ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆರು ಮಂದಿ ನಕ್ಸಲರು ಶರಣಾಗತಿಗೆ ಸಂಬಂಧಿಸಿದಂತೆ ನಕ್ಸಲ್ ಪ್ಯಾಕೇಜ್ ವಿರುದ್ಧ ಇದೀಗ ಅಪಸ್ವರ ಕೇಳಿ ಬಂದಿದೆ.
ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ

ಹೌದು, ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ಸರಿಯಲ್ಲ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರಿಗೆ, ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ ಸಿಗುತ್ತದೆ ಎಂದು ನಕ್ಸಲ್ ಪ್ಯಾಕೇಜ್ ವಿರುದ್ಧ ಕೆಲವು ಅಪಸ್ವರ ಕೇಳಿ ಬಂದಿದೆ.
NIA ತನಿಖೆಗೆ ಒತ್ತಾಯ:
6 ಮಂದಿ ನಕ್ಸಲರು ಶರಣಾಗತಿ ಪ್ರಕರಣವನ್ನು ಎನ್.ಐ.ಎ ತನಿಖೆಗೆ ಬಿಜೆಪಿ ಒತ್ತಾಯಿಸಿದ್ದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಮನವಿ ಸಲ್ಲಿಸಿ ಶರಣಾಗತಿ ಆದವರನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ನಕ್ಸಲರಿಗೆ ಶಸಾಸ್ತ್ರ ಪೂರೈಕೆ ಮಾಡಿದವರ ಬಗ್ಗೆಯೂ ತನಿಖೆ ನಡೆಯಬೇಕಲ್ಲದೆ, ಶರಣಾಗತಿ ಸಮಿತಿಯವರು ಭೇಟಿಯಾಗಿರುವ ವಿವರಗಳನ್ನು ಹೊರ ಹಾಕಬೇಕೆಂದು ಒತ್ತಾಯಿಸಿದೆ. ಈ ಹಿಂದೆ ಆರು ನಕ್ಸಲರ ಪತ್ತೆಗಾಗಿ ಬಹುಮಾನ ಘೋ಼ಷಿಸಲಾಗಿತ್ತು, ಈಗ ಶರಣಾಗತಿ ಆಗಿದ್ದಾರೆ, ಪೊಲೀಸ್ ಇಲಾಖೆಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದೆ. ನಕ್ಸಲರ ಇರುವಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ ಸಮಿತಿಗೆ ಈ ಹಿಂದೆ ಎಲ್ಲಿದ್ದರೂ ಎನ್ನುವ ಅರಿವು ಇರಲಿಲ್ಲವೇ ಎಂದು ನಿಯೋಗ ಕೇಳಿದೆ. ಅಂದೇ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿ, ನಕ್ಸಲರು ಬಂದೂಕುಗಳನ್ನು ಹಸ್ತಾಂತರ ಮಾಡಿಲ್ಲ ಎಂದು ಆಕ್ಷೇಪಿಸಿದೆ. ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಕಳುಹಿಸಿರುವ ಬಿಜೆಪಿ ನಿಯೋಗ ಎನ್ ಐ ಎ ತನಿಖೆ ನಡೆಸುವಂತೆ ಆಗ್ರಹಿಸಿದೆ.
ನಕ್ಸಲ್ ಪ್ಯಾಕೇಜ್ ಗೆ ಸುನಿಲ್ ಕುಮಾರ್ ತೀವ್ರ ಆಕ್ರೋಶ:
ಇನ್ನು ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಮಹತ್ವದ ಆದೇಶ; ಪಡಿತರ ಚೀಟಿ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ
ಎಕ್ಸ್ ಪೋಸ್ಟ್ ಮಾಡಿ ಅಸಮಾಧಾನ ಹೊರ ಹಾಕಿರುವ ಸುನಿಲ್ ಕುಮಾರ್, ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿ ಆಗಿದ್ದ ತಣ್ಣಗಿನ ಮಲೆನಾಡಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ ಸಿದ್ದರಾಮಯ್ಯನವರೇ ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮ ಮೇಲೂ ಕೇಸ್ ಇದೆ.. ನಾವೂ ಶರಣಾಗುತ್ತೇವೆ..:
ಎನ್.ಐ.ಎ ವಶಕ್ಕೆ ಪಡೆಯುವ ಭಯದಿಂದ ಚಿಕ್ಕಮಗಳೂರಿಂದ ಗೌರಿ ಮಕ್ಕಳು ಕಾಲ್ಕಿತ್ತಿದ್ದಾರೆ. ನಮ್ಮ ಮೇಲೂ ಹಲವು ಕೇಸ್ ಇದೆ, ನಾವು ಶರಣಾಗುತ್ತೇವೆ, ನಮಗೂ ಕೇಸ್ ಕ್ಲಿಯರ್ ಮಾಡಿ ಐದು ಎಕರೆ ಕೃಷಿ ಭೂಮಿ, ಹಣ ನೀಡಿ. ಇಲ್ಲ ಕಾಡಿಗೆ ಹೋಗಿ ಬರುವ 7 ಲಕ್ಷ ದುಡ್ಡು ಸಿಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಉನ್ನತ ತನಿಖೆಯಾಗುವಂತೆ ಮನವಿ ಸಲ್ಲಿಕೆ:
ಮಾನ್ಯ ಮುಖ್ಯಮಂತ್ರಿಗಳ ಸಮ್ಮಖದಲ್ಲಿ ಆರು ಜನ ನಕ್ಸಲರ ಶರಣಾಗತಿಯನ್ನ ಉನ್ನತ ತನಿಖೆಯಾಗುವಂತೆ ಬಿಜೆಪಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಾದ ಅಮಿತ್ ಶಾ ಗೆ ಮನವಿ ಸಲ್ಲಿಸಿದರು.
