ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ₹21.85 ಲಕ್ಷ ಕಳೆದುಕೊಂಡ ವೈದ್ಯ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದಿನದಿಂದ ದಿನಕ್ಕೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು, ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸಿ ಸಾರ್ವಜನಿಕರನ್ನು ಬಲೆಗೆ ಬೀಳಿಸುತ್ತಿದ್ದಾರೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರು ಟ್ರೇಡಿಂಗ್ ಹೆಸರಿನಲ್ಲಿ ₹21.85 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವೈದ್ಯರೊಬ್ಬರಿಗೆ ವಾಟ್ಸಪ್‌ಗೆ “Axis Steady Stocks Club-R2” ಎಂಬ ಗ್ರೂಪ್‌ನಿಂದ ಟ್ರೇಡಿಂಗ್ ಮಾಡಲು ಆಸಕ್ತಿ ಇದೆಯೇ? ಎಂದು ಸಂದೇಶ ಬಂದಿದೆ. ಷೇರು ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದ ಅವರು ಪ್ರತಿಕ್ರಿಯಿಸಿದ ಬಳಿಕ, ವಾಟ್ಸಪ್‌ ಗ್ರೂಪ್‌ಗೆ ಅವರನ್ನು ಸದಸ್ಯರಾಗಿ ಸೇರಿಸಲಾಗಿದೆ.

ಗ್ರೂಪ್ ಅಡ್ಮಿನ್‌ಗಳಾದ ನವೀನ್ ಕುಲಕರ್ಣಿ ಮತ್ತು ಸುರಕ್ಷಾ ಎಂಬವರು ಟ್ರೇಡಿಂಗ್ ಬಗ್ಗೆ ಮಾರ್ಗದರ್ಶನ ನೀಡುತ್ತೇವೆ ಎಂದು ವಿಶ್ವಾಸ ಮೂಡಿಸಿ, “ಐಎಂಇಸಿ ಬ್ಲಾಕ್ ಷೇರುಗಳಲ್ಲಿ ಹೆಚ್ಚು ಲಾಭ ಇದೆ” ಎಂದು ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಬಳಿಕ ವೈದ್ಯರಿಗೆ ವರ್ಚುವಲ್ ಐಡಿಯಲ್ಲಿ ಹೆಚ್ಚಿನ ಲಾಭ ತೋರಿಸಲಾಗಿದ್ದು, ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ “ನಿಮ್ಮ ಖಾತೆ ಲಾಕ್ ಆಗಿದೆ, ಇನ್ನಷ್ಟು ಹೂಡಿಕೆ ಮಾಡಿ ತೆರಿಗೆ ಪಾವತಿಸಿದ ಬಳಿಕ ಮಾತ್ರ ಹಣವನ್ನು ಪಡೆಯಬಹುದು” ಎಂದು ತಿಳಿಸಲಾಗಿದೆ.

ವಂಚಕರ ಸೂಚನೆಯಂತೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹21,85,000 ಹಣವನ್ನು ವರ್ಗಾವಣೆ ಮಾಡಿದ ಬಳಿಕ ಮೋಸ ಹೋಗಿರುವುದು ತಿಳಿದುಬಂದಿದೆ. ಈ ಕುರಿತು ವೈದ್ಯರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಅಪರಿಚಿತ ವಾಟ್ಸಪ್‌ ಗ್ರೂಪ್‌ಗಳು, ಆಕರ್ಷಕ ಹೂಡಿಕೆ ಆಫರ್‌ಗಳು ಹಾಗೂ ಹೆಚ್ಚು ಲಾಭದ ಭರವಸೆ ನೀಡುವ ಸಂದೇಶಗಳಿಗೆ ಮರುಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.