ಬೀರೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಹದಿನೈದ ವರ್ಷಗಳ ಹಳೆಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣೆಯ ಪಿ.ಎಸ್.ಐ ಬಳಸುತ್ತಿದ್ದ ಜೀಪ್ ಅನ್ನು ಹಿಂಪಡೆಯಲಾಗಿದ್ದು, 15 ದಿನಗಳು ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಪಿ.ಎಸ್.ಐ ಬೈಕ್ ನಲ್ಲಿ ಸಂಚರಿಸುವಂತಾಗಿದೆ.
ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಬೀರೂರು ಠಾಣೆಗೆ 2007 ನೇ ಸಾಲಿನಲ್ಲಿ ಪಿ.ಎಸ್.ಐ ತಮ್ಮ ಸರಹದ್ದಿನಲ್ಲಿ ಸಂಚರಿಸಿ ಬಂದೋಬಸ್ತ್ ನೀಡಲು ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 17 ವರ್ಷಗಳಿಂದ ಈ ವಾಹನ ಇಲಾಖೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಈಗ ಅದು ಸುವ್ಯವಸ್ಥೆಯಲ್ಲಿಲ್ಲ ಎನ್ನುವ ಕಾರಣಕ್ಕೆ ವಾಹನವನ್ನು ಹಿಂಪಡೆಯಲಾಗಿದೆ. ಪರಿಸರ ಮಾಲಿನ್ಯ ತಡೆಯಲು ವಾಹನ ಹಿಂಪಡೆದಿರುವುದು ಸರಿಯಷ್ಟೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಹಿಂಪಡೆದಿದ್ದರೆ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ
ಇನ್ನು ಈ ಕುರಿತು ಬೀರೂರು ಪೊಲೀಸ್ ಪಿ.ಎಸ್.ಐ ಸಜಿತ್ ಕುಮಾರ್ ಪ್ರತಿಕ್ರಿಯಿಸಿ, ವಾಯು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ 15 ವರ್ಷ ಹಳೆಯ ವಾಹನಗಳನ್ನು ಚಲಾಯಿಸುವಂತಿಲ್ಲ ಎನ್ನುವುದು ಹಸಿರುಪೀಠದ ಆದೇಶವಾಗಿದ್ದು, ಇಲಾಖೆ ವತಿಯಿಂದ ಹೊಸ ವಾಹನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೊದನೆ ನೀಡುವವರೆಗೂ ದ್ವಿಚಕ್ರ ಅಥವಾ ಗಸ್ತು ವಾಹನವಾಗಿರುವ 112 ಬಳಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದರು.
ಜಿಲ್ಲೆಯ 5-6 ಠಾಣೆಗಳ ಉಪನಿರೀಕ್ಷಕರ ಜೀಪುಗಳು ಅವಧಿ ಮೀರಿದೆ. ಅಂತಹ ವಾಹನಗಳನ್ನು ಗುರುತಿಸಿ ಹಿಂಪಡೆಯಲಾಗಿದೆ. ಕೆಲವೇ ದಿನಗಳಲ್ಲಿ ಹೊಸ ವಾಹನಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೆ 112 ಮತ್ತು ಇ.ಆರ್.ಎಸ್.ಎಸ್ ವಾಹನಗಳನ್ನು ಬಳಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದರು.
ಬಿಜೆಪಿಯ 9 ಮಂಡಲಗಳ ನೂತನ ಅಧ್ಯಕ್ಷರು, ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ನೇಮಕ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿಯ 9 ಮಂಡಲಗಳ ಅಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.
9 ಮಂಡಲಗಳ ಅಧ್ಯಕ್ಷರುಗಳ ಪಟ್ಟಿ:
* ಚಿಕ್ಕಮಗಳೂರು ನಗರ – ಕೆ.ಎಸ್. ಪುಷ್ಪರಾಜು
* ಚಿಕ್ಕಮಗಳೂರು ಗ್ರಾಮಾಂತರ- ವಿಜಯಕುಮಾರ್ ಗುಣಸಾಗರ
* ಕಡೂರು- ಬಿ.ಪಿ.ದೇವಾನಂದ್
* ತರೀಕೆರೆ- ಪ್ರತಾಪ್ ಗರಗದಹಳ್ಳಿ
* ಮೂಡಿಗೆರೆ- ಗಜೇಂದ್ರ ಕೊಟ್ಟಿಗೆಹಾರ
* ಆಲ್ದೂರು- ರವಿ ಬಸವರಹಳ್ಳಿ
* ಕೊಪ್ಪ – ದಿನೇಶ್ ಹೊಸೂರು
* ಎನ್.ಆರ್. ಪುರ- ಅರುಣ್ ಕುಮಾರ್
* ಶೃಂಗೇರಿ- ಉಮೇಶ್ ಭಟ್
ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ಪಟ್ಟಿ:
* ಯುವಮೋರ್ಚಾ – ಸಂತೋಷ್ ಕೋಟ್ಯಾನ್
* ಎಸ್.ಸಿ.ಮೋರ್ಚಾ – ಕೆ.ಪಿ.ವೆಂಕಟೇಶ್
* ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್
* ರೈತ ಮೋರ್ಚಾ- ಶಂಬೈನೂರು ಆನಂದಪ್ಪ
* ಒಬಿಸಿ ಮೋರ್ಚಾ- ಟಿ.ಆರ್.ಲಕ್ಕಪ್ಪ ಕಡೂರು
* ಎಸ್.ಟಿ.ಮೋರ್ಚಾ- ಜೆ. ಮೌನೇಶಪ್ಪ ಕಳಸ
* ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಕಬೀರ್













