ನೂರು ಬೆಡ್ ಆಸ್ಪತ್ರೆ ಶಂಕುಸ್ಥಾಪನೆ ಸಮಾರಂಭ | ವಿವಾದಕ್ಕೆ ಕಾರಣವಾದ ಆಹ್ವಾನ ಪತ್ರಿಕೆ

ಶೃಂಗೇರಿಯಲ್ಲಿ ಸುಮಾರು 40 ಕೋಟಿ ವೆಚ್ಚದಲ್ಲಿ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಕನಸಿಗೆ ಬುನಾದಿ ಹಾಕಲು ಸಕಲ ಸಿದ್ಧತೆ ನಡೆದಿದ್ದು, ದಿನಾಂಕ 07 ಜುಲೈ 2025ರಂದು ಆರೋಗ್ಯ ಸಚಿವರಿಂದ ಶಂಕುಸ್ಥಾಪನೆ ನೆರವೇರಲಿದೆ. ಶೃಂಗೇರಿ ಜನತೆಯ ಹಲವು ದಶಕಗಳ ಬೇಡಿಕೆ ಹಾಗೂ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ನಿರಂತರ ಹೋರಾಟದ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ.

ಆದರೆ ಈ ನಡುವೆ ಹಂಚಿಕೆ ಮಾಡಿರುವ ಆಹ್ವಾನ ಪತ್ರಿಕೆ ಹಲವು ವಿವಾದಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ


ಹೋರಾಟ ಸಮಿತಿ ಹೆಸರಿಲ್ಲದ ಆಹ್ವಾನ ಪತ್ರಿಕೆ ಸ್ವೀಕರಿಸುವುದಿಲ್ಲ :

ಆಹ್ವಾನ ಪತ್ರಿಕೆಯ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಹೆಸರನ್ನು ಹಾಕದೆ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ, ಹೋರಾಟ ಸಮಿತಿ ಹಲವಾರು ವರ್ಷಗಳಿಂದ ಈ ವಿಚಾರವನ್ನು ಕೈಗೆತ್ತಿಕೊಂಡು ಹೋರಾಟಕ್ಕಿಳಿದಿತ್ತು ಅದಕ್ಕೂ ಮೊದಲು 13 ವರ್ಷ ಈ ಕಡತ ಧೂಳು ತಿನ್ನುತ್ತಾ ಬಿದ್ದಿತ್ತು, ರಾಜಕೀಯ ರಹಿತ ಹೋರಾಟಕ್ಕೆ ಶೃಂಗೇರಿ ಜನತೆ ವ್ಯಾಪಕ ಬೆಂಬಲ ನೀಡಿದ್ದರು. ಶೃಂಗೇರಿ ಬಂದ್ ಸೇರಿದಂತೆ ತೀವ್ರ ಸ್ವರೂಪದ ಹೋರಾಟಗಳು ನಡೆದಿದ್ದವು.
ನಾವು ಪ್ರಚಾರಕ್ಕಾಗಿ ಹೋರಾಟ ಮಾಡಿಲ್ಲ, ಆದರೆ ನಮ್ಮೊಂದಿಗೆ ಹೋರಾಟದಲ್ಲಿ ಕೈ ಜೋಡಿಸಿದ ನೂರಾರು ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಶ್ರಮ, ಭಾವನೆಗಳಿಗೆ ಬೆಲೆ ನೀಡದ ಕಾರಣ ಆಹ್ವಾನ ಪತ್ರಿಕೆ ಸ್ವೀಕರಿಸುವುದಿಲ್ಲ ಎಂದು ಹೋರಾಟ ಸಮಿತಿ ತಿಳಿಸಿದೆ.


ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ


ತಾಲೂಕು ವೈದ್ಯಾಧಿಕಾರಿಗಳ ಹೆಸರು ಇಲ್ಲ:

ತಾಲೂಕು ಆಸ್ಪತ್ರೆ ನಿರ್ಮಾಣ ಆಗುತ್ತಿದ್ದರೂ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದ್ ಹಾಗೂ AMO ಡಾ. ಶ್ರೀನಿವಾಸ್ ಅವರ ಹೆಸರು ಹಾಕದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲಿಗೆ ತಯಾರಾಗಿದ್ದ ಆಹ್ವಾನ ಪತ್ರಿಕೆಯಲ್ಲಿ ಇಬ್ಬರೂ ವೈದ್ಯರ ಹೆಸರು ಹಾಗೂ ಅಡ್ಡಗದ್ದೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಅವರ ಹೆಸರನ್ನು ಹಾಕಲಾಗಿತ್ತು ಆದರೆ ನಂತರ ಅದನ್ನು ಬದಲಾಯಿಸಿ ಇನ್ನೊಂದರಲ್ಲಿ ತೆಗೆಯಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹೆಸರು:

ಇನ್ನು ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವೇಣುಗೋಪಾಲ್ ಅವರ ಹೆಸರನ್ನು ಕೈ ಬಿಟ್ಟಿದ್ದು, ಈ ಬಗ್ಗೆ ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ PDO ಗಳಿಗೆ ಭರ್ಜರಿ ಗುಡ್ ನ್ಯೂಸ್; ವಿಶೇಷ ಮುಂಬಡ್ತಿ ಮಂಜೂರು ಮಾಡಿ ಆದೇಶ


ಅಧಿಕಾರಿಗಳಿಗೆ ದಿಢೀರನೆ ಪ್ರೊಟೊಕಾಲ್ ನೆನಪು:

ವರ್ಷಪೂರ್ತಿ ನಡೆಯುವ ಇತರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಆಹ್ವಾನ ಪತ್ರಿಕೆ ತಯಾರಿಸಲಾಗುತ್ತದೆ ಹಾಗೂ ಇತರೆ ಅತಿಥಿಗಳನ್ನು ಸಹ ಆಹ್ವಾನಿಸಲಾಗುತ್ತದೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸಹ ಆಯಾ ಮಹನೀಯರ ಜಾತಿಗೆ ಸಂಬಂಧಿಸಿದ ಸಂಘಟನೆಯ ಮುಖಂಡರನ್ನು ಆಹ್ವಾನಿಸುವುದು ಸಹ ವಾಡಿಕೆಯಾಗಿ ಬಂದಿದೆ, ಕೆಲವು ಸರ್ಕಾರದ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳಿಗೂ ಅವಕಾಶ ನೀಡಿರುವುದನ್ನು ಕಾಣಬಹುದಾಗಿದೆ, ಆದರೆ ಈಗ ಜಿಲ್ಲಾಡಳಿತಕ್ಕೆ ದಿಢೀರನೆ ಪ್ರೊಟೋಕಾಲ್ ನೆನಪಾಗಿದ್ದು ವಿಶೇಷವೇ ಸರಿ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.