ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಲೋಡ್ ಶೆಡ್ಡಿಂಗ್ ಹಿನ್ನೆಲೆ ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ಬಳಿ ರೈತ ಸಂಘದಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಇದನ್ನೂ ಓದಿ; ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್ ಕಾರ್ಡ್ ರದ್ದು | ಕಾರಣವೇನು?

ರಾಜ್ಯ ಸಂಪೂರ್ಣ ಬರಗಾಲಕ್ಕೆ ತುತ್ತಾಗಿದೆ, ಜಲಾಶಯಗಳಲ್ಲಿ ನೀರಿಲ್ಲ, ಕೃಷಿ ಬೆಳೆಗಳು ರೈತರ ಕೈಗೆ ಸಿಗದೇ ತತ್ತರಿಸಿ ಹೋಗಿದ್ದಾರೆ. ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ರೈತರ ಪಂಪ್ ಸೆಟ್ ಗೆ ಥ್ರಿ ಫೇಸ್ ವಿದ್ಯುತ್ ನೀಡದೆ ವಂಚನೆ ಮಾಡುತ್ತಿದೆ. ನಿರಂತರ ಲೋಡ್ ಶೆಡ್ಡಿಂಗ್ ಮಾಡಿ ದಿನಕ್ಕೆ 2 ಗಂಟೆಯೂ ವಿದ್ಯುತ್ ಸಿಗುತ್ತಿಲ್ಲ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-18.10.2023
ರಾಜ್ಯದಲ್ಲಿ ಸುಮಾರು 40 ಲಕ್ಷ ಕೃಷಿ ಪಂಪ್ ಸೆಟ್ ಬಳಕೆದಾರರು ಇದ್ದು, ಸರ್ಕಾರ ಕೈಗಾರಿಕೆಗಳಿಗೆ ಹಾಗೂ ಐಷಾರಾಮಿ ಬಳಕೆಗೆ ಮಾತ್ರ ವಿದ್ಯುತ್ ಒದಗಿಸುತ್ತಿದೆ. ಕೃಷಿಗೆ ಮಾತ್ರ ವಿದ್ಯುತ್ ಒದಗಿಸದೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ನೀಡಬೇಕು ಎಂದು ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದ್ದರು.
ಸರ್ಕಾರಿ ಕಛೇರಿಯಿಂದಾದ ತಪ್ಪಿಗೆ ಜನರು ಹೊಣೆಗಾರರು ಏಕಾಗಬೇಕು?. ಸಮಸ್ಯೆ ಬಗೆಹರಿಸಲು ಒತ್ತಾಯ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಿದ್ದರೂ ಸಹ ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ತಪ್ಪಾಗಿ ನಮೂದಿಸಿದ್ದಾರೆ, ಈಗ ಗಮನಕ್ಕೆ ತಂದರೆ ಸರಿಪಡಿಸಿಕೊಳ್ಳುತ್ತಿಲ್ಲ, ಇಲಾಖೆಯ ತಪ್ಪಿಗೆ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಆರೋಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಮಹಮ್ಮದ್ ಅಶ್ರಫ್ ಎಂಬುವವರ ಮಗ ಮಹಮ್ಮದ್ ಶಯಾನ್ ಎಂಬುವನ ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಲಾಗಿತ್ತು, ಆ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಮಹಮ್ಮದ್ ಶಯಾನ್ ಬದಲಿಗೆ ಮೊಹಮ್ಮದ್ ಶಯಾನ್ ಎಂದು ನಮೂದಿಸಿದ್ದಾರೆ, ಆ ನಂತರ ಶಾಲೆಯಲ್ಲಿಯೂ ಅದೇ ತಪ್ಪಾದ ಹೆಸರಿನಿಂದ ದಾಖಲಾತಿ ಆಗಿದೆ.












