ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರು ಮಸೀದಿಕೆರೆಯಿಂದ ರಂಭಾಪುರಿ ಪೀಠಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಬುಧವಾರ ಕಡಿದ ಸ್ಥಿತಿಯಲ್ಲಿರುವ ಹಸುವಿನ ತಲೆ ಪತ್ತೆಯಾಗಿದೆ.
ಕಿಡಿಗೇಡಿಗಳು ಮಾಂಸಕ್ಕಾಗಿ ಹಸುವನ್ನು ಕಡಿದು ತಲೆಯನ್ನು ಮುಖ್ಯರಸ್ತೆಯಲ್ಲಿ ಎಸೆದು ಹೋಗಿರುವ ಶಂಕೆಯಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವುದಾಗಿ ಪಿಎಸ್‌ಐ ಅಂಬರೀಷ್ ತಿಳಿಸಿದ್ದಾರೆ.

ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗಿದೆ.















