ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುರಿದು ಹೋಗಿದ್ದ ಬಸ್ಸಿನ ಸೀಟಿಗೆ ರೈತರೊಬ್ಬರು ತಮ್ಮ ಮೈಮೇಲಿದ್ದ ಟವೆಲ್ ಅನ್ನೇ ಕಟ್ಟಿ, ಸೀಟನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ಬಡ್ತಿಗೆ ಹೊಸ ಮಾರ್ಗಸೂಚಿ ಪ್ರಕಟ; ಇಷ್ಟು ವರ್ಷಗಳ ಸೇವೆ ಕಡ್ಡಾಯ

ಚಿಕ್ಕಮಗಳೂರು ಡಿಪೋಗೆ ಸೇರಿದ ಮೈಸೂರು ಮಾರ್ಗದ ಬಸ್, ಹಾಸನದ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ಸಿನ ಸೀಟೊಂದು ಸಂಪೂರ್ಣವಾಗಿ ಮುರಿದು ಹೋಗಿದ್ದು, ಯಾರೂ ಕೂಡ ಅದರ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಬಸ್ಸಿನ ವೇಗಕ್ಕೆ ಸೀಟು ಅಲುಗಾಡುತ್ತಿದ್ದುದರಿಂದ ಬೀಳುವ ಭಯಕ್ಕೆ ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಬಸ್ ಹತ್ತಿದ ರೈತರೊಬ್ಬರು ಈ ಸೀಟಿನ ಅವಸ್ಥೆ ಕಂಡು ತಮ್ಮ ಹೆಗಲ ಮೇಲಿದ್ದ ಟವೆಲ್ ತೆಗೆದು, ಮುರಿದಿದ್ದ ಸೀಟನ್ನು ಪಕ್ಕದ ರಾಡ್ಗೆ ಭದ್ರವಾಗಿ ಕಟ್ಟಿದರು. ಆ ಮೂಲಕ ಸೀಟು ಅಲುಗಾಡದಂತೆ ಮಾಡಿ ತಾವೂ ಅಲ್ಲಿ ಕುಳಿತು ಪ್ರಯಾಣಿಸಿದರು. ವಿಶೇಷವೆಂದರೆ, ತಾವು ಇಳಿಯುವಾಗಲೂ ಆ ಟವೆಲ್ ಅನ್ನು ಬಿಚ್ಚದೆ, “ನಂತರ ಬರುವವರಿಗೂ ಅನುಕೂಲವಾಗಲಿ, ಇದು ಸರ್ಕಾರಕ್ಕೆ ನನ್ನ ಕಡೆಯಿಂದ ಗಿಫ್ಟ್ ಇರಲಿ” ಎನ್ನುವಂತೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶ; ಆಕರ್ಷಕ ವೇತನ
ಈ ದೃಶ್ಯವನ್ನು ಕಂಡ ಸಹ ಪ್ರಯಾಣಿಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












