ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತುಂಗಾನದಿಯಲ್ಲಿ ಮೀನುಗಳ ಮಾರಣ ಹೋಮ ನಡೆಯತ್ತಿದ್ದು, ಇದನ್ನು ತಡೆಯಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಡಿಸಿಸಿ ಬ್ಯಾಂಕ್ ನಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ, ಅರ್ಜಿ ಲಿಂಕ್ ಇಲ್ಲಿದೆ ನೋಡಿ

ಇತ್ತೀಚಿಗೆ ತುಂಗಾನದಿಯಲ್ಲಿ ಮೈಲುತುತ್ತ ಹಾಗೂ ಇತ್ಯಾದಿ ವಿಷಕಾರಕ ಪದಾರ್ಥಗಳನ್ನು ಹಾಕಿ ಮೀನುಗಳನ್ನು ಕೊಲ್ಲಲಾಗುತ್ತಿದ್ದು, ಇದು ಹಬ್ಬ ಹರಿದಿನಗಳಲ್ಲೇ ತಾಲ್ಲೂಕಿನ ನೆಮ್ಮಾರು ಸೇತುವೆ ಭಾಗದಿಂದ ಹಿಡಿದು ಕೊಚ್ಚವಳ್ಳಿ, ತೆಕ್ಕೂರು, ಗುಂಡ್ರೆ, ಶಂಕರಪುರ, ಪಟ್ಟಣದ ಬೈ ಪಾಸ್ ರಸ್ತೆ ಸಮೀಪ, ಮೆಣಸೆ ಸೇತುವೆ ಬಳಿ ಸೇರಿದಂತೆ ಮುಂತಾದಕಡೆ ಹಾಗೂ ಶೃಂಗೇರಿ ಗಡಿ ಭಾಗದ ನಾರ್ವೆ ಸಮೀಪದವರೆಗೂ ತುಂಗಾನದಿಯಲ್ಲಿ ಮೈಲುತುತ್ತವನ್ನು ಹಾಕಿ ಮೀನುಗಳನ್ನು ಕೊಲ್ಲಲಾಗುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.

ಶೃಂಗೇರಿ ಪಟ್ಟಣದ ಹೊರವಲಯದ ವಿದ್ಯಾರಣ್ಯಪುರ ಗ್ರಾ.ಪಂ ವ್ಯಾಪ್ತಿಯ ಸಂಕ್ಲಾಪುರ ಬಳಿ ಮೀನುಗಾರಿಕ ಇಲಾಖೆ ಇದ್ದು ಇಲ್ಲಿನ ಮೀನು ಸಾಕಾಣಿಕೆ ಕೇಂದ್ರದಲ್ಲಿ 7 ದೊಡ್ಡ ಕೊಳಗಳಿವೆ. ಅದರಲ್ಲಿ ಒಂದು ಕೊಳದಲ್ಲಿ ಮೀನುಗಳನ್ನು ಸಾಕಲಾಗುತ್ತಿದೆ. ಉಳಿದ ಕೊಳಗಳನ್ನು ಹಾಗೆಯೇ ಬಿಡಲಾಗಿದೆ.

ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ
ಮೀನುಗಾರಿಕಾ ಇಲಾಖೆಯಿಂದ ತುಂಗಾನದಿಯ ದಡದಲ್ಲಿ ಮೀನುಗಳನ್ನು ಸಂರಕ್ಷಿಸುವಂತೆ, ಮೀನುಗಳನ್ನು ಹಿಡಿಯಬಾರದು ಇದು ಅಕ್ಷಮ್ಯ ಅಪರಾದ ಎಂಬುದಾಗಿ ಬೋರ್ಡುಗಳನ್ನು ಹಾಕಲಾಗಿದ್ದರೂ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಪಟ್ಟಣದ ಬೈ ಪಾಸ್ ರಸ್ತೆಯ ತುಂಗಾನದಿಯ ದಡದಲ್ಲಿ ರಾತ್ರಿ ಹಗಲೆನ್ನದೆ ಮೀನಿನ ಬಲೆ ಹಾಕುವುದರ ಜೊತೆಗೆ ಅಲ್ಲಲ್ಲಿ ಪ್ಲಾಸ್ಟಿಕ್ ದಾರದ ಗಾಳವನ್ನು ಹಾಕಿ ಮೀನುಗಳನ್ನು ಹಿಡಿಯುತ್ತಿರುವುದು ಮಾಮುಲಿ ಕಸುಬಾಗಿದೆ.
ತುಂಗಾ ಉಳಿಸಿ, ನದಿಯ ಪಾವಿತ್ರತೆ ಕಾಪಾಡಿ ಎಂಬ ಆಂದೋಲನದ ಜೊತೆಗೆ ನದಿಯಲ್ಲಿರುವ ಜೀವಜಂತುಗಳನ್ನು ಸಂರಕ್ಷಿಸುವುದರತ್ತ ಗಮನಹರಿಸಬೇಕಿದೆ. ನದಿಯಲ್ಲಿರುವ ಮೀನಿನ ಸಂರಕ್ಷಣೆ, ಜಲಚರ ಪ್ರಾಣಿಗಳನ್ನು ರಕ್ಷಿಸಿದ್ದಲ್ಲಿ ತುಂಗಾನದಿ ಸ್ವಚ್ಚವಾಗಿ ಆಳವಾಗಿ ಹರಿಯುತ್ತಿರುತ್ತದೆ. ಈ ಬಗ್ಗೆ ಸರ್ಕಾರ ತುಂಗಾನದಿಯಲ್ಲಿರುವ ಜಲಚರ ಪ್ರಾಣಿಗಳನ್ನು ಸಂರಕ್ಷಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ ಶೇ.80% ರಷ್ಟು ಸಹಾಯಧನ!; ಈ ರೀತಿ ಅರ್ಜಿ ಸಲ್ಲಿಸಿ ಪಡೆಯಿರಿ
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಸಹನಾ, ತುಂಗಾನದಿಯ ಸಮುಚ್ಚಯದಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಹಾಕಲಾಗಿದೆ. ಮೀನುಗಳನ್ನು ಹಿಡಿಯದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ತುಂಗಾನದಿಯಲ್ಲಿರುವ ಮೀನುಗಳ ರಕ್ಷಣೆಗೆ ತಾಲ್ಲೂಕು ಆಡಳಿತ ಕಡಿವಾಣ ಹಾಕಬೇಕಾಗಿದೆ. ತುಂಗಾನದಿಯಲ್ಲಿರುವ ಮೀನುಗಳನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಮೀನುಗಳ ಸಂತತಿಯೇ ನಶಿಸಿಹೋದರೆ ಮುಂದೊಂದು ದಿನ ತುಂಗಾನದಿಗೂ ಸಂಚಕಾರ ಬರಲಿದೆ.- ಪಿ.ಬಿ.ಶ್ರೀನಿವಾಸ್, ಮಲೆನಾಡು ನಾಗರೀಕ ಹಿತರಕ್ಷಣಾ ಸಮಿತಿ ಶೃಂಗೇರಿ.












