ಚಿಕ್ಕಮಗಳೂರು: ಕಾರಾಗೃಹಗಳ ಜವಾಬ್ದಾರಿ ಕೇಂದ್ರ ಗೃಹ ಇಲಾಖೆ ನಿರ್ವಹಿಸಲು ಮನವಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾರಾಗೃಹಗಳ ಅಕ್ರಮ ಚಟುವಟಿಕೆ ನಿಯಂತ್ರಣ ಹಾಗೂ ಭಯೋತ್ಪಾದಕರಿಗೆ ಮತ್ತು ನಕ್ಸಲೀಯರಿಗೆ ಪ್ರತ್ಯೇಕ ಕಾರಾಗೃಹಗಳನ್ನು ತೆರೆದು ಕೇಂದ್ರ ಗೃಹ ಇಲಾಖೆಯೇ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ಮುಖಂಡರುಗಳು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.


ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!


ರಾಷ್ಟ್ರದ ವಿರುದ್ಧ ಸಂಚು ರೂಪಿಸಿರುವ ಉಗ್ರರು ಮತ್ತು ದುಕೃತ್ಯವೆಸಗಿ ಸೆರೆವಾಸ ಅನುಭವಿಸುತ್ತಿರುವ ಕಾರಾಬಂದಿಗಳು ಕುಣಿದು ಕುಪ್ಪಳಿಸಲು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮೋಜಿನ ತಾಣವಾಗುತ್ತಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ದೂರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳಷ್ಟು ಹದೆಗಟ್ಟಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟದ ಕಾರಾಗೃಹಗಳು ಐಷರಾಮಿ ಕೊಠಡಿಗಳನ್ನಾಗಿಸಿ ಸರ್ಕಾರ ದುರಾಡಳಿತವನ್ನು ನಡೆಸುತ್ತಿದೆ. ಅಲ್ಲದೇ ಪರಪ್ಪನ ಜೈಲು ಪ್ರಸ್ತುತ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರಗಳಾಗಿ ಖೈದಿಗಳಿಗೆ ಮನರಂಜನೆಯ ಕೇಂದ್ರವಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆ, ಮೊಬೈಲ್ ಬಳಕೆ, ಉನ್ನತ ಸೌಲಭ್ಯಗಳನ್ನು ಖೈದಿಗಳು ಬಳಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಅಲ್ಲದೇ ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ ಬಂಧಿಯಾಗಿರುವ ಆರೋಪಿ ಅತ್ಯಂತ ಹೆಚ್ಚು ಸೌಕರ್ಯ ಪಡೆಯುತ್ತಿರುವುದು ದೇಶಕ್ಕೆ ದೊಡ್ಡ ಆತಂತಕಾರಿ ಬೆಳವಣಿಗೆ ಎಂದು ತಿಳಿಸಿದರು.


ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ


ಸಾಮಾನ್ಯ, ಭಯೋತ್ಪಾದಕ ಹಾಗೂ ನಕ್ಸಲ್‌ನ ಖೈದಿಗಳು ಒಂದೇ ಕೊಠಡಿಯಲ್ಲಿರುವುದು ಮುಂದಿನ ದಿನಗಳಲ್ಲಿ ದೇಶದ ಅವನತಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ಸ್ಮಾರ್ಟ್ ಪೋನ್ ಬಳಕೆ ವೀಡೀಯೋ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದು ಈ ವರದಿ ಆಧರಿಸಿ ಪ್ರಕರಣವನ್ನು ಎನ್. ಐ.ಎ. ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.