ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಕಾಂಗ್ರೆಸ್ ಎಸ್ ಟಿ ಸೆಲ್ ನ ಅಧ್ಯಕ್ಷರಾಗಿ ಚಂದವಳ್ಳಿ ವಿಶ್ವನಾಥ್ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಬಾಳೂರು ಹೋಬಳಿ ಅಧ್ಯಕ್ಷರಾದ ಶ್ರೀನಾಥ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಬಡವರ ಪಾಲಿಗೆ ಹೆಚ್ಚಿನ ಸೌಕರ್ಯ ಒದಗಿಸುವಲ್ಲಿ ಯಶಸ್ವಿ ಆಗಿದೆ. ಸಮಬಾಳು ಸಮಪಾಲು ಎನ್ನುವ ಸಿದ್ದಾಂತದ ಪ್ರಕಾರ ಎಲ್ಲಾ ಜನಾಂಗದ ಜನರಿಗೆ ಅವರ ಸಾಮರ್ಥ್ಯದಂತೆ ಆಯಾ ಭಾಗದಲ್ಲಿ ಹುದ್ದೆಯನ್ನು ನೀಡಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಲೋಕಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತರಬೇಕೆಂದು ತಿಳಿಸಿದರು.
ಇದನ್ನೂ ಓದಿ; NTPC ನಲ್ಲಿ ಉದ್ಯೋಗಾವಕಾಶ; 100 ಹುದ್ದೆಗಳಿಗೆ ಅರ್ಜಿ ಆಹ್ವಾನ; 50,000 ದಿಂದ 1,60,000 ವರೆಗೆ ವೇತನ
kC ರವಿ ಗೌಡ್ರು ತಾಲ್ಲೂಕು ಉಪಾಧ್ಯಕ್ಷರು, ಕೂವೆ ಘಟಕ ಅಧ್ಯಕ್ಷರಾದ ನವೀನ್ ಗೌಡ್ರು, ಎಚ್ ಅರ್ ಚಂದ್ರಣ್ಣ, ನಿಡುವಾಳೆ ಭೂತ್ ಘಟಕ ಅಧ್ಯಕ್ಷರು ದೀವಕರ್ ಗೌಡ್ರು, ಬಾಳೂರು ಮಹೇಶ್, ರವಿ ವಾಟೇಖಾನ್, ಹರೀಶ್ ಆಚಾರ್, ಲಕ್ಷ್ಮಣ್ ಕೂವೆ ಪೌಸ್ಥಿನ್, ಬಿರ್ಗೂರ್ ಶಿವಣ್ಣ ಗೌಡ್ರು, ಮುನ್ನ ಚಂದವಳ್ಳಿ, st ಸೆಲ್ಲಿನ ಅಧ್ಯಕ್ಷರು ಹರೀಶ್ ಮೂಡಿಗೆರೆ ಇದ್ದರು.
ಮೂಡಿಗೆರೆ: 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಯುವಕ | ಪ್ರಪಾತದಿಂದ ಮೇಲಕ್ಕೆ ತರಲು ಎರಡು ದಿನ ಹರಸಾಹಸ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ಪ್ರಪಾತದಿಂದ ಮೇಲಕ್ಕೆ ತರಲಾಗಿದೆ.
ಶನಿವಾರ ಸಂಜೆ ವೇಳೆಯೇ ಮೃತದೇಹ ಪತ್ತೆಯಾಗಿದ್ದರು ದಟ್ಟಕಾನನ, ಕಾಡುಪ್ರಾಣಿಗಳ ಕಾಟ, ಕತ್ತಲಲ್ಲಿ 4 ಸಾವಿರ ಅಡಿ ಪ್ರಪಾತದಿಂದ ಮೃತದೇಹ ಹೊರತರೋದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿಗಳು ಸೇರಿದಂತೆ ಸ್ಥಳಿಯರು ಕಾರ್ಯಾಚರಣೆಯನ್ನ ನಿಲ್ಲಿಸಿದ್ದರು.
ನಿನ್ನೆ ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ ನಿನ್ನೆ ಹರಸಾಹಸಪಟ್ಟು ಮೃತದೇಹವನ್ನ ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತದೇಹವನ್ನ ತರೋದು ಅಷ್ಟು ಸುಲಭವಲ್ಲ. ಆದರೆ, 25 ಜನರ ತಂಡ ಸುಮಾರು 5 ಕಿ.ಮೀ. ಮೃತದೇಹವನ್ನ ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.
ಇದನ್ನೂ ಓದಿ; ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್; ಡಿಪ್ಲೋಮಾ, ಪದವೀಧರರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ಇನ್ನು ರಾಣಿಝರಿ ವ್ಯೂ ಪಾಯಿಂಟ್ ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ.ಮೀ. ಆಗಲಿದೆ. 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ಸಾಲದಕ್ಕೆ ದಟ್ಟಕಾನನ ತಂಪಾದ ವಾತಾವರಣಕ್ಕೆ ಕೊಳೆತು ಹೋಗಿತ್ತು. ಆದರೂ, ಮೃತದೇಹವನ್ನ ಹೊತ್ತುಕೊಂಡು ಬೆಟ್ಟ ಹತ್ತಿ ಮೃತದೇಹವನ್ನ ಮೇಲಕ್ಕೆ ತಂದಿದ್ದಾರೆ.
ಘಟನೆ ವಿವರ:
ಡಿಸೆಂಬರ್ 6 ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂರು ದಿನಗಳ ಬಳಿಕ ಅವರ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಲು ಮುಂದಾಗಿದ್ದರು. ಬೆಂಗಳೂರಿನಲ್ಲಿ ಎಂ.ಎನ್.ಸಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಈ ಕಾರ್ಯಾಚರಣೆಯಲ್ಲಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ, ಸ್ಥಳೀಯರು, ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕ, ಸಮಾಜ ಸೇವಕ ಅರಿಫ್, ಹಾಗೂ ಬಣಕಲ್ ನ ಸಮಾಜ ಸೇವಕರ ತಂಡ ಇದ್ದರು.












