ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜಿ.ಕಾರೆಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಚಿರತೆ ಬಿದ್ದಿದೆ.

ಹಲವಾರು ದಿನಗಳಿಂದ ಸ್ಥಳೀಯರಿಗೆ ಭಯ ಉಂಟು ಮಾಡಿದ್ದ ಚಿರತೆ, ಜಿ.ಕಾರೆಹಳ್ಳಿ, ಗೆದ್ಲೆಹಳ್ಳಿ, ಪೊಲೀಸ್ ತರಬೇತಿ ಶಾಲೆ ಬಳಿ ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿ.ಕಾರೆಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಚಿರತೆ ಬಿದ್ದಿದೆ.
ಇದನ್ನೂ ಓದಿ: ಎಲ್ಲಾ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್; HSRP ನಂಬರ್ ಪ್ಲೇಟ್ ನಿಯಮ ಚೇಂಜ್












