ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಸಲುವಾಗಿ ರಾಮ ಮಂದಿರದ ಮಂತ್ರಾಕ್ಷತೆಯನ್ನು ಶೃಂಗೇರಿ ಜಿಲ್ಲೆಯಾದ್ಯಂತ ಪ್ರತಿ ಮನೆಗೂ ತಲುಪಿಸುವಂತ ಅಭಿಯಾನದ ಹಿನ್ನೆಲೆಯಲ್ಲಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಶೃಂಗೇರಿ ಶಾಖೆಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಯವರಿಗೆ ಪವಿತ್ರ ಮಂತ್ರಾಕ್ಷತೆ ಹಾಗೂ ಅಹ್ವಾನ ಪತ್ರಿಕೆಯನ್ನು ನೀಡಿ ಜನವರಿ.22 ರ ಪ್ರಾಣ ಪ್ರತಿಷ್ಠಾಪನೆಯ ಕುರಿತು ಮಾಹಿತಿ ನೀಡಿ ಆಶೀರ್ವಾದ ಪಡೆದುಕೊಂಡರು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?

ಈ ಸಂದರ್ಭದಲ್ಲಿ ಪರಿವಾರದ ಕಾರ್ಯಕರ್ತರುಗಳಾದ ಆರ್.ಎಸ್.ಎಸ್ ತಾಲ್ಲೂಕು ಸಂಘ ಚಾಲಕ ವಿಶ್ವನಾಥ್, ರಾಮ ಮಂದಿರ ಮಂತ್ರಾಕ್ಷತೆ ಅಭಿಯಾನದ ತಾಲ್ಲೂಕು ಸಂಯೋಜಕ ಗೋಪಾಲ್ ಕೃಷ್ಣ, ಜಿಲ್ಲಾ ಶಾರೀರಿಕ್ ಪ್ರಮುಖ್ ನೂತನ್ ಸೂರ್ಯ, ತಾಲ್ಲೂಕು ಸಹ ಸಂಯೋಜಕ ಸಂತೋಷ್ ಕೆರಮನೆ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಹರೀಶ್ ವಿ ಶೆಟ್ಟಿ, . ಸಾಮಾಜಿಕ ಕಾರ್ಯಕರ್ತರು ನಯನ, ಒಕ್ಕಲಿಗ ಸಂಘದ ಅಧ್ಯಕ್ಷರು ಗೇರ್ ಬೈಲು ಶಂಕರಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ; ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ; LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಮೂಡಿಗೆರೆ: ವಾಕ್ ಮುಗಿಸಿ ರಸ್ತೆ ದಾಟುವಾಗ ಸ್ಕೂಟಿ ಡಿಕ್ಕಿ | ಗಂಭೀರ ಗಾಯ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಾಕ್ ಮುಗಿಸಿ ರಸ್ತೆ ದಾಟುವಾಗ ಸ್ಕೂಟಿ ಡಿಕ್ಕಿಯಾಗಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಕಾಫಿ ಕ್ಯೂರಿಂಗ್ ಬಳಿ ನಡೆದಿದೆ. ಸಮೀರ್ ಅಪಘಾತಕ್ಕೊಳಗಾದ ವ್ಯಕ್ತಿ.
ಬೆಳಗಿನ ಜಾವ ವಾಕ್ ಮುಗಿಸಿ ರಸ್ತೆ ದಾಟುವಾಗ ಸ್ಕೂಟಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಜೊತೆಗೆ ದಾರಿ ಹೊಕ್ಕ ಹಾರಿ ಬಿದ್ದಿದ್ದಾರೆ. ಅಪಘಾತದ ತೀವ್ರತೆಗೆ ಸಮೀರ್ ಕಾಲು ಮುರಿದಿದ್ದು, ಮುಖ-ಕೈ- ಕಾಲಿಗೆ ತೀವ್ರ ಪೆಟ್ಟಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಕೂಟಿ ಚಾಲಕನಿಗೂ ಗಂಭೀರ ಗಾಯವಾಗಿದ್ದು, ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












