ಎನ್.ಆರ್ ಪುರ: ಸಿಎಂ ವಿರುದ್ಧ ವಾಟ್ಸ್‌ ಆ್ಯಪ್‌ ನಲ್ಲಿ ಅಪಪ್ರಚಾರ; ದೂರು ದಾಖಲು

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಮುಖ್ಯಮಂತ್ರಿ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸುಳ್ಳು ವಿಡಿಯೊ ಪ್ರಸಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

 

ಇದನ್ನೂ ಓದಿ; ಗ್ರಾಹಕರೇ ಗಮನಿಸಿ; ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ;ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ!

ರಾಜಕೀಯ ವೇದಿಕೆ ಎಂಬ ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಶರತ್ ಗೌಡ ಎಂಬುವರು ಈ ಹಿಂದೆ 2009 ರಲ್ಲಿ ಯಡಿಯೂರಪ್ಪರವರು ಮುಖ್ಯಮಂತ್ರಿಗಳಾಗಿದ್ದಾಗ ಡಿಸೆಂಬರ್ ತಿಂಗಳಿನಲ್ಲಿ ಉಗ್ರಪ್ಪನವರು ಕೌನ್ ಸಿಲ್ ನಲ್ಲಿ ಸಾಲಮನ್ನಾ ಮಾಡಿ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಯಡಿರೂಪ್ಪರವರು “ನಮ್ಮ ಹತ್ತಿರ ಪ್ರಿಟಿಂಗ್ ಮಿಷಿನ್ ಇದಿಯಾ, ಎಲ್ಲಿಂದ ತರಲಿ ದುಡ್ಡು ಏನೋ ಚುನಾವಣೆಗೋಸ್ಕರ ಆಶ್ವಾಸನೆ ನೀಡಿರುತ್ತೇವೆ, ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ” ಎಂದು ಪ್ರಶ್ನೆ ಮಾಡಿದ್ದರು. ಅದೇ ಹೇಳಿಕೆಯನ್ನು ತಿರುಚಿರುವ ವಿಡಿಯೊ ಹರಿಬಿಟ್ಟಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ; ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಆಫರ್; ಯಾವ ಇವಿಗೆ ಎಷ್ಟಿದೆ ನೋಡಿ

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ರತನ್ ಗೌಡ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಉಪೇಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಪಿ.ಅಭಿಲಾಷ್, ಯುವ ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ದೇವಂತ್, ಪಟ್ಟಣ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಹುಣಸೆಕೊಪ್ಪ ದೂರು ನೀಡಿದ್ದಾರೆ.

 

ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕಿರುಕುಳ: ಡಿ.ಎನ್.ಜೀವರಾಜ್
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಶಾಸಕರ ವೈಫಲ್ಯಗಳ ವಿರುದ್ಧ ದನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜ ಬೇಕಿಲ್ಲ, ಎದೆಗುಂದ ಬೇಕಿಲ್ಲ.ಸಂವಿಧಾನ ನಮಗೆ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕಲು ಯಾರಿಗೂ ಅಧಿಕಾರ ನೀಡಿಲ್ಲ, ಈ ನಿಟ್ಟಿನಲ್ಲಿ ಕ್ಷೇತ್ರದ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ಕಾನೂನು ಸಹಾಯದ ಮೂಲಕ ತಕ್ಷಣ ಬರಲಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಯಪುರ: ಬಾಲಗಂಗಾಧರನಾಥ ಮಹಾಸ್ವಾಮಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮ

 

ಜಯಪುರ:  (ನ್ಯೂಸ್ ಮಲ್ನಾಡ್ ವರದಿ) ಜನ ಸಾಮಾನ್ಯರು ಸಂಸ್ಕೃತವನ್ನು ಕಲಿಯಬೇಕು ಆ ಮೂಲಕ ಹಿಂಧೂ ಧರ್ಮದ ಸಾರವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಂಸ್ಕೃತ ಶಾಲಾ ಕಾಲೇಜುಗಳನ್ನು ತೆರೆದ ಬಾಲಗಂಗಾಧರನಾಥ ಮಹಾಸ್ವಾಮಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಘೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಶಾಖಾ ಮಠದ ಪೂಜ್ಯ ಶ್ರೀಗಳಾದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ; ಸಂಗೀತ ಶೃಂಗೇರಿ ಹುಟ್ಟಿದ್ದೆಲ್ಲಿ? ಆಕೆಗೆ ಶೃಂಗೇರಿಗೂ ಇರೋ ನಂಟೇನು?; ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!

