ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಡಿಸೆಂಬರ್ 17 ರಿಂದ ಆರಂಭಗೊಂಡಿರುವ ದತ್ತ ಜಯಂತಿ ಡಿಸೆಂಬರ್ 26 ರವರೆಗೆ ನಡೆಯಲಿದೆ. ಅತ್ಯಂತ ಕಟ್ಟೆಚ್ಚರದಿಂದ ದತ್ತ ಜಯಂತಿ ಆಚರಣೆಗೆ ಪ್ಲ್ಯಾನ್ ಮಾಡಿಕೊಂಡಿದ್ದು, ಇದರ ಭಾಗವಾಗಿ ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್ ಇಲಾಖೆ ಗನ್ ಮ್ಯಾನ್ ನೇಮಕ ಮಾಡಿದೆ.
ಇದನ್ನೂ ಓದಿ; ಗ್ರಾಹಕರೇ ಗಮನಿಸಿ; ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ;ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ!

ಕಳೆದ ಬಿಜೆಪಿ ಸರ್ಕಾರದಲ್ಲಿ ನೇಮಕವಾಗಿರುವ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಜಿಲ್ಲಾ ಪೊಲೀಸ್ ಗನ್ ಮ್ಯಾನ್ ಗಳನ್ನು ನೇಮಿಸಿದ್ದು, ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಎಸ್.ಎಂ ಬಾಷಾ, ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಂ ಭಟ್ ಹಾಗೂ ಮುಜಾವರ್ ಗಳಾದ ಸೈಯದ್ ಅಖಿಲ್ ಪಾಷಾ ಹಾಗೂ ಇಸ್ಮಾಯಿಲ್ ಸೇರಿದಂತೆ ಐವರಿಗೆ ಗನ್ ಮ್ಯಾನ್ ಗಳನ್ನು ನೇಮಿಸಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರು ಈ ಆದೇಶ ನೀಡಿದ್ದು, ಮುಂದಿನ ಹದಿನೈದು ದಿನಗಳ ಕಾಲ ದಿನದ 24 ಗಂಟೆಗಳ ಕಾಲವೂ ಐವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ; ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಆಫರ್; ಯಾವ ಇವಿಗೆ ಎಷ್ಟಿದೆ ನೋಡಿ
ಜಯಪುರ: ಬಾಲಗಂಗಾಧರನಾಥ ಮಹಾಸ್ವಾಮಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮ
ಇದನ್ನೂ ಓದಿ; ಸಂಗೀತ ಶೃಂಗೇರಿ ಹುಟ್ಟಿದ್ದೆಲ್ಲಿ? ಆಕೆಗೆ ಶೃಂಗೇರಿಗೂ ಇರೋ ನಂಟೇನು?; ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!
ಮೇಗುಂದಾ ಹೋಬಳಿಯಲ್ಲಿ ಶನಿವಾರ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಆದ್ಯಾತ್ಮ ಅನುಷ್ಠಾನದ ಜೊತೆಗೆ, ಸುಶಿಕ್ಷಿತ ಸಮಾಜ ನಿರ್ಮಾಣವೂ ಮಠಾಧೀಶರ ಕರ್ತವ್ಯ ಎಂದು ನೂರಾರು ಶಿಕ್ಷಣ ಸಂಸ್ಥೆ, ಹತ್ತಾರು ಆಸ್ಪತ್ರೆಯನ್ನು ತೆರೆದರು. ದಿನ ಪತ್ರಿಕೆಯ ಜಾಹಿರಾತು ನೋಡಿ, ಮಹಾ ಸಂಸ್ಥಾನದ ಪೀಠಾಧೀಶರಾದ ಪೂಜ್ಯರು, ಜಾತಿಮತಗಳ ಭೇದವೆಣಿಸದೆ ಸಮಾಜದ ಉದ್ದಾರಕ್ಕಾಗಿ ರಾಜ್ಯದಾದ್ಯಂತ 507 ಸಂಸ್ಥೆಗಳನ್ನು ಆರಂಭಿಸಿದರು. ಅಂಧ ಮಕ್ಕಳಶಾಲೆ, ಮೆಡಿಕಲ್, ಸಂಸ್ಕೃತ, ಪದವಿ, ಬಿಎಡ್, ಇಂಜೀನಿಯರಿಂಗ್ ಸೇರಿದಂತೆ ಇತರೆ ಕಾಲೇಜುಗಳನ್ನು ತೆರೆದಿದ್ದು, ಇದೀಗ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ ಎಂದರು.
