ಮೂಡಿಗೆರೆ: ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ | 2 ಪ್ರತ್ಯೇಕ ಪ್ರಕರಣ ದಾಖಲು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

 

ಇದನ್ನೂ ಓದಿ; ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ

ಅನ್ಯಕೋಮಿನ ಯುವಕನೋರ್ವನ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ. ಮಂಗಳವಾರ ಸಂಜೆ ವೇಳೆ ಯುವತಿಯೋರ್ವಳಿಗೆ ಡೈರಿ ಮಿಲ್ಕ್ ಕೊಡುತ್ತಿದ್ದ ಎಂಬ ಕಾರಣಕ್ಕೆ ಬಣಕಲ್ ಮೂಲದ ಯುವಕನಿಗೆ ಮತ್ತೊಂದು ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ. ಮುನೀರ್, ಸಮೀರ್ ಹಲ್ಲೆಗೊಳಗಾದ ಯುವಕರು.

ಇದನ್ನೂ ಓದಿ; ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490

ಕಾರಿನಲ್ಲಿ ಬಂದ ನಾಲ್ವರು ಯುವಕರು, ಹಲ್ಲೆ ನಡೆಸಿದ್ದು, ಈ ವೇಳೆ ಬಸ್ ನಿಲ್ದಾಣ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಪಿಎಸೈ ಮತ್ತು ಸಿಬ್ಬಂದಿ ಮುಂದಾಗುವ ಅನಾಹುತ ತಪ್ಪಿಸಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬAಧ ಐಪಿಸಿ 143, 144, 148, 323, 324, 504, 506, 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನಿಗೆ ಅಟ್ಟಾಡಿಸಿಕೊಂಡು ಹೊಡೆದಿದ್ದ ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ವರದಿ- ತನು ಕೊಟ್ಟಿಗೆಹಾರ)

ಜಯಪುರ: ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ಅರೆಸ್ಟ್

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಸರೀಕಟ್ಟೆಯ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ನನ್ನು ಗ್ರಾಮಸ್ಥರೇ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.

 

ಇದನ್ನೂ ಓದಿ;  ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ PM KISAN ಮೊತ್ತ ಏರಿಕೆ

ಶನಿವಾರ ಶ್ರೀ ಸದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಶ್ರೀ ಸದ್ಗುರು ವಿದ್ಯಾ ಮಂದಿರದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲು ಬಂದಿದ್ದ ಬೆಳ್ತಂಗಡಿ ಮೂಲದ ಯೂಟ್ಯೂಬರ್ ಶರತ್ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿ, ಶಾಲೆಯಲ್ಲಿ ಉಳಿದುಕೊಂಡಿದ್ದ.

ಇದನ್ನೂ ಓದಿ; ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ?, ಕೊನೆಯ ದಿನಾಂಕ ಯಾವಾಗ?

ಶನಿವಾರ ಮದ್ಯ ರಾತ್ರಿ ಶಾಲೆಯ ರೂಮಿನ ಬೀಗ ಮುರಿದು ಒಳ ಪ್ರವೇಶಿಸಿ, ಬೀರುವಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಉಂಟಾದ ಶಬ್ಧ ಆಲಿಸಿದ ಹತ್ತಿರದ ಮನೆಯಲ್ಲಿ ವಾಸವಿದ್ದ ಸಿಬ್ಬಂದಿ ರಾಕೇಶ್ ಹಾಗೂ ಅವರ ಪತ್ನಿ ಭವ್ಯ ಆರೋಪಿಯನ್ನು ಹಿಡಿದು, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಘಟನೆ ಮಾಹಿತಿ ಪಡೆದ ಜಯಪುರ ಪಿಎಸೈ ಅಂಬರೀಶ್ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.