ಚಿಕ್ಕಮಗಳೂರು: ಅಡುಗೆ ಅನಿಲ ಅಭಾವ ಶೀಘ್ರವೇ ಪರಿಹಾರ: ಸಂಸದ ಕೋಟಾ ಭರವಸೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಡುಗೆ ಅನಿಲ ಕೊರತೆ ಕುರಿತು ಸಿದ್ದರಾಮಯ್ಯನವರು, ಹೋಟೆಲ್ ಮಾಲೀಕರು ಟೀಕಿಸಿದ್ದನ್ನು ಕೇಳಿದ್ದೇನೆ. ಗಲ್‌ನಲ್ಲಿ ಕ್ರಿಕೆಟ್ ನಡೆಯುತ್ತಿಲ್ಲ ಯುದ್ದ ನಡೆಯುತ್ತಿದೆ. ಆ ಕಾರಣಕ್ಕೆ ಒಂದಿಷ್ಟು ಸಮಸ್ಯೆಯಾಗಿದೆ. ನಾವೂ ಕೂಡ ಪರ್ಲಿಮೆಂಟ್‌ನಲ್ಲಿ ಏನು ಮಾಡಬೇಕು, ಲೋಕಸಭೆ ಸದಸ್ಯರಾಗಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದೇವೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಟೀಕಕಾರರ ನಡುವೆ ಮುನಿಯಪ್ಪನಂತವರು, ಪರಮೇಶ್ವರ್‌ನಂತವರು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕಾರ ನೀಡುತ್ತೇವೆಂದು ಹೇಳಿದ್ದಾರೆ. ಟೀಕೆ ಟಿಪ್ಪಣಿಗಳ ಮದ್ಯದಲ್ಲಿಯೂ ಕೂಡ ಜನರ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದರು.

ಗಲ್ಫ್ ರಾಷ್ಟ್ರಗಳಲ್ಲಿ ಯುದ್ದ ನಡೆಯುತ್ತಿರುವ ಹಿನ್ನಲೆಯಲ್ಲಿ ಗ್ಯಾಸ್ ತುಂಬಿರುವ ಹಡಗುಗಳು ಮತ್ತೀತ್ತರೇ ವಸ್ತುಗಳು ಬಂದ್ ಆಗಿವೆ. ಕತಾರ್, ಕುವೈತ್ ನಿಂದ ಪೋನ್ ಮಾಡುತ್ತಿದ್ದಾರೆ. ನಾವು ಕಷ್ಟದಲ್ಲಿದ್ದೇವೆ ದೇಶಕ್ಕೆ ಕರೆಸಿಕೊಳ್ಳಿ ಎನ್ನುತ್ತಿದ್ದಾರೆ. ನಾನೇ ವಿದೇಶಾಂಗ ಮಂತ್ರಿಗಳ ಜೊತೆ ಮಾತನಾಡಿದಾಗ ಅಲ್ಲಿರುವ ವಿಮಾನ ನಿಲ್ದಾಣಗಳೇ ದ್ವಂಸವಾಗಿವೆ. ಅಲ್ಲಿಂದ ಬರಲಾರದ ಪರಿಸ್ಥಿತಿ ಇದೆ. ಹಾಗಾಗೀ ನಾವು ಅವರಿಗೆ ಅಲ್ಲೆ ಭದ್ರತೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಸುರಕ್ಷಿತವಾಗಿ ಎಲ್ಲಾ ಭಾರತೀಯರನ್ನು ನಾವು ಕರೆದುಕೊಂಡು ಬರುತ್ತೇವೆ. ಈಗಾಗಲೇ 60 ಸಾವಿರ ಜನ ಬಂದಿದ್ದಾರೆ. ಇನ್ನೂ 1ಲಕ್ಷ ಜನ ಕಾಯುತ್ತಿದ್ದಾರೆ ಎಂದು ವಿದೇಶಾಂಗ ಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?

ಅಂತ ಪರಿಸ್ಥಿತಿಯಲ್ಲಿ ಅಡಿಗೆ ಅನಿಲಕ್ಕೆ ತೊಂದರೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮದವರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದು, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆದಷ್ಟು ಬೇಗ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಇದನ್ನೂ ಓದಿ: ಹೊಸ ಕಾರು/ಬೈಕ್ ಕೀಲಿಯ ಜೊತೆ ಸಿಗುವ ಮೆಟಲ್ ಟ್ಯಾಗ್ ರಹಸ್ಯವೇನು …; ವಾಹನ ಸವಾರರು ಓದಲೇಬೇಕಾದ ಸ್ಟೋರಿ..

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.