ಬಾಳೆಹೊನ್ನೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಸಾವು

 

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಅಂಡವಾನೆ ಗ್ರಾಮದಲ್ಲಿ ನಡೆದಿದೆ.

 

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಅಂಡವಾನೆ ಗ್ರಾಮದ ಸುಜಾತ ಹಾವು ಕಚ್ಚಿ ಮೃತಪಟ್ಟಿರುವ ಮಹಿಳೆ. ಇಂದು ಬೆಳಗ್ಗೆ ತೋಟದಲ್ಲಿ ಕೆಲಸ ಮಡುವಾಗ ಕಚ್ಚಿದೆ ಎನ್ನಲಾಗಿದೆ.

 

ಇದನ್ನೂ ಓದಿ; ನಿಮ್ಮ ವಾಹನಗಳಿಗೆ ಇನ್ನೂ HSRP ನಂಬರ್ ಪ್ಲೇಟ್ ಹಾಕಿಲ್ವಾ..?; ಚಿಂತೆ ಬಿಡಿ, ಗಡುವು ವಿಸ್ತರಿಸಿದ ಸರ್ಕಾರ; ಏನಿದು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ? ಅಳವಡಿಕೆ ಹೇಗೆ

ಶೃಂಗೇರಿ: ಮಾಹಿತಿ ಹಕ್ಕಿನಡಿ ದಾಖಲೆ ನೀಡದಿದ್ದರೂ, ನಕಲಿ ಸಹಿ ಸೃಷ್ಟಿಸಿ ಮಾಹಿತಿ ಪಡೆದಿದ್ದಾರೆ ಎಂದು ಆಯೋಗಕ್ಕೆ ಮಾಹಿತಿ

 

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪ್ರಥಮ ಮಾಹಿತಿ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಹಿತಿ ಹಕ್ಕಿನಡಿ ದಾಖಲೆ ನೀಡದಿದ್ದರೂ, ನೀಡಿರುವುದಾಗಿ ನಕಲಿ ಸಹಿ ಸೃಷ್ಟಿಸಿ ಮಾಹಿತಿ ಹಕ್ಕು ಆಯೋಗಕ್ಕೆ ವರದಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರಿನ ಕೊತಗೋಡು ಗ್ರಾಮ ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಅನ್ನಪೂರ್ಣ ಹಾಗೂ ಮೇಲ್ಮನವಿ ಪ್ರಾಧಿಕಾರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪನ ಮೇಲೆ ನಕಲಿ ಸಹಿ ಸೃಷ್ಟಿಸಿದ ಆರೋಪ ಕೇಳಿ ಬಂದಿದೆ.

 

ಏನಿದು ಪ್ರಕರಣ:
ಕೊತಗೋಡು ಗ್ರಾಮ ಪಂಚಾಯಿತಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ಅನ್ನಪೂರ್ಣ ಅವರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಕೊಟ್ಟು ಉತ್ತರ ನೀಡದಿದ್ದಾಗ, ಮೇಲ್ಮನವಿ ಪ್ರಾಧಿಕಾರವಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ಅವರಿಗೆ ಮೇಲ್ಮನವಿ ಸಲ್ಲಿಸಿದರೂ ಉತ್ತರಿಸದಿದ್ದಾಗ. ಅರ್ಜಿದಾರರು ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ದಿನಾಂಕ 05-10-2023 ರಂದು ವಿಚಾರಣೆ ನಡೆಸುವಾಗ ಪಂಚಾಯಿತಿ ಮಾಹಿತಿ ಅಧಿಕಾರಿ ಅವರು ಗೈರಾಗಿದ್ದಾರೆ, ದಿನಾಂಕ 09-11- 2023 ರಂದು ಪುನಃ ಕರ್ನಾಟಕ ಮಾಹಿತಿ ಆಯೋಗವು ವಿಚಾರಣೆ ನಡೆಸಿದ್ದರು. ಈ ವಿಚಾರಣೆಗೆ ಹಾಜರಿದ್ದ ಪಂಚಾಯಿತಿ ಮಾಹಿತಿ ಅಧಿಕಾರಿ ಅನ್ನಪೂರ್ಣ ಅವರು ದಿನಾಂಕ 04-09-2022 ರಂದೇ ಮಾಹಿತಿ ಒದಗಿಸಿರುವುದಾಗಿ ಆಯೋಗದ ಮುಂದೆ ವರದಿ ನೀಡಿದ್ದಾರೆ. ಅದರಲ್ಲಿ ಅರ್ಜಿದಾರರು ಮಾಹಿತಿ ಸ್ವೀಕರಿಸಿದ ಸ್ವೀಕೃತಿ ಸಹಿ ಇರುವ ಪ್ರತಿಯನ್ನು ಸಹ ನೀಡಿದ್ದಾರೆ

ಆದರೆ ಆಯೋಗದ ಆದೇಶದಂತೆ ಆ ದಾಖಲೆಯನ್ನು ನೋಡಿದಾಗ ನಕಲು ಎಂಬುದು ಅರಿವಾಗಿದೆ. ಅಲ್ಲದೆ ದೂರುದಾರರ ಸಹಿಯನ್ನು ನಕಲು ಮಾಡಿ ಒಂದು ಫೋರ್ಜರಿ ಪತ್ರವನ್ನು ಮಾಹಿತಿ ಕೊಟ್ಟಂತೆ ಸೃಷ್ಟಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ( ಮೇಲ್ಮನವಿ ಪ್ರಾಧಿಕಾರ ) ಸಹಿ ಮಾಡಿ ನೀಡಿದಂತೆ ತಯಾರು ಮಾಡಲಾಗಿದೆ. ಅದಲ್ಲದೇ ಆ ದಿನವು ಭಾನುವಾರವಾಗಿದ್ದು, ಇದು ನಕಲಿ ಎಂದು ಸಾಬೀತಾಗಿರುತ್ತದೆ ಎಂಬುದು ಅರ್ಜಿದಾರರು ಆರೋಪ.

ಮಾಹಿತಿ ಆಯೋಗವನ್ನು ತಪ್ಪು ದಾರಿಗೆಳೆದು ಮಾಹಿತಿ ಒದಗಿಸಿದ್ದೇವೆಂದು ಸುಳ್ಳು ಹೇಳಿದ ಪ್ರಥಮ ಮಾಹಿತಿ ಹಕ್ಕು ಅಧಿಕಾರಿ ಅನ್ನಪೂರ್ಣ ಹಾಗೂ ಸುಳ್ಳು ಸಹಿಯ ನಕಲು ಪತ್ರ ಸೃಷ್ಟಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿವಂತೆ ದೂರುದಾರರಾದ ಟಿ.ವಿ ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರಿನ ಮೂಲಕ ಒತ್ತಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.