ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐಸ್ ಕ್ರಿಂ ಬಾಕ್ಸ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರವಾಸೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್ ಕಾರ್ಡ್ ರದ್ದು | ಕಾರಣವೇನು?

16/10/2023 ರಂದು ಮಲ್ಲಂದೂರು ಠಾಣಾ ವ್ಯಾಪ್ತಿಯ ಶಿರವಾಸೆ ಗ್ರಾಮದ ಮಸೀದಿ ಹತ್ತಿರ ಕೆಎ-18-ಸಿ-0581 ನಂಬರಿನ ಆಪೇ ಅಟೋದಲ್ಲಿ ಐಸ್ ಕ್ರಿಂ ಬಾಕ್ಸ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮುಜೀಬ್ ಬಿನ್ ರಹೀಮ್ ಸಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-18.10.2023
ಚಿಕ್ಕಮಗಳೂರು ಕಲ್ಲುದೊಡ್ಡಿ ಶಾಂತಿನಗರ ನಿವಾಸಿಯಾದ ಮುಜೀಬ್ ನನ್ನು ವಶಕ್ಕೆ ಪಡೆದು 5000/- ರೂ ಬೆಲೆಬಾಳುವ 20 ಕೆ.ಜಿ ದನದ ಮಾಂಸವನ್ನು ವಶಪಡಿಸಿಕೊಂಡು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ
ಈ ಕಾರ್ಯಚರಣೆಯಲ್ಲಿ ಮಲ್ಲಂದೂರು ಠಾಣಾ ಪಿ.ಎಸ್.ಐ. ನೇತ್ರಾವತಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
ಸರ್ಕಾರಿ ಕಛೇರಿಯಿಂದಾದ ತಪ್ಪಿಗೆ ಜನರು ಹೊಣೆಗಾರರು ಏಕಾಗಬೇಕು?. ಸಮಸ್ಯೆ ಬಗೆಹರಿಸಲು ಒತ್ತಾಯ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಿದ್ದರೂ ಸಹ ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ತಪ್ಪಾಗಿ ನಮೂದಿಸಿದ್ದಾರೆ, ಈಗ ಗಮನಕ್ಕೆ ತಂದರೆ ಸರಿಪಡಿಸಿಕೊಳ್ಳುತ್ತಿಲ್ಲ, ಇಲಾಖೆಯ ತಪ್ಪಿಗೆ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಆರೋಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಮಹಮ್ಮದ್ ಅಶ್ರಫ್ ಎಂಬುವವರ ಮಗ ಮಹಮ್ಮದ್ ಶಯಾನ್ ಎಂಬುವನ ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಲಾಗಿತ್ತು, ಆ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಮಹಮ್ಮದ್ ಶಯಾನ್ ಬದಲಿಗೆ ಮೊಹಮ್ಮದ್ ಶಯಾನ್ ಎಂದು ನಮೂದಿಸಿದ್ದಾರೆ, ಆ ನಂತರ ಶಾಲೆಯಲ್ಲಿಯೂ ಅದೇ ತಪ್ಪಾದ ಹೆಸರಿನಿಂದ ದಾಖಲಾತಿ ಆಗಿದೆ.












