ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಪರವಾನಗಿ ಇಲ್ಲದೆ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ.
ಇದನ್ನೂ ಓದಿ; ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ!; ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಿ

ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್ (41) ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂಟಿ ನಳಿಕೆಯ ಒಂದು ನಾಡ ಬಂದೂಕು ಹಾಗೂ 12 ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ
ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ; ರಾಜ್ಯದ ರೈತರೇ ಗಮನಿಸಿ; ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಗೆ ದಿನಾಂಕ ವಿಸ್ತರಣೆ
ಬಾಳೆಹೊನ್ನೂರು: ಪ್ರಧಾನಿ ಮೋದಿಗಾಗಿ 102 ವರ್ಷದ ಶತಾಯುಷಿ ಅಜ್ಜಿಯ ಟೆಂಪಲ್ ರನ್
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಶಿವಮ್ಮ ಎಂಬ 102 ವರ್ಷದ ಅಜ್ಜಿ ಪ್ರಧಾನಿ ಮೋದಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಇದನ್ನೂ ಓದಿ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಇಲ್ಲ ಫ್ರೀ ಕರೆಂಟ್
ಜೈ ಶ್ರೀರಾಮ್… ದೇಶಕ್ಕೆ ಒಳ್ಳೆದಾಗಬೇಕು, ಮಳೆ-ಬೆಳೆ ಚೆನ್ನಾಗಿ ಆಗಬೇಕು. ಮೋದಿ ಮತ್ತೆ ಪ್ರಧಾನ ಮಂತ್ರಿ ಆಗಬೇಕು. ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ ಎನ್ನುತ್ತಾ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ; ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು; ಟೋಪಿಯಲ್ಲಿದ್ದ ಕೂದಲಿನಿಂದ ಸಿಕ್ಕಿತು ಮಹತ್ವದ ಸುಳಿವು
ರಂಭಾಪುರಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದ ಶಿವಮ್ಮ ಮಳೆ-ಬೆಳೆ ಇಲ್ಲ, ದೇಶದ ಜನ ಸಮಸ್ಯೆಯಲ್ಲಿದ್ದಾರೆ. ಕಾಡು ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿವೆ. ದೇಶಕ್ಕೆ ಮೋದಿ ಪ್ರಧಾನಿಯಾದರೆ ಮಳೆ-ಬೆಳೆ ಆಗಿ ದೇಶ ಸುಭಿಕ್ಷವಾಗಿರುತ್ತೆ. ನನ್ನ ಸ್ವಾರ್ಥಕ್ಕಾಗಿ ಏನೂ ಇಲ್ಲ… ಸ್ವಾರ್ಥಕ್ಕೆ ಹೇಳ್ತಿಲ್ಲ. ದೇವರ ಬಳಿ ನನಗಾಗಿ ಏನನ್ನು ಕೇಳಿಕೊಂಡಿಲ್ಲ, ದೇಶ, ಮೋದಿಗಾಗಿ ಬೇಡಿದ್ದೇನೆ ಎಂದು ಮೋದಿಗಾಗಿ ಮಗನ ಜೊತೆ ದೇವಾಲಯಗಳನ್ನ ಸುತ್ತುತ್ತಿರೋ ಶಿವಮ್ಮ ಹೇಳಿದ್ದಾರೆ.
ಇದನ್ನೂ ಓದಿ; ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಲು ಅರ್ಜಿ ಆಹ್ವಾನ!; ಕೂಡಲೇ ಅರ್ಜಿ ಸಲ್ಲಿಸಿ
ಮಲೆಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿದ್ದ ಶಿವಮ್ಮ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಆಗಮಿಸಿದ್ದಾರೆ.












