ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜ್ಯೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಜ್ಯೂನಿಯರ್ ಇಂಜಿನಿಯರ್.
ಇದನ್ನೂ ಓದಿ; ಮೋಸ್ಟ್ ವಾಂಟೆಡ್ ನಕ್ಸಲೈಟ್ ಅನ್ನು ಕಾರ್ಕಳಕ್ಕೆ ಕರೆ ತಂದ ಪೊಲೀಸ್

ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜ್ಯೂನಿಯರ್ ಇಂಜಿನಿಯರ್ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ ಫೈಲ್ ಪೆಂಡಿಂಗ್ ಇಟ್ಟು, 25 ಸಾವಿರ ಲಂಚ ಕೇಳಿ ಅಂತಿಮವಾಗಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರಿನ್ವಯ ಲೋಕಾಯುಕ್ತ ಅಧಿಕಾರಿ ಅನಿಲ್ ರಾಥೋಡ್ ನೇತ್ವತ್ವದಲ್ಲಿ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ; ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ?; ಹೇಗೆ ಸಿಗಲಿದೆ ಸಬ್ಸಿಡಿ ಲಾಭ; ಅರ್ಜಿ ಸಲ್ಲಿಕೆ ಹೇಗೆ?
ಚಿಕ್ಕಮಗಳೂರು: ಬೀಟಮ್ಮ ಅಂಡ್ ಗ್ಯಾಂಗ್ ಆತಂಕ : ರಾಜ್ಯ ಹೆದ್ದಾರಿ ತಡೆದು ಸ್ಥಳೀಯರ ಆಕ್ರೋಶ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)ಬೀಟಮ್ಮ ಅಂಡ್ ಗ್ಯಾಂಗ್ ಕಳೆದ 20 ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ಗ್ರಾಮಗಳಲ್ಲಿ ಬೀಡುಬಿಟ್ಟು ಕೋಟ್ಯಂತರ ಮೌಲ್ಯದ ಬೆಳೆ ಹಾನಿ ಮಾಡಿ, ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಾವರ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ; UPSC ಇಂದ ನೇಮಕ ಅಧಿಸೂಚನೆ; 122 ವಿವಿಧ ಪೋಸ್ಟ್ ಗಳ ನೇಮಕ
24 ಕ್ಕೂ ಹೆಚ್ಚು ಕಾಡಾನೆಗಳ ಹಿಂಡಿರುವ ಬೀಟಮ್ಮ ಗ್ಯಾಂಗ್ ವಾರದಿಂದ ಇಂದಾವರ ಸುತ್ತಮುತ್ತಾ ಬೀಡು ಬಿಟ್ಟಿದೆ. ಕಾಡಾನೆಗಳ ಉಪಟಳದಿಂದಾಗಿ ಗ್ರಾಮದ ಜನತೆ ಹಾಗೂ ರೈತರು ಹೈರಾಣಾಗಿ ಹೋಗಿದ್ದಾರೆ. ಇತ್ತ ತೋಟಗಳಿಗೆ ಹೋಗೋದಕ್ಕೂ ಭಯ ಪಡುವಂತೆ ಆಗಿದೆ. ಈ ಹಿನ್ನೆಲಯಲ್ಲಿ ತಕ್ಷಣವೇ ಸೂಕ್ತ ಕ್ರಮವಹಿಸಿ ಆನೆಗಳನ್ನ ಸ್ಥಳಾಂತರಿಸುವಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಗ್ರಾಮ ಪಂಚಾಯಿತಿಗಳಲ್ಲಿ ಬರ ಪರಿಹಾರ ಪಟ್ಟಿ ಪ್ರಕಟ
ಹರಿಹರಪುರ: ಲೋಕ ಕಲ್ಯಾಣಾರ್ಥವಾಗಿ ಶಾರದಾ ಪರಮೇಶ್ವರಿ ದೇವಿಗೆ ಋಕ್ ಸಂಹಿತಾ ಮಹಾಭಿಷೇಕ
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ದಿವ್ಯಕ್ಷೇತ್ರ ಹರಿಹರಪುರ ಮಠದಲ್ಲಿನ ಶಾರದಾ ಪರಮೇಶ್ವರಿ ದೇವಿಗೆ ಲೋಕ ಕಲ್ಯಾಣಾರ್ಥವಾಗಿ ಋಕ್ ಸಂಹಿತಾ ಮಹಾಭಿಷೇಕವನ್ನು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಿದರು.
ಶ್ರೀಮಠ ಹರಿಹರಪುರದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು, ಇತ್ತೀಚಿಗೆ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರ ನಿಮಿತ್ತವಾಗಿ ಅಯೋಧ್ಯೆ – ಕಾಶಿ ತೀರ್ಥ ಸಮಾರಾಧನೆಯನ್ನು ಕೂಡ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹರಿಹರಪುರದಲ್ಲಿ ಸಾಂಗವಾಗಿ ನೆರವೇರಿಸಿದರು.
ಭಕ್ತರು ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ದೇವರ ಪ್ರಸಾದ ಪಡೆದರು.