ಮೇಗುಂದಾ ಹೋಬಳಿಯಲ್ಲಿ ಶನಿವಾರ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಆದ್ಯಾತ್ಮ ಅನುಷ್ಠಾನದ ಜೊತೆಗೆ, ಸುಶಿಕ್ಷಿತ ಸಮಾಜ ನಿರ್ಮಾಣವೂ ಮಠಾಧೀಶರ ಕರ್ತವ್ಯ ಎಂದು ನೂರಾರು ಶಿಕ್ಷಣ ಸಂಸ್ಥೆ, ಹತ್ತಾರು ಆಸ್ಪತ್ರೆಯನ್ನು ತೆರೆದರು. ದಿನ ಪತ್ರಿಕೆಯ ಜಾಹಿರಾತು ನೋಡಿ, ಮಹಾ ಸಂಸ್ಥಾನದ ಪೀಠಾಧೀಶರಾದ ಪೂಜ್ಯರು, ಜಾತಿಮತಗಳ ಭೇದವೆಣಿಸದೆ ಸಮಾಜದ ಉದ್ದಾರಕ್ಕಾಗಿ ರಾಜ್ಯದಾದ್ಯಂತ 507 ಸಂಸ್ಥೆಗಳನ್ನು ಆರಂಭಿಸಿದರು. ಅಂಧ ಮಕ್ಕಳಶಾಲೆ, ಮೆಡಿಕಲ್, ಸಂಸ್ಕೃತ, ಪದವಿ, ಬಿಎಡ್, ಇಂಜೀನಿಯರಿಂಗ್ ಸೇರಿದಂತೆ ಇತರೆ ಕಾಲೇಜುಗಳನ್ನು ತೆರೆದಿದ್ದು, ಇದೀಗ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ ಎಂದರು.

ಆದ್ಯಾತ್ಮ ಅನುಷ್ಠಾನದಷ್ಟೆ, ಮನುಜಕುಲ ಹಾಗೂ ಪಂಚಭೂತಗಳ ಸೇವೆಯೂ ಯೋಗಿಗಳ ಕರ್ತವ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾಯೋಗಿ ಬಾಲಗಂಗಾಧರನಾಥ ಮಹಾಸ್ವಾಮಿಗಳು –  ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ.

ಇದನ್ನೂ ಓದಿ; ಶೃಂಗೇರಿ ಮಠ ಉಳಿಯೋಕೆ ಟಿಪ್ಪು ಸುಲ್ತಾನ್ ಕಾರಣ: ಕಾಂಗ್ರೆಸ್ ಶಾಸಕ

ಬಿಜಿಎಸ್ ಆವರಣದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ:
ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮನೆ ಮನೆಗಳಲ್ಲಿ ಪಾದ ಕಾಣಿಕೆಯ ಮೂಲಕ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತು ಸಾವಿರ ಹಣದಲ್ಲಿ ಚಿಕ್ಕಮಗಳೂರಿನಲ್ಲಿ ಇಂಜೀನಿಯರಿಂಗ್ ಕಾಲೇಜು ಆರಂಭಿಸಿದರು. ಜಯಪುರದ ಶಾಲೆಯ ದುಸ್ಥಿತಿ ಕಂಡ ಸ್ವಾಮೀಜಿ ಸುಸಜ್ಜಿತ ಶಾಲೆ ನಿರ್ಮಿಸಿ ಹೋಬಳಿಯ ನೂರಾರು ಮಕ್ಕಳ ಶಿಕ್ಷಣಕ್ಕೆ ಕಾರಣವಾಗಿದ್ದಾರೆ. ಇಂತಹ ಪೂಜ್ಯರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಶೃಂಗೇರಿಯ ಬಿಜಿಎಸ್ ಆವರಣದಲ್ಲಿ ಡಿಸೆಂಬರ್ 27 ರಂದು ನಡೆಯಲಿದ್ದು, ಪೂಜ್ಯ ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಜಾಲ್ಮರ ಸುಬ್ರಾವ್ ರವರು ಪೂಜ್ಯ ಶ್ರೀಗಳ ಜೀವನದ ಕುರಿತು ಮಾಡಿರುವ ಹರಿಕಥೆಯ ದ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಜಿಎಸ್ ಗೌರವ ಕಾರ್ಯದರ್ಶಿ ಎ ಸಿ ವಜ್ರಪ್ಪ, ಕಾಂಗ್ರೇಸ್ ಮುಖಂಡ ಹೆಚ್ ಎಮ್ ಸತೀಶ್, ಕಾಫಿ ಬೆಳೆಗಾರ ಕೌಳಿ ಶ್ರೀನಿವಾಸ ಗೌಡ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್, ಬಿಜಿಎಸ್ ಪ್ರಾಂಶುಪಾಲರುಗಳಾದ ಡಾ. ಮುಸ್ತಾಕ್ ಅಹಮದ್, ಮುರುಳಿಧರ, ಉಪನ್ಯಾಸಕಿ ಗಾಯತ್ರಿದೇವಿ ಇತರರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.