ಬಿಜೆಪಿಯ 9 ಮಂಡಲಗಳ ನೂತನ ಅಧ್ಯಕ್ಷರು, ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ನೇಮಕ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿಯ 9 ಮಂಡಲಗಳ ಅಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.

 

ಇದನ್ನೂ ಓದಿ; ಅಡಿಕೆ, ಕಾಫಿ, ಕಾಳುಮೆಣಸು ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ

9 ಮಂಡಲಗಳ ಅಧ್ಯಕ್ಷರುಗಳ ಪಟ್ಟಿ:
* ಚಿಕ್ಕಮಗಳೂರು ನಗರ – ಕೆ.ಎಸ್. ಪುಷ್ಪರಾಜು
* ಚಿಕ್ಕಮಗಳೂರು ಗ್ರಾಮಾಂತರ- ವಿಜಯಕುಮಾರ್ ಗುಣಸಾಗರ
* ಕಡೂರು- ಬಿ.ಪಿ.ದೇವಾನಂದ್
* ತರೀಕೆರೆ- ಪ್ರತಾಪ್ ಗರಗದಹಳ್ಳಿ
* ಮೂಡಿಗೆರೆ- ಗಜೇಂದ್ರ ಕೊಟ್ಟಿಗೆಹಾರ
* ಆಲ್ದೂರು- ರವಿ ಬಸವರಹಳ್ಳಿ
* ಕೊಪ್ಪ – ದಿನೇಶ್ ಹೊಸೂರು
* ಎನ್.ಆರ್. ಪುರ- ಅರುಣ್ ಕುಮಾರ್
* ಶೃಂಗೇರಿ- ಉಮೇಶ್ ಭಟ್

ಇದನ್ನೂ ಓದಿ; ಹುಕ್ಕಾ ಪ್ರಿಯರಿಗೆ ಬಿಗ್ ಶಾಕ್; ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ! ಕಾರಣವೇನು?

ವಿವಿಧ ಮೋರ್ಚಾಗಳ ಜಿಲ್ಲಾ ಅಧ್ಯಕ್ಷರುಗಳ ಪಟ್ಟಿ:
* ಯುವಮೋರ್ಚಾ – ಸಂತೋಷ್ ಕೋಟ್ಯಾನ್
* ಎಸ್.ಸಿ.ಮೋರ್ಚಾ – ಕೆ.ಪಿ.ವೆಂಕಟೇಶ್
* ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್
* ರೈತ ಮೋರ್ಚಾ- ಶಂಬೈನೂರು ಆನಂದಪ್ಪ
* ಒಬಿಸಿ ಮೋರ್ಚಾ- ಟಿ.ಆರ್.ಲಕ್ಕಪ್ಪ ಕಡೂರು
* ಎಸ್.ಟಿ.ಮೋರ್ಚಾ- ಜೆ. ಮೌನೇಶಪ್ಪ ಕಳಸ
* ಅಲ್ಪಸಂಖ್ಯಾತರ ಮೋರ್ಚಾ- ಅಬ್ದುಲ್ ಕಬೀರ್

 

ಭದ್ರಾ ನದಿ ತೀರದಲ್ಲಿ ವಾಮಾಚಾರ | ಐದಾರು ಕುರಿ-ಮೇಕೆಗಳ ಬಲಿ ಕೊಟ್ಟಿರುವ ಕಿಡಿಗೇಡಿಗಳು

ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಬಳಿ ಬೃಹತ್ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ, ಮೇಕೆಗಳನ್ನು ಬಲಿ ಕೊಡಲಾಗಿದೆ. ನದಿಯಲ್ಲಿ ರುಂಡ-ಮುಂಡ ಬೇರ್ಪಟ್ಟ ಕುರಿ-ಮೇಕೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

 

ಇದನ್ನೂ ಓದಿ; ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ; ನೀವು ಪರಿಶೀಲಿಸಬೇಕಾದ ಅಂಶಗಳೇನು, ಇಲ್ಲಿದೆ ಡೀಟೇಲ್ಸ್

ಹೊರನಾಡಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಈ ಕೃತ್ಯ ನಡೆದಿದ್ದು, ವಾಮಾಚಾರಕ್ಕೆ ಬಳಸಿದ್ದ ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ ನದಿ ದಡದಲ್ಲಿ ಪತ್ತೆಯಾಗಿವೆ ಹಾಗೂ ಭದ್ರಾ ನದಿಯಲ್ಲಿ 5-6 ಕುರಿ- ಮೇಕೆಗಳ ಶವ ಕೂಡಾ ಪತ್ತೆಯಾಗಿದೆ.

ರಾತ್ರಿ ವೇಳೆ ನಡೆದಿರುವ ವಾಮಾಚಾರದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ವಾಮಾಚಾರದ ರಹಸ್ಯ ಭೇದಿಸಲು ಪೊಲೀಸರು ಮುಂದಾಗಿದ್ದು, ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನದಿಯಿಂದ ಮೇಕೆ-ಕುರಿಗಳ ಶವ ಹೊರಕ್ಕೆ ತೆಗೆದಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.