ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ 3 ವರ್ಷಗಳಿಗೊಮ್ಮೆ ನಡೆಸುವ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಲ್ಪನಾ ಪ್ರದೀಪ್ ಅವರನ್ನು ಆಯ್ಕೆ ಮಾಡಲಾಯಿತು. ಈ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕಾವ್ಯ ಸುರೇಶ್, ಕಾರ್ಯದರ್ಶಿಯಾಗಿ ಅಮಿತಾ ವಿಜೇಂದ್ರ, ಸಹ ಕಾರ್ಯದರ್ಶಿಯಾಗಿ ಕೋಮಲ ರವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ; ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ಆಯ್ಕೆ; ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿ ಇಲ್ಲಿದೆ

ನೂತನ ಅಧ್ಯಕ್ಷೆ ಕಲ್ಪನಾ ಪ್ರದೀಪ್ ಮಾತನಾಡಿ, ಹಿಂದೆ ಈ ಸಂಘವನ್ನು ಕಷ್ಟಪಟ್ಟು ಕಟ್ಟಿ ಈ ಮಟ್ಟದಲ್ಲಿ ಬೆಳೆದು ನಿಂತಿದೆ. ಇನ್ನು ಉತ್ತಮ ಸ್ಥಾನಕ್ಕೆ ಸಂಘವನ್ನು ತರಲು ಪ್ರಯತ್ನಿಸುತ್ತೇವೆ. ಸಂಘದ ಕಾರ್ಯವನ್ನು ನಮ್ಮ ಮನೆಯ ಕೆಲಸವೆಂದು ತಿಳಿದು ಮಾಡಲು ನಾವು ಸಿದ್ಧವಾಗಿ ಬಂದಿದ್ದೇವೆ. ನಿಮ್ಮ ಸಹಕಾರ, ಪ್ರೀತಿ, ವಿಶ್ವಾಸ ಸದಾ ನಮ್ಮೊಂದಿಗೆ ಇರಲಿ ಎಂದರು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?
ಮಹಿಳಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಈ ಸಂಘ ರಾಜ್ಯದಲ್ಲೇ ಅತ್ಯುತ್ತಮ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಅಧಿಕಾರಕ್ಕಿಂತ ಜವಾಬ್ದಾರಿ ಹೆಚ್ಚಾಗಿದೆ. ಈ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಹೋಗುವ ತಂಡ ನಿಮ್ಮ ಜೊತೆ ಇದೆ. ನಿಮಗೆ ಸಿಕ್ಕಿರುವ ಈ ಅವಕಾಶವನ್ನ ಉತ್ತಮವಾಗಿ ಬಳಸಿಕೊಂಡು ಸಂಘದ ಹೆಸರನ್ನು ಇನ್ನಷ್ಟು ಹೆಚ್ಚಿಸಿ ಎಂದರು. ಸಂಘಕ್ಕೆ ಆಯ್ಕೆಯಾದ ಎಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಇದನ್ನೂ ಓದಿ; ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ; LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಚಿಕ್ಕಮಗಳೂರಿನ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಪ್ರತಿಷ್ಠಿತ ಸಂಘವಾಗಿದ್ದು, ಶೋಷಿತ ವರ್ಗ, ಬಡವರು ಸೇರಿದಂತೆ ಇತರರ ಉನ್ನತೀಕರಣಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಈ ಬಾರಿ ಆಯ್ಕೆಯಾಗಿರುವ 15 ಜನಗಳ ತಂಡ ಉತ್ತಮ ಆಗಿದ್ದು, ಅವರ ಸಲಹೆ ಮತ್ತು ಸಹಕಾರವನ್ನು ಅಧ್ಯಕ್ಷರು ಪಡೆದು ಉತ್ತಮವಾದ ಕೆಲಸಗಳನ್ನು ಈ ಸಂಘ ಕೈಗೊಳ್ಳಲಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ ರಾಜಶೇಖರ್ ತಿಳಿಸಿದರು.
ಚಿಕ್ಕಮಗಳೂರು: ಶಾಲಾ- ಕಾಲೇಜು ಸಮೀಪ ತಂಬಾಕು ಮಾರಾಟ | ಒಂದೇ ದಿನದಲ್ಲಿ 229 ಪ್ರಕರಣ ದಾಖಲು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಾದ್ಯಂತ ನಿನ್ನೆ ಪೊಲೀಸ್ ತಂಡ ವಿಶೇಷ ಅಭಿಯಾನ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಶಾಲಾ ಕಾಲೇಜುಗಳ 200 ಮೀ. ಅಂತರದಲ್ಲಿರುವ ಎಲ್ಲಾ ಅಂಗಡಿ, ಬೇಕರಿ, ಕ್ಯಾಂಟೀನ್, ಜೂಸ್ ಸೆಂಟರ್ ಗಳಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ COTPA ಅಡಿಯಲ್ಲಿ 229 ಪ್ರಕರಣಗಳನ್ನು ದಾಖಲಿಸಿ, 27,650/- ದಂಡ ವಿಧಿಸಿದ್ದಾರೆ.