ಆದ್ಯಾತ್ಮ ಅನುಷ್ಠಾನದಷ್ಟೆ, ಮನುಜಕುಲ ಹಾಗೂ ಪಂಚಭೂತಗಳ ಸೇವೆಯೂ ಯೋಗಿಗಳ ಕರ್ತವ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾಯೋಗಿ ಬಾಲಗಂಗಾಧರನಾಥ ಮಹಾಸ್ವಾಮಿಗಳು – ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ.
ಇದನ್ನೂ ಓದಿ; ಶೃಂಗೇರಿ ಮಠ ಉಳಿಯೋಕೆ ಟಿಪ್ಪು ಸುಲ್ತಾನ್ ಕಾರಣ: ಕಾಂಗ್ರೆಸ್ ಶಾಸಕ
ಬಿಜಿಎಸ್ ಆವರಣದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ:
ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮನೆ ಮನೆಗಳಲ್ಲಿ ಪಾದ ಕಾಣಿಕೆಯ ಮೂಲಕ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತು ಸಾವಿರ ಹಣದಲ್ಲಿ ಚಿಕ್ಕಮಗಳೂರಿನಲ್ಲಿ ಇಂಜೀನಿಯರಿಂಗ್ ಕಾಲೇಜು ಆರಂಭಿಸಿದರು. ಜಯಪುರದ ಶಾಲೆಯ ದುಸ್ಥಿತಿ ಕಂಡ ಸ್ವಾಮೀಜಿ ಸುಸಜ್ಜಿತ ಶಾಲೆ ನಿರ್ಮಿಸಿ ಹೋಬಳಿಯ ನೂರಾರು ಮಕ್ಕಳ ಶಿಕ್ಷಣಕ್ಕೆ ಕಾರಣವಾಗಿದ್ದಾರೆ. ಇಂತಹ ಪೂಜ್ಯರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಶೃಂಗೇರಿಯ ಬಿಜಿಎಸ್ ಆವರಣದಲ್ಲಿ ಡಿಸೆಂಬರ್ 27 ರಂದು ನಡೆಯಲಿದ್ದು, ಪೂಜ್ಯ ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಜಾಲ್ಮರ ಸುಬ್ರಾವ್ ರವರು ಪೂಜ್ಯ ಶ್ರೀಗಳ ಜೀವನದ ಕುರಿತು ಮಾಡಿರುವ ಹರಿಕಥೆಯ ದ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜಿಎಸ್ ಗೌರವ ಕಾರ್ಯದರ್ಶಿ ಎ ಸಿ ವಜ್ರಪ್ಪ, ಕಾಂಗ್ರೇಸ್ ಮುಖಂಡ ಹೆಚ್ ಎಮ್ ಸತೀಶ್, ಕಾಫಿ ಬೆಳೆಗಾರ ಕೌಳಿ ಶ್ರೀನಿವಾಸ ಗೌಡ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್, ಬಿಜಿಎಸ್ ಪ್ರಾಂಶುಪಾಲರುಗಳಾದ ಡಾ. ಮುಸ್ತಾಕ್ ಅಹಮದ್, ಮುರುಳಿಧರ, ಉಪನ್ಯಾಸಕಿ ಗಾಯತ್ರಿದೇವಿ ಇತರರಿದ್ದರು.












