ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪೊಲೀಸರು ಎಫ್ಐಆರ್ ದಾಖಲಿಸುವ ಮೊದಲೇ ಕಳ್ಳರೇ ಬಂದು ದೋಚಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಾಪಸ್ ಮನೆ ಬಾಗಿಲಿಗೆ ತಂದಿಟ್ಟ ಘಟನೆ ಚಿಕ್ಕಮಗಳೂರು ನಗರದ ಅರವತ್ತು ಅಡಿ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ; ಇನ್ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!

ಪ್ರಕರಣ ದಾಖಲಿಸುವ ಮೊದಲು ಕಳ್ಳತನ ನಡೆದ ಮನೆಯ ಬಳಿಗೆ ಪೊಲೀಸರು ಬಂದ ವಿಷಯ ತಿಳಿದ ಕಳ್ಳರು ತಾವೇ ಮನೆ ಬಳಿ ಬಂದು ದೋಚಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಮನೆ ಹೊರಗಿದ್ದ ಶೂ ಒಳಗೆ ಇಟ್ಟು ಪರಾರಿ ಆಗಿರುವ ಘಟನೆ ಚಿಕ್ಕಮಗಳೂರು ನಗರದ 60 feet ರಸ್ತೆ ಎರಡನೇ ಕ್ರಾಸ್ ನಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಈ ವರ್ಷವೂ ಐದು ಗ್ಯಾರಂಟಿಗಳಿಗೆ ಹಣ ಮೀಸಲು, ಎಷ್ಟು ಗೊತ್ತಾ?
ಮೊಹಮ್ಮದ್ ಮುಗ್ಶಿರ್ ಎಂಬಾತ ತಮ್ಮ ಮನೆಯಲ್ಲಿದ್ದ ಸುಮಾರು ನಾಲ್ಕು ಲಕ್ಷದ ಚಿನ್ನಾಭರಣ ಕಳುವಾಗಿದೆ ಎಂದು ಬಸವನಹಳ್ಳಿ ಠಾಣೆಗೆ ದೂರು ನೀಡಲು ಆಗಮಿಸುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಸಬ್ ಇನ್ಸ್ಪೆಕ್ಟರ್ ಬಾಬುದ್ದೀನ್ ಹಾಗೂ ತಂಡ ಎಫ್ಐಆರ್ ದಾಖಲಿಸುವ ಮೊದಲೇ ಕಳ್ಳತನ ನಡೆದ ಮನೆ ಬಳಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಜೊತೆ ತೆರಳಿ ಚೋರರ ಜಾಡು ಹಿಡಿಯಲು ಮುಂದಾಗುತ್ತಾರೆ. ಈ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ಕಳ್ಳರು ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಾಪಸ್ ತಂದು ಮನೆಯ ಹೊರಗಿದ್ದ ಶೂ ಒಳಗೆ ಇಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್; ನೇಮಕಾತಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಇತ್ತ ಆಭರಣ ಮತ್ತೆ ಸಿಕ್ಕಿದ್ದು ಮನೆಯ ಯಜಮಾನ ಹಾಗೂ ಆತನ ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ. ಪೊಲೀಸರ ತಕ್ಷಣದ ಸ್ಪಂದನೆಗೆ ಧನ್ಯವಾದ ತಿಳಿಸಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಬಸವನಹಳ್ಳಿ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆಗಳು ಕೇಳಿ ಬಂದಿವೆ.
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿ: ಚಾಲಕ ಸಾವು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ನಡೆದಿದೆ. ಬಾಳೂರು ಹೋಬಳಿಯ ಮಲೆಮನೆಯ ರವಿ (28) ಮೃತ ದುರ್ದೈವಿ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸೋರಿಗೆ ಬಂತು ಮತ್ತೊಂದು ಅಪ್ಡೇಟ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು ಹೋಗಲು ತೆರಳುತ್ತಿದ್ದ ರವಿ ಬಣಕಲ್- ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಆಟೋ ಪಲ್ಟಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರೈತರೇ ಗಮನಿಸಿ; ಬರಪರಿಹಾರ ಹಣದ ಕುರಿತು ಸರ್ಕಾರದಿಂದ ಮಹತ್ವದ ಸೂಚನೆ; ತಪ್ಪದೇ ಈ ಸುದ್ದಿ ಓದಿ
ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