ವಿಕ್ರಂ ಗೌಡನ ಹತ್ಯೆಯ ನಂತರ ನಕ್ಸಲರ ಚಟುವಟಿಕೆ ಮತ್ತೆ ಮುನ್ನಲೆಗೆ ಬಂದಿದೆ. ವಿಕ್ರಂ ಗೌಡನ ಹತ್ಯೆ ನಂತರ ಉಳಿದ ನಕ್ಸಲರಿಗಾಗಿ ಪೊಲೀಸ್ ಇಲಾಖೆ ಹುಡುಕಾಟ ನಡೆಸಿತ್ತು. ಆದರೆ, ಇದ್ದಕ್ಕಿದಂತೆ ನಕ್ಸಲರು ಶರಣಾಗತಿ ಎಂಬ ನಾಟಕ ಪ್ರಾರಂಭವಾಯಿತು. ಈ ಶರಣಾಗತಿ ಹಿಂದೆ ಸರ್ಕಾರ ಸಂಧಾನಕಾರರು ಹಾಗೂ ನಕ್ಸಲರ ನಡುವೆ ಒಂದು ತಂಡ ರಚಿಸಿತ್ತು. ರಚಿಸಿದ ತಂಡದಲ್ಲಿ ನಿರಂತರವಾಗಿ ಸಂಪರ್ಕ ಇದ್ದಿದೆ ಆದಲ್ಲಿ ಪೊಲೀಸ್ ಇಲಾಖೆಗೆ ಯಾಕೆ ಮಾಹಿತಿ ಲಭ್ಯವಾಗಿಲ್ಲ. ಈ ಸಂಧಾನಕಾರರ ಮೇಲೆ ಯಾಕೆ ಪೊಲೀಸ್ ಇಲಾಖೆ ಕಣ್ಣಿಟ್ಟಿಲ್ಲ. ನಕ್ಸಲರು ಶಸ್ತ್ರಾಸ್ತ್ರ ತ್ಯಾಗ ಮಾಡಿಲ್ಲ. ಇದರ ಬಗ್ಗೆ ಸರ್ಕಾರ ಹತ್ತಿರವೂ ಮಾಹಿತಿ ಇಲ್ಲ. ಹೀಗಾಗಿ ಈ ಆರು ಜನ ನಕ್ಸಲರ ಮೇಲೆ ಎನ್.ಐ.ಎ ತನಿಖೆಯಾಗುವಂತೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: 15,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
“ದಿನದಿಂದ ದಿನಕ್ಕೆ ನಕ್ಸಲರು ಚಿಗುರುತ್ತಾ ಬಂದಿದ್ದಾರೆ. ಇದ್ದಕ್ಕಿದಂತೆ ನಕ್ಸಲರು ಶರಣಾಗತಿ ಎಂಬ ನಾಟಕ ಪ್ರಾರಂಭವಾಯಿತು. ಸರ್ಕಾರ ರಚಿಸಿದ ತಂಡದಲ್ಲಿ ಸಂಧಾನಕಾರರು ನಿರಂತರವಾಗಿ ಸಂಪರ್ಕ ಇದ್ದಿದೆ ಆದಲ್ಲಿ ಪೊಲೀಸ್ ಇಲಾಖೆಗೆ ಯಾಕೆ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆ ಪೆನ್ನು ಹಿಡಿಯುವ ಜಾಗದಲ್ಲಿ ಗನ್ ಹಿಡಿದಿದ್ದರೆ ಇವತ್ತು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಹಣ ಉಳಿಸಬಹುದಿತ್ತು.ನಕ್ಸಲರು ಸಮವಸ್ತ್ರವನ್ನ ಮಾತ್ರ ತ್ಯಾಗ ಮಾಡಿದ್ದಾರೆ. ಶಸ್ತ್ರಾಸ್ತ್ರ ತ್ಯಾಗ ಮಾಡಿಲ್ಲ. ಹೀಗಾಗಿ ಈ ಆರು ಜನ ನಕ್ಸಲರ ಮೇಲೆ ಎನ್.ಐ.ಎ ತನಿಖೆಯಾಗಬೇಕು”. ಸಂತೋಷ್ ಕೋಟ್ಯಾನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ.













