ಕಡೂರು: ಡ್ರಾಪ್ ಪಡೆಯುವ ನೆಪದಲ್ಲಿ ಸುಲಿಗೆ: 6 ಜನರ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಡ್ರಾಪ್ ಪಡೆಯುವ ನೆಪದಲ್ಲಿ ಹತ್ತಿದ ಇಬ್ಬರು ಯುವತಿಯರೂ ಸೇರಿ 7 ಜನರ ಗುಂಪು ಸುಲಿಗೆ ಮಾಡಲು ಯತ್ನಿಸಿದ್ದು, ಈ ಪೈಕಿ 6 ಜನರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಏನಿದು ಘಟನೆ:
ತಿಪಟೂರು ತಾಲ್ಲೂಕು ಕರಡಾಳು ಗ್ರಾಮದ ಪ್ರವೀಣ್ ಮತ್ತು ಚೇತನ್ ಎಂಬುವರು ಮಂಗಳವಾರ ರಾತ್ರಿ ಇನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಚೇತನ್ ತನ್ನ ಸ್ನೇಹಿತ ಶಿವು ಎನ್ನುವವರಿಗೆ ಕರೆ ಮಾಡಿ ಚಿಕ್ಕಮಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಶಿವು ತನ್ನ ಸಂಬಂಧಿಕರೂ ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದು, ಅವರನ್ನು ಕರೆದುಕೊಂಡು ಹೋಗುವಂತೆ ಕೇಳಿದ್ದರು. ಅದರಂತೆ ಪ್ರವೀಣ್ ಕಡೂರಿಗೆ ಬಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಬ್ಬರು ಮಹಿಳೆಯರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಅವರ ಪರಿಚಯ ಕೇಳಿದಾಗ ಶ್ರಾವ್ಯ ಮತ್ತು ಕಾವ್ಯ ಎಂದು ತಿಳಿಸಿದ್ದರು.

ಹಿರೇಗೌಜ ಬಸ್ ನಿಲ್ದಾಣದ ಬಳಿ ಬಂದಾಗ ಗಂಡನಿಂದ ವಿಡಿಯೊ ಕಾಲ್ ಬರುತ್ತಿದ್ದು, ಕಾರ್ ನಿಲ್ಲಿಸುವಂತೆ ಶ್ರಾವ್ಯ ಹೇಳಿದ್ದು, ನಿಲ್ಲಿಸಿದ ತಕ್ಷಣವೇ ಮೂರು ಬೈಕ್‌ಗಳಲ್ಲಿ ಬಂದ ಐದು ಜನ ಅಡ್ಡಗಟ್ಟಿ ಕಾರಿನ ಕೀ ಕಸಿದುಕೊಂಡಿದ್ದಾರೆ. ಅಲ್ಲದೇ ಕಾರಿನಿಂದ ಇಳಿಯದಂತೆ ಮಾಡಿದ್ದಾರೆ. ಬಳಿಕ ಕಾರಿನಲ್ಲಿ ಬಂದಿದ್ದ ಯುವತಿಯರಿಗೆ ಐವರೂ ಪರಿಚಯಸ್ಥರು ಎಂಬುದು ಗೊತ್ತಾಗಿದೆ. ಪ್ರವೀಣ ಮತ್ತು ಚೇತನ್ ಅವರನ್ನು ಕಾರಿನಿಂದ ಇಳಿಸಿ ಚಾಕು ಕುತ್ತಿಗೆಗೆ ಹಿಡಿದು ಹಣ ಕೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?

ಚಿಕ್ಕಮಗಳೂರು ಕಡೆಯಿಂದ ಸೈರನ್ ಇರುವ ಜೀಪ್ ಬಂದಿದ್ದರಿಂದ ಕೂಡಲೇ ಕಾರಿನಲ್ಲಿ ಕೂರಿಸಿಕೊಂಡು ವಾಪಸ್ ತಿರುಗಿಸಿದ್ದಾರೆ. ಪಿಳ್ಳೇನಹಳ್ಳಿ ಗೇಟ್ ಬಳಿ ನಿಲ್ಲಿಸಿಕೊಂಡು ಪರ್ಸ್ ಮತ್ತು ಪೋನ್ ಪೇನಲ್ಲಿ ಹಣ ಪರಿಶೀಲಿಸಿದ್ದಾರೆ. ಸ್ನೇಹಿತರಿಂದ ಹಣ ಹಾಕಿಸು ಎಂದು ಒತ್ತಾಯಿಸಿ ಪೋನ್ ಮಾಡಿಸಿದ್ದಾರೆ. ಆಗ ಸ್ನೇಹಿತನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೋದ ಪೊಲೀಸರು ಕಾರು ಅಡ್ಡಗಟ್ಟಿ ನಾಲ್ವರನ್ನು ವಶಕ್ಕೆ ಪಡೆದು ಪರಾರಿಯಾದ ಮೂವರಲ್ಲಿ ಇಬ್ಬರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೊಸ ಕಾರು/ಬೈಕ್ ಕೀಲಿಯ ಜೊತೆ ಸಿಗುವ ಮೆಟಲ್ ಟ್ಯಾಗ್ ರಹಸ್ಯವೇನು …; ವಾಹನ ಸವಾರರು ಓದಲೇಬೇಕಾದ ಸ್ಟೋರಿ..

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.