ಹೊರ ತೆಗೆಯಲಾಯಿತು.
ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಂಬುಲೆನ್ಸ್ ಟ್ರಸ್ಟ್ ನ ಪುನೀತ್, ಸಂತೋಷ್ ಕೋಟ್ಯಾನ್, ಮಂಜುನಾಥ್ ಗಂಟೆ, ನಿಖಿಲ್, ವಿಶ್ವನಾಥ್, ಗೌತಮ್, ಬಜರಂಗದಳದ ಪ್ರಮುಖರಾದ ಶಾಮ್ ವಿ ಗೌಡ, ಆಕಾಶ್, ಸಮಿತ್, ಪಶು ವೈದ್ಯಾಧಿಕಾರಿಗಳಾದ ಡಾಕ್ಟರ್ ರಾಮಚಂದ್ರಗೌಡ ಹಾಗೂ ಸ್ಥಳೀಯರು ಇದ್ದರು.
ಇದನ್ನೂ ಓದಿ: ಸಹಕಾರಿ ಬ್ಯಾಂಕ್’ನಲ್ಲಿ ಜಾಬ್ ಆಫರ್; 21,400 ಸಂಬಳ












