ಬಾಳೆಹೊನ್ನೂರು: ಯುವತಿಗೆ ಚಾಕು ಇರಿತ | ಇಬ್ಬರ ಬಂಧನ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡು ಗ್ರಾಮದ ಯುವತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಶೋಧನ್, ಕೃಷ್ಣ ಬಂಧಿತ ಆರೋಪಿಗಳು.

 

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಕೆಲ ದಿನಗಳ ಹಿಂದೆ ಮನೆಯಿಂದ ರಾತ್ರಿ ಹೊರ ನಿಂತಿದ್ದಾಗ ಯುವತಿಯ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದರು. ಈ ಕುರಿತು ಯುವತಿಯ ಪೋಷಕರು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳು ಯುವತಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಬಿಜೆಪಿಯ 9 ಮಂಡಲಗಳ ನೂತನ ಅಧ್ಯಕ್ಷರು, ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ನೇಮಕ

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿಯ 9 ಮಂಡಲಗಳ ಅಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.

9 ಮಂಡಲಗಳ ಅಧ್ಯಕ್ಷರುಗಳ ಪಟ್ಟಿ:
* ಚಿಕ್ಕಮಗಳೂರು ನಗರ – ಕೆ.ಎಸ್. ಪುಷ್ಪರಾಜು
* ಚಿಕ್ಕಮಗಳೂರು ಗ್ರಾಮಾಂತರ- ವಿಜಯಕುಮಾರ್ ಗುಣಸಾಗರ
* ಕಡೂರು- ಬಿ.ಪಿ.ದೇವಾನಂದ್
* ತರೀಕೆರೆ- ಪ್ರತಾಪ್ ಗರಗದಹಳ್ಳಿ
* ಮೂಡಿಗೆರೆ- ಗಜೇಂದ್ರ ಕೊಟ್ಟಿಗೆಹಾರ
* ಆಲ್ದೂರು- ರವಿ ಬಸವರಹಳ್ಳಿ
* ಕೊಪ್ಪ – ದಿನೇಶ್ ಹೊಸೂರು
* ಎನ್.ಆರ್. ಪುರ- ಅರುಣ್ ಕುಮಾರ್
* ಶೃಂಗೇರಿ- ಉಮೇಶ್ ಭಟ್

 

ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ಪಟ್ಟಿ:
* ಯುವಮೋರ್ಚಾ – ಸಂತೋಷ್ ಕೋಟ್ಯಾನ್
* ಎಸ್.ಸಿ.ಮೋರ್ಚಾ – ಕೆ.ಪಿ.ವೆಂಕಟೇಶ್
* ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್
* ರೈತ ಮೋರ್ಚಾ- ಶಂಬೈನೂರು ಆನಂದಪ್ಪ
* ಒಬಿಸಿ ಮೋರ್ಚಾ- ಟಿ.ಆರ್.ಲಕ್ಕಪ್ಪ ಕಡೂರು
* ಎಸ್.ಟಿ.ಮೋರ್ಚಾ- ಜೆ. ಮೌನೇಶಪ್ಪ ಕಳಸ
* ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಕಬೀರ್

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ | ಮುಖಂಡರ ನಡುವೆ ಹೊಡೆದಾಟ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮೂಡಿಗೆರೆ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ಬಿಜೆಪಿ ಮುಖಂಡರು ಹೊಡೆದಾಡಿಕೊಂಡಿದ್ದಾರೆ.

ಮೂಡಿಗೆರೆ ನೂತನ ಅಧ್ಯಕ್ಷರನ್ನಾಗಿ ಗಜೇಂದ್ರ ಅವರನ್ನು ನೇಮಕ ಮಾಡಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಇನ್ನುಳಿದ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ 12 ಮಂದಿ ಆಕಾಂಕ್ಷಿಗಳಿದ್ದರು. ಈ ಪೈಕಿ ಗಜೇಂದ್ರ ಅವರನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ರೊಚ್ಚಿಗೆದ್ದ ಇನ್ನೊಂದು ಗುಂಪು ಗಲಾಟೆ ಮಾಡಿದೆ. ಮೂಡಿಗೆರೆ ಪಟ್ಟಣದ ಬಿಜೆಪಿ ಕಚೇರಿಯ ಮುಂಭಾಗ ಹೊಡೆದಾಟ ನಡೆದಿದ್ದು, ಇದರಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಅವರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.