ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನಲೆ ಜೆಸಿಬಿಯಿಂದ ಮಣ್ಣು ತೆಗೆಯುವ ವೇಳೆ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಕುಸಿದು, ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದಿದೆ.
ಇದನ್ನೂ ಓದಿ; ಗ್ರಾಹಕರೇ ಗಮನಿಸಿ; ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ;ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ!

ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಈ ಅವಘಡ ನಡೆದಿದೆ. ಜೆಸಿಬಿ ಯಂತ್ರ ಬಳಸಿದಾಗ ರಸ್ತೆಯ ತಡೆಗೋಡೆ ಸಮೀಪ ನಾಲ್ವರು ಕಾರ್ಮಿಕರು ಕೆಲಸ ಮಾಡುವಾಗ ಎಕಾಏಕಿ ಮಣ್ಣು ಕುಸಿದಿದೆ. ತಕ್ಷಣವೇ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಸ್ವಲ್ವ ಸಮಯದ ವೇಳೆ ಮತ್ತೊಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದೆ. ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಸತತ ಒಂದು ಗಂಟೆ ಕಾಲ ಮೂರು ಜೆಸಿಬಿ ಮೂಲಕ ಕಾರ್ಯಾಚಾರಣೆ ಮಾಡಲಾಗಿತ್ತು. ಆದರೆ ಒಂದೂವರೆ ಗಂಟೆಗಳ ಕಾಲ ಮಣ್ಣಿನಡಿಯಲ್ಲಿ ಸಿಲುಕಿದ ಕಾರಣ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ರಾಜ್ ಕಮಲ್ ಗುತ್ತಿಗೆ ಕಂಪೆನಿಗೆ ಸೇರಿದ ಜೆಸಿಬಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಆಫರ್; ಯಾವ ಇವಿಗೆ ಎಷ್ಟಿದೆ ನೋಡಿ
ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಯಪುರ: ಬಾಲಗಂಗಾಧರನಾಥ ಮಹಾಸ್ವಾಮಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮ
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಜನ ಸಾಮಾನ್ಯರು ಸಂಸ್ಕೃತವನ್ನು ಕಲಿಯಬೇಕು ಆ ಮೂಲಕ ಹಿಂಧೂ ಧರ್ಮದ ಸಾರವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಂಸ್ಕೃತ ಶಾಲಾ ಕಾಲೇಜುಗಳನ್ನು ತೆರೆದ ಬಾಲಗಂಗಾಧರನಾಥ ಮಹಾಸ್ವಾಮಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಘೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಶಾಖಾ ಮಠದ ಪೂಜ್ಯ ಶ್ರೀಗಳಾದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ; ಸಂಗೀತ ಶೃಂಗೇರಿ ಹುಟ್ಟಿದ್ದೆಲ್ಲಿ? ಆಕೆಗೆ ಶೃಂಗೇರಿಗೂ ಇರೋ ನಂಟೇನು?; ನಿಮ್ಮೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!
ಮೇಗುಂದಾ ಹೋಬಳಿಯಲ್ಲಿ ಶನಿವಾರ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಆದ್ಯಾತ್ಮ ಅನುಷ್ಠಾನದ ಜೊತೆಗೆ, ಸುಶಿಕ್ಷಿತ ಸಮಾಜ ನಿರ್ಮಾಣವೂ ಮಠಾಧೀಶರ ಕರ್ತವ್ಯ ಎಂದು ನೂರಾರು ಶಿಕ್ಷಣ ಸಂಸ್ಥೆ, ಹತ್ತಾರು ಆಸ್ಪತ್ರೆಯನ್ನು ತೆರೆದರು. ದಿನ ಪತ್ರಿಕೆಯ ಜಾಹಿರಾತು ನೋಡಿ, ಮಹಾ ಸಂಸ್ಥಾನದ ಪೀಠಾಧೀಶರಾದ ಪೂಜ್ಯರು, ಜಾತಿಮತಗಳ ಭೇದವೆಣಿಸದೆ ಸಮಾಜದ ಉದ್ದಾರಕ್ಕಾಗಿ ರಾಜ್ಯದಾದ್ಯಂತ 507 ಸಂಸ್ಥೆಗಳನ್ನು ಆರಂಭಿಸಿದರು. ಅಂಧ ಮಕ್ಕಳಶಾಲೆ, ಮೆಡಿಕಲ್, ಸಂಸ್ಕೃತ, ಪದವಿ, ಬಿಎಡ್, ಇಂಜೀನಿಯರಿಂಗ್ ಸೇರಿದಂತೆ ಇತರೆ ಕಾಲೇಜುಗಳನ್ನು ತೆರೆದಿದ್ದು, ಇದೀಗ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ ಎಂದರು.
