ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಲವು ವರ್ಷಗಳ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಜ. 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ತಾಲೂಕಿನ ಎಲ್ಲಾ ಮನೆಗಳಿಗೆ ಹಂಚುವ ಅಭಿಯಾನ ಜ.1 ರಿಂದ 15 ದಿನಗಳ ಕಾಲ ನಿರಂತರವಾಗಿ ನಡೆಯುತ್ತಿದೆ. ಇಡೀ ದೇಶ ಸದ್ಯ ಜೈ ಶ್ರೀರಾಮ್ ಎಂದು ಪಠಿಸುತ್ತಿದೆ. ಹೀಗಿರುವಾಗ ಕಾಫಿನಾಡು ಚಿಕ್ಕಮಗಳೂರು ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ; ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ

ಚಿಕ್ಕಮಗಳೂರು ಜಿಲ್ಲೆಯಲ್ಲೂ ರಾಮ ಮಂದಿರದ ಮಂತ್ರಾಕ್ಷತೆ ಹಂಚುವ ಅಭಿಯಾನ ನಡೆಯುತ್ತಿದ್ದು, ಇಂಗ್ಲೆಂಡ್ ಪ್ರಜೆಗೂ ಕೂಡ ಮರ್ಯಾದಾ ಪುರುಷೋತಗತ್ತಮ ಪ್ರಭು ಶ್ರೀ ರಾಮನ ಪವಿತ್ರ ಮಂತ್ರಾಕ್ಷತೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ; ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
ಲಂಡನ್ ನ ಹೆರಾಲ್ಡ್ ಗೂ ಸಿಕ್ತೂ ಮಂತ್ರಾಕ್ಷತೆ!
ಹೆರಾಲ್ಡ್ ಮೂಲತಃ ಇಂಗ್ಲೆಂಡ್ ನವರು. ಪ್ರಪಂಚದ 25ಕ್ಕೂ ಹೆಚ್ಚು ದೇಶವನ್ನು ಸೈಕಲ್ ನಲ್ಲೇ ಸುತ್ತಿ, ಭಾರತಕ್ಕೆ 9ನೇ ಬಾರಿ ಆಗಮಿಸಿದ ಹೆರಾಲ್ಡ್ ಸದ್ಯ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಭಾಗದಲ್ಲಿ ಕ್ಯಾಂಪ್ ಹಾಕಿಕೊಂಡಿದ್ದಾರೆ. ಈ ವೇಳೆ ಅವರನ್ನು ಭೇಟಿ ಮಾಡಿದ ಅಲ್ಲಿನ ಗ್ರಾಮಸ್ಥರು ಹೆರಾಲ್ಡ್ ಅವರಿಗೆ ಆತಿಥ್ಯ ನೀಡಿದ್ದಾರೆ. ಮಲೆನಾಡಿನ ಸಂಸ್ಕೃತಿಯ ಬಗ್ಗೆ, ಹಿಂದೂ ಧರ್ಮ, ಭಗವದ್ಗೀತೆ ಹಾಗೂ ಅಯೋಧ್ಯೆ ಹೋರಾಟದ ಕುರಿತಂತೆ ಗ್ರಾಮಸ್ಥರಾದ ವಾಸೇಗೌಡ ಹಾಗೂ ಸಂಪತ್ ಕುಮಾರ್ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡರು. ಹಾಗೆಯೇ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಹೆರಾಲ್ಡ್ ಅವರಿಗೆ ನೀಡಿದ್ದಾರೆ. ಇನ್ನು ಇಂಗ್ಲೆಂಡ್ ನ ಪ್ರಜೆಯಾದ ಹೆರಾಲ್ಡ್ ಕೈಯಲ್ಲಿ ಓಂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಭಾರತಕ್ಕೆ ಇದು ಅವರ 9ನೇ ಭೇಟಿಯಾಗಿದ್ದು, ಹಿಂದೂ ಧರ್ಮದ ಬಗ್ಗೆ ಹೆರಾಲ್ಡ್ ಸಾಕಷ್ಟು ಅಭಿಮಾನ ಹೊಂದಿದ್ದಾರೆ.

ಹಿಂದು ಧರ್ಮದ ಕುರಿತಂತೆ ಹೆರಾಲ್ಡ್ ಅಭಿಮಾನ:
ಹೆರಾಲ್ಡ್ ಪ್ರತಿ ಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ಇಲ್ಲಿನ ಜೀವನಶೈಲಿ, ದೇವಾಲಯಗಳ ನಿರ್ಮಾಣ, ಆಚರಣೆಗಳು ಸೇರಿದಂತೆ ಹಿಂದೂ ಧರ್ಮದ ಕುರಿತು ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಅಲ್ಲದೇ ಅವರ ಕೈಯಲ್ಲಿ ‘ಓಂ’ ಟ್ಯಾಟೂ ಹಾಕಿಸಿಕೊಂಡಿರುವುದು ಕೂಡ ವಿಶೇಷ.
ಜಯಪುರ: ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ಅರೆಸ್ಟ್
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಸರೀಕಟ್ಟೆಯ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ನನ್ನು ಗ್ರಾಮಸ್ಥರೇ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ಶನಿವಾರ ಶ್ರೀ ಸದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಶ್ರೀ ಸದ್ಗುರು ವಿದ್ಯಾ ಮಂದಿರದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲು ಬಂದಿದ್ದ ಬೆಳ್ತಂಗಡಿ ಮೂಲದ ಯೂಟ್ಯೂಬರ್ ಶರತ್ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿ, ಶಾಲೆಯಲ್ಲಿ ಉಳಿದುಕೊಂಡಿದ್ದ.
ಇದನ್ನೂ ಓದಿ; ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ?, ಕೊನೆಯ ದಿನಾಂಕ ಯಾವಾಗ?
ಶನಿವಾರ ಮದ್ಯ ರಾತ್ರಿ ಶಾಲೆಯ ರೂಮಿನ ಬೀಗ ಮುರಿದು ಒಳ ಪ್ರವೇಶಿಸಿ, ಬೀರುವಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಉಂಟಾದ ಶಬ್ಧ ಆಲಿಸಿದ ಹತ್ತಿರದ ಮನೆಯಲ್ಲಿ ವಾಸವಿದ್ದ ಸಿಬ್ಬಂದಿ ರಾಕೇಶ್ ಹಾಗೂ ಅವರ ಪತ್ನಿ ಭವ್ಯ ಆರೋಪಿಯನ್ನು ಹಿಡಿದು, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಘಟನೆ ಮಾಹಿತಿ ಪಡೆದ ಜಯಪುರ ಪಿಎಸೈ ಅಂಬರೀಶ್ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.












