ಹೋರಾಟದ ಪ್ರತಿಫಲವಾಗಿ ದಶಕಗಳ ಕನಸಿಗೆ ಜೀವ: ಶೃಂಗೇರಿ ನೂರು ಬೆಡ್ ಆಸ್ಪತ್ರೆಗೆ ಶಂಕುಸ್ಥಾಪನೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಜನತೆಯ ಬಹು ವರ್ಷಗಳ ಬೇಡಿಕೆಯಾದ ನೂರು ಬೆಡ್ ಆಸ್ಪತ್ರೆಗೆ ಶಂಕುಸ್ಥಾಪನೆ ಇಂದು ನೆರವೇರಿದೆ. ಕರ್ನಾಟಕ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್, ಶಾಸಕ ಟಿ.ಡಿ ರಾಜೇಗೌಡ, ಕಾಡಾ ನಿಗಮದ ಅಧ್ಯಕ್ಷ ಅಂಶುಮಂತ್ ಅವರ ನೇತೃತ್ವದಲ್ಲಿ ಸುಮಾರು 37 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂರು ಬೆಡ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.


ಇದನ್ನೂ ಓದಿ: ವಿಂಡೋಸ್ 10 ಬಗ್ಗೆ ಡೊಡ್ಡ ಘೋಷಣೆ; ಏನದು..?


ಶಂಕುಸ್ಥಾಪನೆ ನೆರವೇರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಹಲವಾರು ಕಾರಣಗಳಿಂದ ಈಗಾಗಲೇ ಕಾಮಗಾರಿ ಪ್ರಾರಂಭ ಬಹಳಷ್ಟು ತಡವಾಗಿದ್ದು ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳ್ಳಲಿದೆ. ಅರಣ್ಯ ಇಲಾಖೆ ಯೋಜನೆಗಳ ಕಾರಣದಿಂದ ಜಾಗ ಗುರುತಿಸುವಿಕೆ ವಿಳಂಬವಾಗಿದ್ದು ಇನ್ನೂ ವಿಳಂಬ ಆಗದಂತೆ ಕ್ರಮ ವಹಿಸಲು ಎಲ್ಲರಿಗೂ ಸೂಚಿಸಿದ್ದೇನೆ. ಹಾಗೆಯೇ ಬಾಳೆಹೊನ್ನೂರಿಗೆ 50 ಬೆಡ್ ಆಸ್ಪತ್ರೆ ಮಂಜೂರಾತಿಗೆ ಕೋರಿದ್ದಾರೆ ಆದರೆ ಈಗಲೇ ತಕ್ಷಣವೇ ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಅವರ ಈ ಬೇಡಿಕೆಯನ್ನು ಸಹ ಪೂರ್ಣಗೊಳಿಸುತ್ತೇವೆ ಎಂದರು.

ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ಶೃಂಗೇರಿ ಜನರ ಬಹುಬೇಡಿಕೆಯ ನೂರು ಬೆಡ್ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿದ್ದು ಇದು ಬಹಳ ವರ್ಷಗಳ ಕೂಗಾಗಿತ್ತು, ಈಗ ಶಂಕುಸ್ಥಾಪನೆ ನೆರವೇರಿದ್ದು ಆದಷ್ಟು ಬೇಗನೇ ಆಸ್ಪತ್ರೆ ನಿರ್ಮಾಣ ಕಾರ್ಯ ಆಗಲಿದೆ. ಈ ಸಂಬಂಧ ಆರೋಗ್ಯ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಹೋರಾಟಕ್ಕೆ ಪ್ರಮುಖವಾಗಿ 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯವರ ಕೊಡುಗೆ ಇದ್ದು ಹಲವು ವರ್ಷಗಳ ನಿಷ್ಪಕ್ಷಪಾತ ಹೋರಾಟದಿಂದ ನಾವು ಸಹ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದ್ದು ಆಸ್ಪತ್ರೆ ಶಂಕುಸ್ಥಾಪನೆ ಪ್ರಾರಂಭವಾಗಿದೆ. ಅವರಿಗೂ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು.

ಒತ್ತುವರಿ ಸಮಸ್ಯೆ: ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ, ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ರೈತರಿಗೆ ತೊಂದರೆ ಉಂಟಾಗದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದರು.


ಇದನ್ನೂ ಓದಿ: ಉಚಿತ ಎಲ್‌ಪಿಜಿ ಸಂಪರ್ಕ | ಅರ್ಜಿ ಸಲ್ಲಿಕೆ ಹೇಗೆ?


ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಸಿಇಓ ಕೀರ್ತನಾ, ಡಿಎಚ್ಓ ಅಶ್ವಥ್ ಬಾಬು, ಶೃಂಗೇರಿ ತಹಸೀಲ್ದಾರ್ ಅನೂಪ್ ಸಂಜೋಗ್, ಹಾಗೂ ಸ್ಥಳೀಯ ಮುಖಂಡರಾದ ರಮೇಶ್ ಭಟ್, ಉಮೇಶ್ ಪೊದುವಾಳ್, ಮಾರನಕೊಡಿಗೆ ನಟರಾಜ್ ಇದ್ದರು.

ಹಾಗೆಯೇ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ವತಿಯಿಂದ, ಈಗಾಗಲೇ ಯೋಜನೆ ತೀವ್ರ ವಿಳಂಬವಾಗಿದ್ದು, ಅನಿವಾರ್ಯತೆ ಮನಗಂಡು ಸೂಪರ್ ಫಾಸ್ಟ್ ಕಾಮಗಾರಿ ನಡೆಸಬೇಕು ಹಾಗೂ ಈಗಿರುವ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರು ಸಹಿತ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರ ಬಳಿ ಬೇಡಿಕೆ ಇಡಲಾಯಿತು. ಕಾಮಗಾರಿ ತೀವ್ರಗತಿಗೆ ತಿಳಿಸಿದ್ದು ವೈದ್ಯರ ನೇಮಕಾತಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ರಂಜಿತ್ ಶೃಂಗೇರಿ, ಆದರ್ಶ ಕಾಂಚಿನಗರ, ಅಭಿಲಾಷ್ ಹೆಗ್ಗಡೆ, ಪ್ರವೀಣ್, ಚೇತನ್ ಗೌಡ, ದೇವರಾಜ್, ಅನಿರುದ್ಧ, ಸಾಯಿಪ್ರಕಾಶ್ ಹಾಗೂ ಇತರರು ಇದ್ದರು.


ಇದನ್ನೂ ಓದಿ: ಯುಪಿಐನಲ್ಲಿ ಬರಲಿದೆ ಹೊಸ ಫೀಚರ್; ಯಾವುದು ಈ ಫೀಚರ್‌, ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.