ಕಡೂರು: (ನ್ಯೂಸ್ ಮಲ್ನಾಡ್ ವರದಿ) ಜಮೀನಿನ ನಕ್ಷೆ ಸಿದ್ದಪಡಿಸಿಕೊಡಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಶೋಕ್ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ಕಡೂರು ತಾಲ್ಲೂಕು ಸರ್ವೆಯರ್ ಅಶೋಕ್, ಹುಲ್ಲೇಹಳ್ಳಿ ಗ್ರಾಮದ ಸರ್ವೆ ನಂ 61/03 ರಲ್ಲಿರುವ ವೆಂಕಟೇಶ್ ರವರ ಜಮೀನಿನೊಂದರ ಹಳೇ ನಕ್ಷೆ ಸರಿಯಿಲ್ಲದ್ದರಿಂದ ಹೊಸ ನಕ್ಷೆ ತಯಾರಿಸಲು ಕಡೂರು ಎಡಿಎಲ್ಆರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಮೀನಿನ ಸರ್ವೆ ಮಾಡುವ ಸಮಯದಲ್ಲಿ ಅಶೋಕ್ ಅವರು ವೆಂಕಟೇಶ್ ಅವರ ಸಹೋದರನಿಂದ 1200 ಪಡೆದು ಕಡತ ತಯಾರಿಸಲು 5 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು. ಕಡೆಗೆ 4 ಸಾವಿರ ನೀಡಲು ಒತ್ತಾಯಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಅದರಂತೆ ಸೋಮವಾರ ಸಂಜೆ ಅಶೋಕ್ ಅವರು 4 ಸಾವಿರ ರೂಪಾಯಿಗಳನ್ನು ಸರ್ವೆ ಇಲಾಖೆ ಕಚೇರಿಯಲ್ಲಿ ವೆಂಕಟೇಶ್ ಅವರಿಂದ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಇನ್ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಒಂದೇ ಚಾರ್ಜ್ನಲ್ಲಿ 320 ಕಿ.ಮೀ. ಪ್ರಯಾಣ; ಮತ್ತೊಂದು ಹೊಸ ಸ್ಕೂಟರ್ ಅನಾವರಣ












