ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಡಿ.ಸಿ.ಸಿ ಬ್ಯಾಂಕ್ ನ ನೂತನ ಉಪಾಧ್ಯಕ್ಷರಾಗಿ ಶೃಂಗೇರಿಯ ಬೇಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ ಶಂಕರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಡಿ.ಸಿ.ಸಿ ಬ್ಯಾಂಕ್ ನಲ್ಲಿ ನಡೆದ ಚುನಾವಣೆಯಲ್ಲಿ ಡಿ.ಸಿ ಶಂಕರಪ್ಪ ಆಯ್ಕೆಯಾಗಿದ್ದಾರೆ ಎಂದು ಉಪವಿಬಾಗಾಧಿಕಾರಿ ಎಚ್.ಡಿ ರಾಜೇಶ್ ಘೋಷಿಸಿದರು.

ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಂಕರಪ್ಪ ಮಾತನಾಡಿ, ಬ್ಯಾಂಕ್ ನ ಅಭಿವೃದ್ಧಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುವುದಾಗಿ ತಿಳಿಸಿದರು. ರೈತರಿಗೆ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡುವ ಭರವಸೆಯನ್ನು ನೀಡಿದರು. ಹಾಗೂ ತಮ್ಮನ್ನು ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ; NTPC ನಲ್ಲಿ ಉದ್ಯೋಗಾವಕಾಶ; 100 ಹುದ್ದೆಗಳಿಗೆ ಅರ್ಜಿ ಆಹ್ವಾನ; 50,000 ದಿಂದ 1,60,000 ವರೆಗೆ ವೇತನ
ಇದೇ ವೇಳೆ ಡಿ.ಸಿ ಶಂಕರಪ್ಪಗೆ ಬ್ಯಾಂಕ್ ನ ಅಧ್ಯಕ್ಷ ತರೀಕೆರೆ ಮಾಜಿ ಶಾಸಕ ಡಿ.ಎಸ್ ಸುರೇಶ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.
ಮೂಡಿಗೆರೆ: 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಯುವಕ | ಪ್ರಪಾತದಿಂದ ಮೇಲಕ್ಕೆ ತರಲು ಎರಡು ದಿನ ಹರಸಾಹಸ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ಪ್ರಪಾತದಿಂದ ಮೇಲಕ್ಕೆ ತರಲಾಗಿದೆ.
ನಿನ್ನೆ ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ ನಿನ್ನೆ ಹರಸಾಹಸಪಟ್ಟು ಮೃತದೇಹವನ್ನ ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತದೇಹವನ್ನ ತರೋದು ಅಷ್ಟು ಸುಲಭವಲ್ಲ. ಆದರೆ, 25 ಜನರ ತಂಡ ಸುಮಾರು 5 ಕಿ.ಮೀ. ಮೃತದೇಹವನ್ನ ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.
ಇದನ್ನೂ ಓದಿ; ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್; ಡಿಪ್ಲೋಮಾ, ಪದವೀಧರರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ಇನ್ನು ರಾಣಿಝರಿ ವ್ಯೂ ಪಾಯಿಂಟ್ ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ.ಮೀ. ಆಗಲಿದೆ. 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ಸಾಲದಕ್ಕೆ ದಟ್ಟಕಾನನ ತಂಪಾದ ವಾತಾವರಣಕ್ಕೆ ಕೊಳೆತು ಹೋಗಿತ್ತು. ಆದರೂ, ಮೃತದೇಹವನ್ನ ಹೊತ್ತುಕೊಂಡು ಬೆಟ್ಟ ಹತ್ತಿ ಮೃತದೇಹವನ್ನ ಮೇಲಕ್ಕೆ ತಂದಿದ್ದಾರೆ.
ಘಟನೆ ವಿವರ:
ಡಿಸೆಂಬರ್ 6 ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂರು ದಿನಗಳ ಬಳಿಕ ಅವರ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಲು ಮುಂದಾಗಿದ್ದರು. ಬೆಂಗಳೂರಿನಲ್ಲಿ ಎಂ.ಎನ್.ಸಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಈ ಕಾರ್ಯಾಚರಣೆಯಲ್ಲಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ, ಸ್ಥಳೀಯರು, ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕ, ಸಮಾಜ ಸೇವಕ ಅರಿಫ್, ಹಾಗೂ ಬಣಕಲ್ ನ ಸಮಾಜ ಸೇವಕರ ತಂಡ ಇದ್ದರು.












