ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಆಟೋ ಪಲ್ಟಿ

ಮೂಡಿಗೆರೆ:  (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನ ಡಿಕ್ಕಿಯಾಗಿ ಆಟೋ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ಹರೀಶ್ ಪಿಯು ಕಾಲೇಜು ಸಮೀಪ ನಡೆದಿದೆ.

 

ಇದನ್ನೂ ಓದಿ; ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್‌ ಕಾರ್ಡ್‌ ರದ್ದು | ಕಾರಣವೇನು?

ಅಪರಿಚಿತ ವಾಹನ ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಮಗುಚಿ ಬಿದ್ದು ಆಟೋ ನಜ್ಜು ಗುಜ್ಜು ಆಗಿದ್ದು, ಡಿಕ್ಕಿ ಹೊಡೆದ ವಾಹನ ಕಂಟೇನರ್ ಎಂದು ಆಟೋದಲಿದ್ದವರು ತಿಳಿಸಿದ್ದಾರೆ. ಇನ್ನು ಆಟೋದಲಿದ್ದವರು ಪತಿ ಪತ್ನಿಯಾಗಿದ್ದು, ಪತ್ನಿಗೆ ತೀವ್ರ ಪೆಟ್ಟಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಯಿತು.

 

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-18.10.2023

ಡಿಕ್ಕಿ ಹೊಡೆದ ಅಪರಿಚಿತ ವಾಹನ ಬಗ್ಗೆ ಪೊಲೀಸರಿಂದ ತಿಳಿಯಬೇಕಾಗಿದ್ದು, ಮೂಡಿಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಸರ್ಕಾರಿ ಕಛೇರಿಯಿಂದಾದ ತಪ್ಪಿಗೆ ಜನರು ಹೊಣೆಗಾರರು ಏಕಾಗಬೇಕು?. ಸಮಸ್ಯೆ ಬಗೆಹರಿಸಲು ಒತ್ತಾಯ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಿದ್ದರೂ ಸಹ ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ತಪ್ಪಾಗಿ ನಮೂದಿಸಿದ್ದಾರೆ, ಈಗ ಗಮನಕ್ಕೆ ತಂದರೆ ಸರಿಪಡಿಸಿಕೊಳ್ಳುತ್ತಿಲ್ಲ, ಇಲಾಖೆಯ ತಪ್ಪಿಗೆ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಆರೋಪಿಸಿದ್ದಾರೆ.

 

ಕೆಲವು ವರ್ಷಗಳ ಹಿಂದೆ ಮಹಮ್ಮದ್ ಅಶ್ರಫ್ ಎಂಬುವವರ ಮಗ ಮಹಮ್ಮದ್ ಶಯಾನ್ ಎಂಬುವನ ಜನನ ಪ್ರಮಾಣಪತ್ರ ನೀಡಿ ಆಧಾರ್ ಕಾರ್ಡ್ ಮಾಡಿಸಲಾಗಿತ್ತು, ಆ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಮಹಮ್ಮದ್ ಶಯಾನ್ ಬದಲಿಗೆ ಮೊಹಮ್ಮದ್ ಶಯಾನ್ ಎಂದು ನಮೂದಿಸಿದ್ದಾರೆ, ಆ ನಂತರ ಶಾಲೆಯಲ್ಲಿಯೂ ಅದೇ ತಪ್ಪಾದ ಹೆಸರಿನಿಂದ ದಾಖಲಾತಿ ಆಗಿದೆ.

ಪೋಷಕರು ಸರಿಯಾದ ದಾಖಲೆ ನೀಡಿದ್ದರೂ ತಪ್ಪೆಸಗಿ ಈಗ ಅದಕ್ಕೆ ನಾವು ಹೊಣೆಯಲ್ಲ ನೀವೇ ಸರಿ ಮಾಡಿಕೊಳ್ಳಿ ಎಂದು ಉತ್ತರಿಸುತ್ತಿದ್ದಾರೆ, ಇಲಾಖೆಯ ತಪ್ಪಿಗೆ ಜನರು ಏಕೆ ಕಷ್ಟ ಅನುಭವಿಸಬೇಕು, ಅವರ ತಪ್ಪನ್ನು ಅವರೇ ಸರಿಮಾಡಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಪೋಷಕರು ಸಹ ಒತ್ತಾಯಿಸಿದ್ದಾರೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.