ಮೂಡಿಗೆರೆ: ದತ್ತ ಜಯಂತಿ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್ ಶಾಂತಿಯುತ

ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಬರುವ ಎಲ್ಲಾ ಬಾರ್ ಗಳನ್ನು ದತ್ತ ಜಯಂತಿ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶಾಂತಿಯುತವಾಗಿ ನಡೆಸಲಾಯಿತು.

 

ಇದನ್ನೂ ಓದಿ; ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಟ್ಟು 129 ವಾಹನಗಳು ದತ್ತ ಜಯಂತಿಗೆ ಚಿಕ್ಕಮಗಳೂರಿಗೆ ತೆರಳಿದ್ದವು. ಕಳೆದ ಬಾರಿ 190 ವಾಹನಗಳು ದತ್ತ ಜಯಂತಿಗೆ ತೆರಳಿದ್ದವು. ಈ ಬಾರಿ ಕಡಿಮೆ ವಾಹನಗಳು ದತ್ತ ಜಯಂತಿಗೆ ಸಾಗಿವೆ. ಕೊಟ್ಟಿಗೆಹಾರ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ವಾತಾವರಣ ಶಾಂತಿಯುತವಾಗಿತ್ತು ಎಂದು ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ತಿಳಿಸಿದ್ದಾರೆ.

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬಂದ್ ಆಚರಣೆಗೆ ಬಿಜೆಪಿ ಯುವ ಮೋರ್ಚಾ ಅಸಮಧಾನ:
ದತ್ತ ಜಯಂತಿ ಸಂದರ್ಭದಲ್ಲಿ ದತ್ತ ಭಕ್ತರು ಬರುವ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಹೋಟೆಲ್ ಗಳನ್ನು ಬಂದ್ ಮಾಡಿರುವ ಪೊಲೀಸ್ ಇಲಾಖೆಯ ನಿರ್ಧಾರಕ್ಕೆ ಬಿಜೆಪಿ ಯುವ ಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದೆ.

 

ಇದನ್ನೂ ಓದಿ; ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಉದ್ಯೋಗವಕಾಶ; 250 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇತ್ತೀಚೆಗೆ ದತ್ತ ಭಕ್ತರು ಬರುವ ಪ್ರಮುಖ ಸ್ಥಳಗಳಾದ ಚಾರ್ಮಾಡಿ, ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಹಾಂದಿ, ಆಲ್ದೂರು ಮುಂತಾದ ಸ್ಥಳಗಳಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ದತ್ತ ಭಕ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ದತ್ತ ಭಕ್ತರಿಗೆ ಬರುವ ದಾರಿಯಲ್ಲಿ ಅನ್ನ ನೀರು ಸಿಗುವ ಹಾಗೆ ಮದ್ಯದ ಅಂಗಡಿ ಹೊರತು ಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡದೇ ಪೊಲೀಸ್ ಇಲಾಖೆ ಸಹಕರಿಸಬೇಕು ಎಂದು ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅವಿನಾಶ್ ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)

 

ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆಯುದ್ದಕ್ಕೂ ಕೇಸರಿ ಕಲರವ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಶ್ವಹಿಂದೂ ಪರಿಷತ್, ಬಜರಂಗಳದ ವತಿಯಿಂದ ಸೋಮವಾರ ನಗರದಲ್ಲಿ ದತ್ತ ಮಾಲಾಧಾರಿಗಳು ಶೋಭಾಯಾತ್ರೆ ಸಾಗಿದರು. ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ ಹಾದು ಎಂ.ಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಿತು.

ಶೋಭಾಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ಚೆಂಡೆವಾದ್ಯ, ಬೊಂಬೆ ಕುಣಿತ, ಭಜನೆ ಕಹಳೆ ವಾದ್ಯ, ಗೊರವನ ಕುಣಿತ, ಹನುಮ ವೇಷಧಾರಿ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಯುವಜನತೆ ಡಿಜೆ ಹಾಗೂ ಡ್ರಮ್ ಸೆಟ್ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹ:
ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹ ಮೂಲಕ ಸಿ.ಟಿ ರವಿ ಭಿಕ್ಷಾಟನೆ ನಡೆಸಿದರು. ನಗರದ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತಮಾಲೆ ಧರಿಸಿರುವ ಅವರು ಕೆಲವು ಮನೆಗಳಿಗೆ ತೆರಳಿ ಅಕ್ಕಿ, ಬೆಲ್ಲ, ವೀಳ್ಯದೆಲೆ, ಅಡಿಕೆ, ತೆಂಗಿನ ಕಾಯಿಯನ್ನು ಸಂಗ್ರಹಿಸಿದರು.

ಹಾಂದಿಯಲ್ಲಿ ದತ್ತ ಜಯಂತಿ ಹಿನ್ನೆಲೆ ಶೋಭಾ ಯಾತ್ರೆ:
ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಾಂದಿಯಲ್ಲಿ ದತ್ತ ಜಯಂತಿ ಪ್ರಯುಕ್ತ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹರಿಹರೇಶ್ವರ ದೇವಸ್ಥಾನದ ಮುಂಭಾಗದಿಂದ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಆಜಾದ್ ಸರ್ಕಲ್ ನ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ಸಮಾರೋಪಗೊಂಡಿತು.

ಬಾಳೆಹೊನ್ನೂರಿನಲ್ಲೂ ದತ್ತ ಜಯಂತಿ ಹಿನ್ನೆಲೆ ಶೋಭಾ ಯಾತ್ರೆ:
ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪಟ್ಟಣದ ಜೇಸಿ ವೃತ್ತದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಮಾರ್ಕಾಂಡೇಶ್ವರ ದೇಗುಲದ ಬಳಿಯಿಂದ ದತ್ತಾತ್ರೇಯಸ್ವಾಮಿಯ ಅಲಂಕೃತ ವಿಗ್ರಹ ಹೊತ್ತ ವಾಹನದೊಂದಿಗೆ ಶೋಭಾಯಾತ್ರೆ ನಡೆಯಿತು.

ವಿಶ್ವ ಹಿಂದೂ ಪರಿಷತ್ ಬಾಳೆಹೊನ್ನೂರು ಘಟಕದ ಕಾರ್ಯದರ್ಶಿ ದಿವಿರ್ ಮಲ್ನಾಡ್ ಮಾತನಾಡಿ, ಬಜರಂಗದಳದ ಹೋರಾಟದ ಫಲವಾಗಿ ಇಂದು ದತ್ತಪೀಠದ ಹಿಂದೂಗಳ ಪರವಾಗುತ್ತಿದ್ದು, ಬಾಳೆಹೊನ್ನೂರಿನ ಬಿ.ಎಸ್.ವಿಠ್ಠಲರಾವ್ ಅವರ ಕಾನೂನು ಹೋರಾಟ ಮುಖ್ಯ ಪಾತ್ರ ವಹಿಸಿದೆ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.