ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿದ್ದ ಪ್ರಕರಣಕ್ಕೆ ಚಿಕ್ಕಮಗಳೂರು ದತ್ತಪೀಠದ ಶಾಖಾದ್ರಿ ಹಾಕಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿಕ್ಕಮಗಳೂರು ಸೆಷನ್ ಕೋರ್ಟ್ ವಜಾ ಮಾಡಿದ್ದು, ಶಾಖಾದ್ರಿಗೆ ಬಂಧನವಾಗುವ ಭೀತಿ ಎದುರಾಗಿದೆ.

ಏನಿದು ಪ್ರಕರಣ:
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿ ಹುಲಿ ಉಗುರು ಪತ್ತೆಯಾದ ಬಳಿಕ ಆರಂಭವಾದ ಹುಲಿ ಉಗುರು, ಚರ್ಮ ಕಾರ್ಯಾಚರಣೆ ಚಿತ್ರ ನಟರು, ಸ್ವಾಮೀಜಿಗಳು ಸೇರಿದಂತೆ ರಾಜಕಾರಣಿಗಳ ಸುತ್ತಲೂ ಸುತ್ತಿ ಚಿಕ್ಕಮಗಳೂರಿನ ದತ್ತಪೀಠದ ವರೆಗೆ ಬಂದು ನಿಂತಿತ್ತು.
ದತ್ತಪೀಠದ ಶಾಖಾದ್ರಿ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿತ್ತು. ಶಾಖಾದ್ರಿ ಮನೆ ಮೇಲೆ ದಾಳಿ ನಡೆಸಿದಾಗ ಚಿರತೆ ಹಾಗೂ ಜಿಂಕೆ ಪತ್ತೆಯಾಗಿತ್ತು. ಈ ಬಗ್ಗೆ ಸೂಕ್ತ ದಾಖಲೆಗಳ ಜೊತೆ ನವೆಂಬರ್ ೨ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ ಶಾಖಾದ್ರಿ ವಿಚಾರಣೆಗೆ ಹಾಜರಾಗದೆ ನೀರಿಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಇದೀಗ ಚಿಕ್ಕಮಗಳೂರು ಸೆಷನ್ ಕೋರ್ಟ್ ವಜಾ ಮಾಡಿದ್ದು, ಶಾಖಾದ್ರಿಗೆ ಬಂಧನವಾಗುವ ಭೀತಿ ಎದುರಾಗಿದೆ.
ಮೂಡಿಗೆರೆ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ : 7 ಮಂದಿ ಬಂಧನ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೋಗಿಲೆ ಗ್ರಾಮದ ಸಮೀಪವಿರುವ ಪ್ಲಾಂಟೇಶನ್ ಬಳಿ ನಡೆದಿದೆ.
ಇದನ್ನೂ ಓದಿ; SSLC ಪಾಸ್ ಆದವರಿಗೆ ಗುಡ್ ನ್ಯೂಸ್; SSC GD ಕಾನ್ಸ್ ಟೇಬಲ್ ಗೆ ಅರ್ಜಿ ಆಹ್ವಾನ
ಖಚಿತ ಮಾಹಿತಿಯೊಂದಿಗೆ ಬಾನುವಾರ ಬಣಕಲ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಸಾರಥ್ಯದಲ್ಲಿ ಪೊಲೀಸರ ತಂಡದೊಂದಿಗೆ ಇಸ್ಪೀಟ್ ಆಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ದು, ಹಣದೊಂದಿಗೆ ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜಗದೀಶ್, ಕಿರಣ್, ಮೆಹಬೂಬ್, ಮಾಲತೇಶ್, ಅಶೋಕ್, ಸಚ್ಚಿನ್, ದಿಲೀಪ್ ಇದ್ದರು.












