ಮೂಡಿಗೆರೆ: ಹುಲಿ ಉಗುರು ಪ್ರಕರಣ; ಅರ್ಚಕರ ಬಂಧನಕ್ಕೆ ಬಿಜೆಪಿ ಮೂಡಿಗೆರೆ ಮಂಡಲ ಅಧ್ಯಕ್ಷ ಖಂಡನೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇತಿಹಾಸ ಪ್ರಸಿದ್ಧ ಖಾಂಡ್ಯಾ ಮಾರ್ಕಂಡೇಶ್ವರ ದೇವಸ್ಥಾನದ ಅರ್ಚಕರ ಬಂಧನವನ್ನು ಖಂಡಿಸಿ ಬಿಜೆಪಿ  ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್. ರಘು ಜನ್ನಾಪುರ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಈ ದಿನ ಬರಲಿದೆ; ಅರ್ಜಿ ಸಲ್ಲಿಸುವುದು ಹೇಗೆ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಅರ್ಚಕರನ್ನು ಅರಣ್ಯ ಇಲಾಖೆ ಬಂಧಿಸಿರುವುದು ಖಂಡನೀಯವಾಗಿದ್ದು ಇದು ಈ ಭಾಗದ ಶಾಸಕರು ಮತ್ತು ಸರ್ಕಾರದ ವೈಫಲ್ಯವಾಗಿದೆ. ಹುಲಿ ಉಗುರು ಧರಿಸುವುದರಿಂದ ಕೆಲವು ಗ್ರಹಚಾರಗಳು. ಕ್ಷುದ್ರ ಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಇದ್ದು. ಕಾನೂನು ಅರಿವು ಇಲ್ಲದೆ ಧರಿಸಿದ್ದರು. ಜನರಿಗೆ ಕಾನೂನು ಅರಿವು ಮೂಡಿಸುವ ಬದಲು, ಕಾನೂನು ಅರಿವಿಲ್ಲದೇ ಹುಲಿ ಉಗುರು ಧರಿಸಿದವರನ್ನು ಅರಣ್ಯ ಇಲಾಖೆ ಭಯೋತ್ಪಾದಕರ ರೀತಿ ನಡೆಸಿಕೊಂಡು ಜೈಲಿಗೆ ತಳ್ಳುವಂತಹ ಕೆಲಸ ಮಾಡುತ್ತಿದೆ. ಖಾಂಡ್ಯಾ ದೇವಸ್ಥಾನದ 71 ವರ್ಷದ ವೃದ್ಧ ಅರ್ಚಕರು ಸೇರಿದಂತೆ ಇಬ್ಬರು ಅರ್ಚಕರರಿಗೆ ಯಾವುದೇ ನೋಟಿಸ್ ಅಥವಾ ತಿಳುವಳಿಕೆ ನೀಡದೆ ಹುಲಿಯನ್ನೇ ಕೊಂದಿದ್ದಾರೆ ಎಂಬ ರೀತಿಯಲ್ಲಿ ನೇರವಾಗಿ ಜೈಲಿಗೆ ಹಾಕಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಹಾಲಿ ಶೃಂಗೇರಿ ಕ್ಷೇತ್ರದ ಶಾಸಕರ ಮನೆದೇವರು ಕೂಡ ಇದೆ ಮಾರ್ಕಂಡೇಶ್ವರನಾಗಿದ್ದು ಅವರು ಮತ್ತು ರಾಜ್ಯ ಸರ್ಕಾರದ ವೈಫಲ್ಯ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ

 

ಹಾಗೆಯೇ ಸತೀಶ್ ಮತ್ತು ರಂಜಿತ್ ಎಂಬುವವರು ಹುಲ್ಲೆಮನೆ ಕುಂದೂರಿನಲ್ಲಿ ಆನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಮತ್ತು ಅಂದು ಜಾಮೀನು ಪಡೆದಿದ್ದರು ಎಂಬ ಕಾರಣಕ್ಕೆ ಹುಲಿ ಉಗುರನ್ನು ಧರಿಸಿದ ನೆಪದಲ್ಲಿ ಇಬ್ಬರನ್ನು ಸ್ಥಳಿಯ ಅರಣ್ಯ ಅಧಿಕಾರಿಗಳು ಸೇಡು ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸಾರ್ಗೋಡು ಮೀಸಲು ಅರಣ್ಯದಲ್ಲಿ ಆರು ತಿಂಗಳ ಹಿಂದೆ ವನಪಾಲಕರೊಬ್ಬರ ಮದುವೆಯ ದಿನ ಸುಮಾರು 30ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಳ್ಳತನ ಮಾಡಲಾಗಿದ್ದು. ಅದನ್ನು ತನಿಖೆ ನಡೆಸಿ ಅಪರಾಧಿಗಳನ್ನು ಹಿಡಿಯುವ ಬದಲು. ಅದನ್ನು ಮುಚ್ಚಿ ಹಾಕಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂಬು ದೂರುಗಳು ಕೇಳಿಬರುತ್ತಿವೆ. ಅರವಿಲ್ಲದೇ ಹುಲಿ ಉಗುರು ಧರಿಸಿದವರನ್ನು ಬಂಧಿಸುವಂತಹ ಕೃತ್ಯ ಮುಂದಿನ ದಿನಗಳಲ್ಲಿ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ತಿಕ್ಕಾಟಕ್ಕೆ ಕಾರಣವಾಗಲಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಅಮಾಯಕರ ಬಂಧನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

 

ಹುಲಿ ಉಗುರು ಹೊಂದಿದ್ದ ಆರೋಪ: ಎನ್ ಆರ್ ಪುರದಲ್ಲಿ DRFO ದರ್ಶನ್ ಅರೆಸ್ಟ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದರಲ್ಲಿ ಕಳಸದ ಅರಣ್ಯಾಧಿಕಾರಿಯೊಬ್ಬ ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

 

ಡಿ.ಆರ್.ಎಫ್.ಓ ದರ್ಶನ್ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿ.ಎಫ್.ಓ ನಂದೀಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರಿನ ಡಾಲರ್  ಧರಿಸಿದ ಆರೋಪ ಕೇಳಿಬಂದಿತ್ತು. ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್‌ಎಫ್‌ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿತ್ತು. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಕೂಡ ಮಾಡಿದ್ದ.

ಕಾನೂನು ಎಲ್ಲರಿಗೂ ಒಂದೇ ಸಂತೋಷ್, ಮಾರ್ಕಂಡೇಯ ದೇವಸ್ಥಾನದ ಅರ್ಚಕರು ಸೇರಿದಂತೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯವರು ಆರ್‌ಎಫ್‌ಒ ದರ್ಶನ್ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರ ಸುಪ್ರೀತ್ ಈ ಬಗ್ಗೆ ತಿಳಿಸಿದ್ದ ಬೆನ್ನಲ್ಲೆ ನಿನ್ನೆ ನ್ಯೂಸ್ ಮಲ್ನಾಡ್ ವರದಿ ಕೂಡ ಮಾಡಿತ್ತು ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.