ಚಿಕ್ಕಮಗಳೂರು: ಹುಲಿ ಮತ್ತು ಆನೆ ಕಾರಿಡಾರ್ ವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ಯತ್ನ | 6 ಜನರಿಗೆ ನೋಟಿಸ್ ಜಾರಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಾಬಾ ಬುಡನ್ ಗಿರಿ ಮತ್ತು ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಭದ್ರಾ ಹುಲಿ ಸಂರಕ್ಷಿತ ಮತ್ತು ಕಾಮೇನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯ ಬಫರ್ ಜೋನಿಗೆ ಹೊಂದಿಕೊಂಡಂತೆ ಲೇಔಟ್ ನಿರ್ಮಾಣಕ್ಕೆ ಮುಂದಾಗಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದ್ದು, ನಕ್ಷೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

 

ಇದನ್ನೂ ಓದಿ; ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ

ಈ ಕುರಿತು ಆರು ಜನರಿಗೆ ನೋಟಿಸ್ ಜಾರಿ:
ಕೆಎಫ್ ಕಾಫಿ ಬೈದಿ ಸ್ಟ್ರೀಮ್ ಎಲ್‌ಎಲ್‌ಪಿ ಪಾಲುದಾರ ಎಂ. ಎನ್ .ಆದಿತ್ಯ, ಎಂ. ಎಸ್. ಜಯರಾಮ್, ಐಬಿಪಿ ಸಂಸ್ಥೆ ಜಿಪಿಎ ಪಡೆದಿರುವ ವಿ.ಬಾರಾಟೋ, ಅಭಿಷೇಕ್ ಜಿಂದಾಲ್,ಎಸ್. ಕೆ .ಮಹೇಂದ್ರ ಇವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಕಂದಾಯ ಉಪವಿಭಾಗಾಧಿಕಾರಿಗಳ ವರದಿಯನ್ನು ಆಧರಿಸಿ ಈ ಆರು ಜನರಿಗೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿಗಳು ಈ ಕುರಿತು ಉತ್ತರಿಸಲು ಏಳು ದಿನಗಳ ಗಡುವು ನೀಡಿದ್ದಾರೆ.

ಇದನ್ನೂ ಓದಿ; ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490

ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಲು ಯತ್ನ:
ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಚಿಕ್ಕಮಗಳೂರು ತಾಲೂಕು ಜಾಗರ ಹೋಬಳಿ ಗೋಣಕ್ಕಲ್ ಮತ್ತು ಮೇಲು ಹುಲುವತ್ತಿಯ ಸುಮಾರು 242 ಎಕರೆ ಪ್ರದೇಶದಲ್ಲಿ ತುಂಡು ಭೂಮಿ ವಿಭಜಿಸಿ ಲೇಔಟ್ ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಲು ಯತ್ನಿಸಿರುವ ಆರೋಪ ದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ಸಮರ್ಪಕ ದಾಖಲೆಗಳೊಂದಿಗೆ ಸಮಜಾಯಿಸಿ ನೀಡದೆ ಇದ್ದಲ್ಲಿ ಭೂಸುಧಾರಣೆ ಕಾಯ್ದೆಯ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

ಇದನ್ನೂ ಓದಿ;  ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ PM KISAN ಮೊತ್ತ ಏರಿಕೆ

ಈ ಹಿಂದೆ ಶ್ರೀಮಂತ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ.

 

ಜಯಪುರ: ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ಅರೆಸ್ಟ್

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಸರೀಕಟ್ಟೆಯ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ನನ್ನು ಗ್ರಾಮಸ್ಥರೇ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ಶನಿವಾರ ಶ್ರೀ ಸದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಶ್ರೀ ಸದ್ಗುರು ವಿದ್ಯಾ ಮಂದಿರದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲು ಬಂದಿದ್ದ ಬೆಳ್ತಂಗಡಿ ಮೂಲದ ಯೂಟ್ಯೂಬರ್ ಶರತ್ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿ, ಶಾಲೆಯಲ್ಲಿ ಉಳಿದುಕೊಂಡಿದ್ದ.

ಇದನ್ನೂ ಓದಿ; ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ?, ಕೊನೆಯ ದಿನಾಂಕ ಯಾವಾಗ?

ಶನಿವಾರ ಮದ್ಯ ರಾತ್ರಿ ಶಾಲೆಯ ರೂಮಿನ ಬೀಗ ಮುರಿದು ಒಳ ಪ್ರವೇಶಿಸಿ, ಬೀರುವಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಉಂಟಾದ ಶಬ್ಧ ಆಲಿಸಿದ ಹತ್ತಿರದ ಮನೆಯಲ್ಲಿ ವಾಸವಿದ್ದ ಸಿಬ್ಬಂದಿ ರಾಕೇಶ್ ಹಾಗೂ ಅವರ ಪತ್ನಿ ಭವ್ಯ ಆರೋಪಿಯನ್ನು ಹಿಡಿದು, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ;  ರೈತರೇ ಗಮನಿಸಿ; ಬರ ಪರಿಹಾರ ಪಡೆಯಲು ಜಸ್ಟ್ ಈ ಕೆಲಸ ಮಾಡಿ

ಘಟನೆ ಮಾಹಿತಿ ಪಡೆದ ಜಯಪುರ ಪಿಎಸೈ ಅಂಬರೀಶ್ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.