ಆದ್ಯಾತ್ಮ ಅನುಷ್ಠಾನದಷ್ಟೆ, ಮನುಜಕುಲ ಹಾಗೂ ಪಂಚಭೂತಗಳ ಸೇವೆಯೂ ಯೋಗಿಗಳ ಕರ್ತವ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾಯೋಗಿ ಬಾಲಗಂಗಾಧರನಾಥ ಮಹಾಸ್ವಾಮಿಗಳು – ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ.
ಇದನ್ನೂ ಓದಿ; ಶೃಂಗೇರಿ ಮಠ ಉಳಿಯೋಕೆ ಟಿಪ್ಪು ಸುಲ್ತಾನ್ ಕಾರಣ: ಕಾಂಗ್ರೆಸ್ ಶಾಸಕ
ಬಿಜಿಎಸ್ ಆವರಣದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ:
ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮನೆ ಮನೆಗಳಲ್ಲಿ ಪಾದ ಕಾಣಿಕೆಯ ಮೂಲಕ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತು ಸಾವಿರ ಹಣದಲ್ಲಿ ಚಿಕ್ಕಮಗಳೂರಿನಲ್ಲಿ ಇಂಜೀನಿಯರಿಂಗ್ ಕಾಲೇಜು ಆರಂಭಿಸಿದರು. ಜಯಪುರದ ಶಾಲೆಯ ದುಸ್ಥಿತಿ ಕಂಡ ಸ್ವಾಮೀಜಿ ಸುಸಜ್ಜಿತ ಶಾಲೆ ನಿರ್ಮಿಸಿ ಹೋಬಳಿಯ ನೂರಾರು ಮಕ್ಕಳ ಶಿಕ್ಷಣಕ್ಕೆ ಕಾರಣವಾಗಿದ್ದಾರೆ. ಇಂತಹ ಪೂಜ್ಯರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಶೃಂಗೇರಿಯ ಬಿಜಿಎಸ್ ಆವರಣದಲ್ಲಿ ಡಿಸೆಂಬರ್ 27 ರಂದು ನಡೆಯಲಿದ್ದು, ಪೂಜ್ಯ ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಜಾಲ್ಮರ ಸುಬ್ರಾವ್ ರವರು ಪೂಜ್ಯ ಶ್ರೀಗಳ ಜೀವನದ ಕುರಿತು ಮಾಡಿರುವ ಹರಿಕಥೆಯ ದ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜಿಎಸ್ ಗೌರವ ಕಾರ್ಯದರ್ಶಿ ಎ ಸಿ ವಜ್ರಪ್ಪ, ಕಾಂಗ್ರೇಸ್ ಮುಖಂಡ ಹೆಚ್ ಎಮ್ ಸತೀಶ್, ಕಾಫಿ ಬೆಳೆಗಾರ ಕೌಳಿ ಶ್ರೀನಿವಾಸ ಗೌಡ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್, ಬಿಜಿಎಸ್ ಪ್ರಾಂಶುಪಾಲರುಗಳಾದ ಡಾ. ಮುಸ್ತಾಕ್ ಅಹಮದ್, ಮುರುಳಿಧರ, ಉಪನ್ಯಾಸಕಿ ಗಾಯತ್ರಿದೇವಿ ಇತರರಿದ್ದರು.












