ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಕೀಲರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಇದನ್ನೂ ಓದಿ; ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 2975 ಹುದ್ದೆ, 10th ವಿದ್ಯಾರ್ಹತೆ; ಈಗಲೇ ಅರ್ಜಿ ಸಲ್ಲಿಸಿ

ಏನಿದು ಘಟನೆ:
ಬೊಲೆರೋ ವಾಹನದಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾರಿನಲ್ಲಿ ವೇಗವಾಗಿ ಅಡ್ಡ ಬಂದು ಬೊಲೆರೋ ಚಾಲಕನಿಗೆ ವಕೀಲ ಪ್ರಶ್ನೆ ಮಾಡಿದ್ದಾರೆ. ಆಸ್ಪತ್ರೆಯ ಮುಂದೆ ರೋಗಿಯನ್ನು ನೋಡಿ ಬೋಲೇರೊ ಚಾಲಕರನ್ನು ಪ್ರಶ್ನೆ ಮಾಡಿದ್ದಕ್ಕೆ ವಕೀಲ ಕ್ಷಮೆ ಕೇಳಿದ್ದಾರೆ. ವಕೀಲರು ಕ್ಷಮೆ ಕೇಳಿದರೂ ಸಹ ಯುವಕರ ಗುಂಪೊಂದು ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ವಕೀಲರಾದಂತಹ ಪೃಥ್ವಿ ಮತ್ತು ಮಂಜುನಾಥ್ ಎನ್ನುವ ಇಬ್ಬರು ವಕೀಲರ ಮೇಲೆ ನಾಲ್ವರು ಯುವಕರು ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರು ವಕೀಲರ ಮೇಲೆ ಯುವಕರು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ; ಜಿಲ್ಲೆಯ ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 1170 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ವಕೀಲರ ಮೇಲೆ ಹಲ್ಲೆಗೆ ಚಿಕ್ಕಮಗಳೂರು ಬಾರ್ ಕೌನ್ಸಿಲ್ ಆಕ್ರೋಶವನ್ನು ಹೊರ ಹಾಕಿದ್ದು, ಘಟನೆಯ ಕುರಿತಂತೆ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?













