ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನ ಮಲೆಯ ಮಾರುತ ಸಮೀಪ ಭಾನುವಾರ ರಾತ್ರಿ ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಯಾತ್ರೆಗೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಯಾತ್ರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ; ಕರ್ನಾಟಕ ಸರ್ಕಾರದಿಂದ ಲ್ಯಾಪ್ ಟಾಪ್ ಭಾಗ್ಯ; ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಸಲ್ಲಿಸಿ

ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸೋಮವಾರ ರಾತ್ರಿ ಕಾರಿನ ಚಕ್ರಗಳು ಹಾಗೂ ಇನ್ನಿತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಅಪಘಾತವಾದ ವಾಹನಗಳ ಬಿಡಿ ಭಾಗಗಳನ್ನು ಕದಿಯುವ ತಂಡವೇ ಈ ಭಾಗದಲ್ಲಿ ಕಾರ್ಯ ಪ್ರವೃತ್ತವಾಗಿದೆ. ಚಾರ್ಮಾಡಿ ಘಾಟ್ ನಲ್ಲಿ ತಡೆಗೋಡೆ ನಿರ್ಮಾಣ ನಡೆಯುತ್ತಿದ್ದು ಇಲ್ಲಿ ನಿರ್ಮಾಣ ಸಾಮಗ್ರಿಗಳನ್ನು ತಂದು ಇಟ್ಟಿದ್ದು ಅದನ್ನು ಕಳ್ಳರು ದೋಚುತ್ತಿದ್ದಾರೆ. ತಡೆಗೋಡೆಗೆ ನಿರ್ಮಿಸಲು ತಂದಿಟ್ಟಿದ್ದ ಕಬ್ಬಿಣ ಜಾಕ್ ಸಿಮೆಂಟ್ ಎಂ ಸೆಂಡ್ ಜೆಲ್ಲಿಗಳನ್ನು ಸಹ ಕಳ್ಳರು ದೋಚಿದ್ದಾರೆ.
ಇದನ್ನೂ ಓದಿ; ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ; 59 ಜನರ ವಿರುದ್ಧ FIR ದಾಖಲು
ರಾತ್ರಿ ಹೊತ್ತು ಹೈವೇ ಪೆಟ್ರೋಲಿಂಗ್ ಗೆ ಆಗ್ರಹ:
ರಾತ್ರಿ ಹೊತ್ತು ಚಾರ್ಮಡಿ ಘಾಟ್ ನಲ್ಲಿ ಕಳ್ಳತನವಾಗುತ್ತಿದ್ದು ಇದನ್ನು ತಡೆಗಟ್ಟಲು ರಾತ್ರಿ ಹೊತ್ತು ಹೈವೇ ಪೆಟ್ರೋಲಿಂಗ್ ನಡೆಸಬೇಕೆಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಅಪ್ತಾಪ್ತೆಗೆ ಮುತ್ತು ಕೊಟ್ಟವನಿಗೆ 3 ವರ್ಷ ಜೈಲು ಶಿಕ್ಷೆ | ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು/ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತಗೆ ಮುತ್ತು ಕೊಟ್ಟವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಪ್ರತಾಪ್ (28) ಎಂಬಾತನಿಗೆ ಕೋರ್ಟ್ ಈ ಶಿಕ್ಷೆ ನೀಡಿದೆ.
ಏನಿದು ಪ್ರಕರಣ:
2014 ರ ಅ.26 ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ರಾಪ್ತೆಯನ್ನು (ಸಂತ್ರಸ್ತೆ) ಹಿಡಿದುಕೊಂಡಿದ್ದ ಪ್ರತಾಪ್, ಪಕ್ಕದ ಶಿಥಿಲಾವಸ್ಥೆಯ ಶೌಚಾಲಯಕ್ಕೆ ಎಳೆದೊಯ್ದಿದ್ದ. ನಾನು ನಿನ್ನ ಪ್ರೀತಿಸುತ್ತಿದ್ದು ನೀನೂ ನನ್ನ ಪ್ರೀತಿಸುತ್ತಿದ್ದೀಯಾ ಎಂದು ಪ್ರಶ್ನಿಸಿ, ಸಂತ್ರಸ್ತೆಯನ್ನು ಕಳೆಗೆ ಕೆಡೆವಿ, ಕೆನ್ನೆ ಹಾಗೂ ಕತ್ತಿನ ಭಾಗಕ್ಕೆ ಮುತ್ತಿಟ್ಟಿದ್ದ. ಎದೆ ಭಾಗವನ್ನು ಸ್ಪರ್ಶಿಸಿ, ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಆತನ ಕೈಗಳಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತೆ ಮನೆಗೆ ಸೇರಿದ್ದಳು. ಆಕೆಯ ತಂದೆ ಚಿಕ್ಕಮಗಳೂರಿನ ಬಾಲೂರು ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ; ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು!; ವ್ಯಾಪಾರ ವಹಿವಾಟು, ಸಂಭಾಷಣೆ ಸಹ ಸಂಸ್ಕೃತ ಭಾಷೆಯಲ್ಲೆ; ಎಲ್ಲಿದೆ ಗೊತ್ತಾ ?
ತನಿಖೆ ನಡೆಸಿದ್ದ ಪೊಲೀಸರು, ಪೋಕ್ಸೋ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 357 (ಆಕ್ರಮಣ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ, ತಂದೆ ಮತ್ತು ತಾಯಿಯ ಸಾಕ್ಷ್ಯ ಪರಸ್ಪರ ತದ್ವಿರುದ್ಧವಾಗಿದೆ. ಘಟನೆ ಭಾನುವಾರ ನಡೆದಿದೆ. ಘಟನಾ ಸ್ಥಳದ ಪಕ್ಕದಲ್ಲೇ ಕಾರ್ಮಿಕರ ಮನೆಗಳಲ್ಲಿದ್ದವು. ಸಂತ್ರಸ್ತೆಯ ಕಿರುಚಾಟ ಕೇಳಿ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಹಾಗಾಗಿ, ಸಂತ್ರಸ್ತೆಯ ಸಾಕ್ಷ್ಯ ನಂಬಲಾರ್ಹವಾಗಿಲ್ಲ ಎಂದು ತೀರ್ಮಾನಿಸಿದ್ದ ಚಿಕ್ಕಮಗಳೂರು ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ 2017 ರ ಜ.30 ರಂದು ಆದೇಶಿಸಿತ್ತು. ಇದರಿಂದ ಪೊಲೀಸರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.












