ಕುದುರೆಗುಂಡಿ (ಎನ್. ಆರ್. ಪುರ): (ನ್ಯೂಸ್ ಮಲ್ನಾಡ್ ವರದಿ) ದತ್ತ ಜಯಂತಿ ಮತ್ತು ಶ್ರೀಕ್ಷೇತ್ರ ಕಪಿಲತೀರ್ಥ (ಕಪಿಲಕಟ್ಟೆ) ದೀಪೋತ್ಸವ ಹಾಗೂ ಹಿಂದೂ ಸಂಗಮ ಧಾರ್ಮಿಕ ಸಭೆಯನ್ನು ಇದೇ ಗುರುವಾರ 12.12.2024 ರಂದು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್

ಸನಾತನ ಹಿಂದೂ ಸಮಾಜ ಪರಿಷತ್ (ರಿ.) ಕುದುರೆಗುಂಡಿ ಪ್ರಖಂಡ, ಶ್ರೀ ಹರಿಹರಪುರ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ ಪರಿಪೂರ್ಣ ಆಶೀರ್ವಾದದೊಂದಿಗೆ ದತ್ತ ಜಯಂತಿ ಹಾಗೂ ಶ್ರೀಕ್ಷೇತ್ರ ಕಪಿಲತೀರ್ಥ (ಕಪಿಲಕಟ್ಟೆ) ದೀಪೋತ್ಸವ ಹಾಗೂ ಹಿಂದೂ ಸಂಗಮ ಧಾರ್ಮಿಕ ಸಭೆಯನ್ನು ಕುದುರೆಗುಂಡಿ ಪೋಸ್ಟ್ ಆಫೀಸ್ ಪಕ್ಕದಲ್ಲಿ ಇದೇ ಗುರುವಾರ 12.12.2024 ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ; ರಾಜ್ಯದ ಕಾರ್ಮಿಕರೇ ಗಮನಕ್ಕೆ; ನೋಂದಣಿಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ!
ಈ ಕಾರ್ಯಕ್ರಮಕ್ಕೆ ಪ್ರಖರ ವಾಗ್ಮಿಗಳು ಮತ್ತು ಪತ್ರಕರ್ತರಾದ ಪ್ರತಾಪ್ ಸಿಂಹ ಹಾಗೂ ಆತ್ಮ ರಕ್ಷಣಾ ಕಲೆ ತರಬೇತುದಾರರು ಹಾಗೂ ಪ್ರಖರ ವಾಗ್ಮಿಗಳು ಆದ ಪ್ರಕಾಶ್ ಮಲ್ಪೆ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್












