ಕಡೂರು: (ನ್ಯೂಸ್ ಮಲ್ನಾಡ್ ವರದಿ) ಮೇಲೆ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಕಡೂರು ತಾಲೂಕು ದೊಡ್ಡ ಪಟ್ಟಣಗೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ದೊಡ್ಡಪಟ್ಟಣಗೆರೆ ದೇವಸ್ಥಾನಕ್ಕೆ ಸಂಬಂಧಿಸಿದ ಮರವನ್ನು ಕಡಿಯುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಸೈಯದ್ ಎಂಬಾತ ಮರದ ಮೇಲೆ ಹತ್ತಿ ಮರ ಕಡಿಯುತ್ತಿರವ ವೇಳೆ ಮರದ ಎರಡು ಕೊಂಬೆಗಳ ಮಧ್ಯೆ ಸಿಲುಕಿ ಎರಡು ಗಂಟೆಗಳವರೆಗೂ ನರಳಾಡಿದ್ದಾನೆ.

ಅಲ್ಲಿದ್ದವರು ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರದಲ್ಲಿ ಸಿಲುಕಿಕೊಂಡಿದ್ದ ಸೈಯದ್‌ನನ್ನು ರಕ್ಷಣೆ ಮಾಡಿದ್ದಾರೆ. ಮರದ ಕೊಂಬೆಯಲ್ಲಿ ಸಿಲುಕಿಕೊಂಡಿದ್ದ ಸೈಯದ್‌ನ ಕಾಲು ಮತ್ತು ಬೆನ್ನಿಗೆ ತೀವ್ರವಾದ ಗಾಯವಾಗಿದ್ದು, ತಕ್ಷಣ ಕಡೂರು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು.


ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)
📅 ದಿನಾಂಕ: 17 ಮೇ 2025
🕒 ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
📍 ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ
ಯಾರು ಭಾಗವಹಿಸಬಹುದು?
🎓 BCA / BE / / BSc / MBA ಪದವಿಧರರು
💡 ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು
ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!
ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು













