ಚಿಕ್ಕಮಗಳೂರು: ಇ -ಸ್ವತ್ತು ಮಾಡಿಕೊಡಲು‌ ಲಂಚಕ್ಕೆ ಬೇಡಿಕೆ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಇ-ಸ್ವತ್ತು ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿಕ್ಕಮಗಳೂರು ನಗರಸಭೆಯ ಬಿಲ್ ಕಲೆಕ್ಟರ್, ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ನಗರಸಭೆಯ ಬಿಲ್ ಕಲೆಕ್ಟರ್ ಪ್ರದೀಪ್ ಲೋಕಾಯುಕ್ತ ಬಿದ್ದಿರುವ ವ್ಯಕ್ತಿ.


ಇದನ್ನೂ ಓದಿ: 700 ರೂಪಾಯಿ ತಲುಪಿದ ಕಾಳುಮೆಣಸಿನ ಬೆಲೆ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ರೇಟ್ ಹೇಗಿದೆ?


ರಾಕೇಶ್ ಸಿ. ಎಸ್ ಎಂಬುವರ 4 1/2 ಗುಂಟೆಯ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಲು‌ ಪ್ರದೀಪ್ 7000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಾಕೇಶ್ ಸಿ. ಎಸ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇಂದು 2 ಸಾವಿರ ರೂಪಾಯಿ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪಿಐ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.


ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಸಿಗಲಿದೆ ₹18,180 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಪಿಐ ಅನಿಲ್ ರಾಥೋಡ್ ಮಲ್ಲಿಕಾರ್ಜುನ್ ಪಿ ಸರಳಾ ಮತ್ತು ಸಿಬ್ಬಂದಿ ಅನಿಲ್ ನಾಯಕ್, ಲೋಕೇಶ್, ವಿಜಯ, ಭಾಸ್ಕರ್, ಶ್ರೀಧರ್, ಪ್ರಸಾದ್, ಚಂದನ್ ಇದ್ದರು.

ಮೂಡಿಗೆರೆ: ಎರಡು ವರ್ಷದ ಹಿಂದೆ ಕಳವು ಮಾಡಿದ ಆರೋಪಿ ಬಂಧನ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022 ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ನಲ್ಕೆ ಗ್ರಾಮದ ಶರತ್ ಬಂಧಿತ ಆರೋಪಿ


ಇದನ್ನೂ ಓದಿ: ಬಿಪಿಎಲ್‌, ಅಂತ್ಯೋದಯ ಕಾರ್ಡ್’ದಾರರಿಗೆ ಇಲ್ಲಿದೆ ಗುಡ್ ನ್ಯೂಸ್;  ಏನದು ತಿಳಿಯಿರಿ


ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ. ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ನಂತರ ಕಳಸದ ಹೆಮ್ಮಕ್ಕಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಇತ್ತೀಚೆಗೆ ಒಂದು ಸಿಮ್ ಖರೀದಿ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಹೈಕೋರ್ಟ್ ಆದೇಶದಿಂದ ವಾಹನ ಸವಾರರು ನಿರಾಳ; ಏನಿದೆ ಹೈಕೋರ್ಟ್ ಆದೇಶ


ಈ ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್, ಸಚಿನ್, ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು. 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.