ಶೃಂಗೇರಿ: ಹಳದಿ ರೋಗ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಶೃಂಗೇರಿ ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) ಯೋಜನೆಯಡಿ ರೈತರ ತರಬೇತಿ ಕಾರ್ಯಕ್ರಮ ಹಾಗೂ ಅಡಿಕೆ ಬೆಳೆಯಲ್ಲಿ ರೋಗಗಳ ಸಮಗ್ರ ನಿರ್ವಹಣೆ ಕಾರ್ಯಕ್ರಮವನ್ನು ಸಂಶೋಧಕರಾದ ಸಂಜು ಜಗಟ್ಟಿ ಮಠ್ ಹಾಗೂ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ಈ ವೇಳೆ ರೈತರೊಬ್ಬರು ಕೇಳಿದ ಪ್ರಶ್ನೆಗೆ ಅಧಿಕಾರಿ ಏಕವಚನದಲ್ಲಿ ಬೈದಿದ್ದು, ಕಾರ್ಯಕ್ರಮದಲ್ಲಿ ಕೆಲ ಕಾಲ ವಾಗ್ವಾದ ಗಳು ನಡೆದಿದೆ ಎನ್ನಲಾಗಿದೆ.


ಇದನ್ನೂ ಓದಿ: ಆದಿತ್ಯ ಬಿರ್ಲಾ ಕ್ಯಾಪಿಟಲ್ ವತಿಯಿಂದ ವಿದ್ಯಾರ್ಥಿವೇತನ; 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್


ಈ ಕಾರ್ಯಕ್ರಮದಲ್ಲಿ ಹಳದಿ ರೋಗದ ಬಗ್ಗೆ ರೈತರೊಬ್ಬರು ಕೇಳಿದ ಪ್ರಶ್ನೆಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು, ಹಳದಿ ರೋಗವನ್ನು ಸರಿಪಡಿಸಲು ಸಾಧ್ಯವಿಲ್ಲ. ಬದಲಾಗಿ ಗೊಬ್ಬರ ನಿರ್ವಹಣೆ ಮೂಲಕ ಫಸಲನ್ನು ಪಡೆಯಿರಿ ಎಂದಿದ್ದಾರೆ. ಹಾಗೆಯೇ ಹಳದಿ ರೋಗದ ಸಂಶೋಧನೆ ಬಗ್ಗೆ ಕೇಳಿದ ರೈತರಿಗೆ ಹತ್ತು ವರ್ಷಗಳ ಈಚೆಗೆ ಯಾವುದೇ ಸಂಶೋಧನೆ ಆಗಿಲ್ಲ. ನಾವು ಎಲೆ ಚುಕ್ಕಿ ರೋಗದ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡಲು 15 ಜನರ ತಂಡ ಬೇಕಾಗುತ್ತದೆ. ಅಲ್ಲದೆ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಬೇಕಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ


ಹೀಗಾಗಿ ಕಾರ್ಯಕ್ರಮದಲ್ಲಿ ಮಲೆನಾಡಿನ ರೈತರ ಪರವಾಗಿ ಅಶೋಕ್ ಕೋಚವಳ್ಳಿ, ಆದರ್ಶ ಕೋಚವಳ್ಳಿ, ರತ್ನಾಕರ್ ಕೋಚವಳ್ಳಿ ಹಾಗೂ ಇನ್ನಿತರ ರೈತರು, ಮುಂದಿನ ದಿನಗಳಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಅವರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ. ಅಲ್ಲದೆ ಮಲೆನಾಡಿನ ರೈತರ ನಿದ್ದೆ ಕೆಡಿಸುತ್ತಿರುವ ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆಂದು ಸುಳ್ಳು ಹೇಳುತ್ತಿರುವ ಅಧಿಕಾರಿಗಳ ವಿರುದ್ಧವೂ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.


ಇದನ್ನೂ ಓದಿ: ರಾಜ್ಯದಲ್ಲಿ ಕೇಕ್ ಬ್ಯಾನ್ ಮಾಡಲು ಮುಂದಾದ ಸರ್ಕಾರ!; ಯಾಕೆ ಗೊತ್ತಾ? ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.