ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಶಾಲೆಯ ಶಿಕ್ಷಕಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಬಣಕಲ್ ಶಾಖೆಯೊಂದರ ಶಿಕ್ಷಕಿ ಆಸಿಯಾ ಶಾಲೆಗೆ ಹೋಗಿ ಬುಧವಾರ ರಜೆ ಹಾಕಿ ಮನೆಗೆ ಹೋಗುತ್ತೇನೆಂದು ತೆರಳಿದವರು ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಮನಹಳ್ಳಿಯಿಂದ ಬಣಕಲ್ ಶಾಲೆಗೆ ಬರುತ್ತಿದ್ದ ಆಸಿಯಾ, ಬುಧವಾರದಂದು ಮನೆಗೆ ತುರ್ತಾಗಿ ಹೋಗಬೇಕು ಎಂದು ಮುಖ್ಯ ಶಿಕ್ಷಕರಲ್ಲಿ ರಜೆ ಕೇಳಿ ಮನೆಗೆ ಹೋಗಿದ್ದರು. ಆದರೆ ಆಸಿಯಾ ಮನೆಗೆ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇನ್ನು ಬಣಕಲ್ ಶಾಲೆಯ ಶಿಕ್ಷಕಿ ಆಸಿಯಾ ಸಂಜೆ 5 ಗಂಟೆಯ ಸಮಯದಲ್ಲಿ ಪತಿಗೆ ಸಂದೇಶವನ್ನು ಕಳಿಸಿದ್ದಾರೆ. ಸಂದೇಶದಲ್ಲಿ ಯಾವುದಾದರೂ ಹೊಳೆಗೆ ಹಾರಿ ಸಾಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇವರ ಸುಳಿವು ಸಿಕ್ಕಲ್ಲಿ ಈ ನಂಬರ್ ಗೆ ಸಂಪರ್ಕಿಸಿ: 7619252263 / 9742473669(ವರದಿ- ತನು ಕೊಟ್ಟಿಗೆಹಾರ)

ತರೀಕೆರೆ: ಪಟಾಕಿ ಸಿಡಿದು ಓರ್ವ ಯುವಕ ಸಾವು
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಪಟಾಕಿ ಸಿಡಿದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ. ಪ್ರದೀಪ್ (30) ಪಟಾಕಿ ಸಿಡಿದು ಮೃತಪಟ್ಟ ದುರ್ದೈವಿ.
ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಪ್ರದೀಪ್, ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದಾನೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರ ಒದೆ ಬಿದ್ದ ಕಾರಣ ಪ್ರದೀಪ್ ಸಾವನ್ನಪ್ಪಿದ್ದಾರೆ. ಇನ್ನು ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲು ಆಟಂಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿಯಾಗಿದೆ.
ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












