ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಣೆಯಾಗಿದ್ದ ಬಣಕಲ್ ಶಾಲೆಯ ಶಿಕ್ಷಕಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ದರ್ಗಾದಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಏನಿದು ಪ್ರಕರಣ:
ಬಣಕಲ್ ಶಾಖೆಯೊಂದರ ಶಿಕ್ಷಕಿ ಆಸಿಯಾ ಶಾಲೆಗೆ ಹೋಗಿ ಮನೆಗೆ ತುರ್ತಾಗಿ ಹೋಗಬೇಕು ಎಂದು ಮುಖ್ಯ ಶಿಕ್ಷಕರಲ್ಲಿ ರಜೆ ಹಾಕಿ ಮನೆಗೆ ಹೋಗುತ್ತೇನೆಂದು ತೆರಳಿದವರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಬಳಿಕ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು.
ದೂರು ದಾಖಲಿಸಿದ ಬಳಿಕ ಕುಟುಂಬಸ್ಥರು ಹುಡುಕಾಡಿದ್ದಾರೆ. ಮಂಗಳೂರಿನ ಬಿಸಿ ರಸ್ತೆಯಲ್ಲಿ ಆಸಿಯಾ ಕುಟುಂಬಸ್ಥರು ಉಳ್ಳಾಲದ ವರೆಗೆ ಹುಡುಕಿದ್ದಾಗ ಉಳ್ಳಾಲ ದರ್ಗಾದಲ್ಲಿ ಪತ್ತೆಯಾಗಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ತರೀಕೆರೆ: ಪಟಾಕಿ ಸಿಡಿದು ಓರ್ವ ಯುವಕ ಸಾವು
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಪಟಾಕಿ ಸಿಡಿದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ. ಪ್ರದೀಪ್ (30) ಪಟಾಕಿ ಸಿಡಿದು ಮೃತಪಟ್ಟ ದುರ್ದೈವಿ.
ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಪ್ರದೀಪ್, ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದಿದ್ದಾನೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರ ಒದೆ ಬಿದ್ದ ಕಾರಣ ಪ್ರದೀಪ್ ಸಾವನ್ನಪ್ಪಿದ್ದಾರೆ. ಇನ್ನು ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲು ಆಟಂಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿಯಾಗಿದೆ.
ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












