ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣವಂತೆ ಗ್ರಾಮದ ವಡ್ಡನಮಕ್ಕಿ ಕೆರೆಯಲ್ಲಿ ಸಮರ್ಪಕವಾಗಿ ಹೂಳು ತೆಗೆಯದೇ ಅವ್ಯವಹಾರ ನಡೆಸಲಾಗಿದೆ ಎಂದು ಕೆರೆ ಸಮೀಪ ಬ್ಯಾನರ್ ಅಳವಡಿಸಲಾಗಿದೆ.
ಇದನ್ನೂ ಓದಿ: 700 ರೂಪಾಯಿ ತಲುಪಿದ ಕಾಳುಮೆಣಸಿನ ಬೆಲೆ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ರೇಟ್ ಹೇಗಿದೆ?

ಕೆರೆ ಅಭಿವೃದ್ಧಿಯೋ..? ಇಂಜಿನಿಯರ್ ಅಭಿವೃದ್ಧಿಯೋ..?:
ಕೆರೆ ಅಭಿವೃದ್ಧಿಯೋ..? ಇಂಜಿನಿಯರ್ ಅಭಿವೃದ್ಧಿಯೋ..? ಎಂದು ಬ್ಯಾನರ್ ನಲ್ಲಿ ಪ್ರಶ್ನಿಸಿದ್ದು, ಹೂಳು ತೆಗೆಯುವ ಕಾಮಗಾರಿ ಹೆಸರಲ್ಲಿ 3,79,384 ರೂ. ಬಿಲ್ ಮಾಡಲಾಗಿದೆ. ಕನಿಷ್ಠ 60 ಸಾವಿರ ರೂ. ವೆಚ್ಚದ ಕೆಲಸವೂ ನಡೆದಿಲ್ಲ.
ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಸಿಗಲಿದೆ ₹18,180 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಹೂಳು ತೆಗೆಯಲು ಇಂಜಿನಿಯರ್ ನೀಡಿದ ಭರವಸೆ ನಂಬಿ ಗ್ರಾಮದ ಜನರಿಗೆ ಉತ್ತಮ ನೀರು ಕೊಡಲು ಒಪ್ಪಿಕೊಂಡೆ. ಆದರೆ, ಬಿಲ್ ಮಾಡಿ ಹಣ ಪಡೆದಿದ್ದಾನೆ. ಇದರಿಂದ ನನಗೆ ನನ್ನ ಗ್ರಾಮದ ಜನರಿಗೆ ಅನ್ಯಾಯವಾಗಿದೆ ಎಂಬುದಾಗಿ ವಡ್ಡನಮಕ್ಕಿ ಕೆರೆಯೇ ಪ್ರಶ್ನಿಸುತ್ತಿರುವಂತೆ ಇಂಜಿನಿಯರ್ ವಿರುದ್ಧ ಬ್ಯಾನರ್ ಹಾಕಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮೂಡಿಗೆರೆ: ಎರಡು ವರ್ಷದ ಹಿಂದೆ ಕಳವು ಮಾಡಿದ ಆರೋಪಿ ಬಂಧನ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022 ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ನಲ್ಕೆ ಗ್ರಾಮದ ಶರತ್ ಬಂಧಿತ ಆರೋಪಿ
ಇದನ್ನೂ ಓದಿ: ಬಿಪಿಎಲ್, ಅಂತ್ಯೋದಯ ಕಾರ್ಡ್’ದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಏನದು ತಿಳಿಯಿರಿ
ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ. ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ನಂತರ ಕಳಸದ ಹೆಮ್ಮಕ್ಕಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಇತ್ತೀಚೆಗೆ ಒಂದು ಸಿಮ್ ಖರೀದಿ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಹೈಕೋರ್ಟ್ ಆದೇಶದಿಂದ ವಾಹನ ಸವಾರರು ನಿರಾಳ; ಏನಿದೆ ಹೈಕೋರ್ಟ್ ಆದೇಶ
ಈ ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್, ಸಚಿನ್, ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು.












